ಸುರಪುರ: ನಗರಕ್ಕೆ ಕೃಷ್ಣಾ ನದಿಯಿಂದ ಸರಬರಾಜಾಗುತ್ತಿರುವ ನೀರು ತುಂಬಾ ಕಲುಷಿತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ.ಇಂತಹ ನೀರನ್ನು ನಗರಸಭೆ ಸರಬರಾಜು ಮಾಡುತ್ತಿರುವುದು ಬೇಸರದ ಸಂಗತಯಾಗಿದೆ ಎಂದು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಳೆಗಾಲವಾಗಿದ್ದರಿಂದ ಜನರು ಅನೇಕ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಈಗ ಕಲುಷಿತ ನೀರು ಸರರಾಜು ಮಾಡುವುದರಿಂದ ಜನರು ಅದೇ ನೀರನ್ನು ಕುಡಿಯುವ ಅನಿವಾರ್ಯವಿದೆ.ಇದರಿಂದ ಜನರು ಕಾಲರಾದಂತಹ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ.
ಆದ್ದರಿಂದ ಕುಂಬಾರಪೇಟೆಯಲ್ಲಿರುವ ಜಲಶುದ್ಧೀಕರಣ ಘಟಕದ ಮೂಲಕ ನೀರು ಶುದ್ಧೀಕರಿಸಿ ಸರಬರಾಜು ಮಾಡಬೇಕು.ಇಲ್ಲವಾದಲ್ಲಿ ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.