26ಕ್ಕೆ ಡಾ. ಶಿವರಂಜನ್ ಸತ್ಯಂಪೇಟೆ ಸೇರಿ 15 ಸಾಹಿತಿಗಳಿಗೆ ಬಸವ ಪುರಸ್ಕಾರ

0
62

ಕಲಬುರಗಿ : ಪತ್ರಕರ್ತ, ಲೇಖಕ ಡಾ. ಡಾ. ಶಿವರಂಜನ್ ಸತ್ಯಂಪೇಟೆ ಸೇರಿದಂತೆ 15 ಜನರಿಗೆ ಬಸವ ಪುರಸ್ಕಾರ ನೀಡಲಾಗಿದೆ ಎಂದು ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ್ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಅವರು ತಿಳಿಸಿದ್ದಾರೆ.

ತಾಲೂಕಿನ ಪಾಳಾ ಗ್ರಾಮದ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ್ ಟ್ರಸ್ಟ್  ಆಯೋಜಿಸಿರುವ 3 ನೇ ವರ್ಷದ ಬಸವ ಪುರಸ್ಕಾರ ಪ್ರದಾನ ಸಮಾರಂಭವು ಇದೇ ಜುಲೈ 26 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ   ಆವರಣದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಕಾರ್ಯಕ್ರಮವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಬಸವರಾಜ ಡೋಣೂರ ಅವರು ಉದ್ಘಾಟಿಸಲಿದ್ದು, ಕಲಬುರಗಿ ವಿವಿಯ ಕುಲಪತಿಗಳಾದ ದಯಾನಂದ ಅಗಸರ್ ಅವರು ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಗುಲಬರ್ಗಾ ವಿವಿಯ  ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಎಚ್.ಟಿ. ಪೋತೆ ಅವರು ವಹಿಸಿಕೊಳ್ಳಲಿದ್ದು, ಈ ವೇಳೆ ಅತಿಥಿಗಳಾಗಿ ಸಾಹಿತಿ ಬಿ.ಎಚ್. ನಿರಗುಡಿ ಅವರು ಉಪಸ್ಥಿತರಿರಲಿದ್ದಾರೆಂದು ತಿಳಿಸಿದ್ದಾರೆ.

ಹಿರಿಯ ಸಾಹಿತಿಗಳಾದ ರಂಗಾರೆಡ್ಡಿ ಕೋಡಿರಾಂಪುರ, ಎಚ್.ಟಿ ಪೋತೆ, ಸಿದ್ದರಾಮ ಹೊನ್ಕಲ್, ಶಶಿಕಲಾ ನಾಡಗೌಡ, ಪದ್ಮಾಕರ ಅಶೋಕ ಕುಮಾರ ಮಟ್ಟಿ ಅವರಿಗೆ ರಾಷ್ಟ್ರೀಯ ಬಸವ ಪುರಸ್ಕಾರ ಪ್ರದಾನ ಮಾಡಲಿದ್ದು,  ಲಿಂಗಾರೆಡ್ಡಿ ಶೇರಿ, ವೆಂಕಟೇಶ. ಕೆ. ಜನಾದ್ರಿ, ಅಬ್ಬಾಸ್ ಆಲಿ ಎ. ನದಾಫ್, ಡಾ. ಶಿವರಂಜನ್ ಸತ್ಯಂಪೇಟೆ, ಶರಣಮ್ಮ ಬಿ. ಪಾಟೀಲ್ ಅವರನ್ನು ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ,  ಅಜಿತ್ ಹರೀಶಿ, ನಿಂಗನಗೌಡ ದೇಸಾಯಿ, ಲಕ್ಷ್ಮಿಕಾಂತ ಮಿರಜಕರ, ಗುರುದೇವಿ ಹುಲೆಪ್ಪನವರಮಠ, ಎ.ಎನ್ ರಮೇಶ್ ಗುಬ್ಬಿ ಅವರಿಗೆ ಇದೆ ವೇಳೆ  ರಾಜ್ಯ ಬಸವ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಶರಣಗೌಡ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ಸಾಹಿತಿ ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಲಿದ್ದು, ಶಿವಶಂಕರ ಬಿರಾದಾರ ವಚನ ಗೀತೆ ಹಾಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here