ಕನ್ನಡ ಸಾಹಿತ್ಯ ಸಂಘ ರಾಜಾ ಮದನಗೋಪಾಲ ನಾಯಕರ ಪ್ರಥಮ ಪುಣ್ಯಸ್ಮರಣೆ

0
50

ಸುರಪುರ: ನಗರದ ಬಸ್ ನಿಲ್ದಾಣದ ಬಳಿಯಲ್ಲಿರುವ ಕನ್ನಡ ಸಾಹಿತ್ಯ ಸಂಘದ ರಾಜಾ iದನಗೋಪಾಲ ನಾಯಕ ಸ್ಮಾರಕ ಭವನದಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗು ಕನ್ನಡ ಸಾಹಿತ್ಯ ಸಂಘದ ವೆಬ್‌ಸೈಟ್ ಉದ್ಘಾಟನೆ ಜೊತೆಗೆ ಕೊರೊನಾ ವಾರಿಯರ್ಸ್‌ಗಳ ಸನ್ಮಾನ ಕಾರ್ಯಕ್ರಮ ಆಚರಿಸಲಾಯಿತು.

ಮಂಗಳವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎಲ್ಲರು ಪುಷ್ಪಾರ್ಚನೆ ನಡೆಸಿದರು.ನಂತರ ತರಂಗಾಂತರದ (ಆನ್‌ಲೈನ್) ಮೂಲಕ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೋಯ್ಲಿಯವರು ಕನ್ನಡ ಸಾಹಿತ್ಯ ಸಂಘದ ವೆಬ್‌ಸೈಟ್ ಉದ್ಘಾಟಿಸಿದರು.

Contact Your\'s Advertisement; 9902492681

ಅಲ್ಲದೆ ರಾಜಾ ಮದನಗೋಪಾಲ ನಾಯಕರ ಕುರಿತು ಎಂ.ವೀರಪ್ಪ ಮೋಯ್ಲಿಯವರು ಮಾತನಾಡಿ,ರಾಜಾ ಮದನಗೋಪಾಲ ನಾಯಕರು ಒಬ್ಬ ಉತ್ತಮ ರಾಜಕೀಯಪಟುವಾಗಿದ್ದವರು ಮತ್ತು ಕಲೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ವ್ಯಕ್ತಿಯಾಗಿದ್ದರು.

ಅಂತಹ ಒಬ್ಬ ಮುತ್ಸದ್ದೀಯ ನೆನಪಿನ ದಿನದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ವೆಬ್‌ಸೈಟ್‌ನ್ನು ಇಂದು ಲೋಕಾರ್ಪಣೆಗೊಳಿಸುತ್ತಿರುವುದು ಸಂತಸದ ಸಂಗತಿಯಾಗಿದೆ.ಯಾಕೆಂದರೆ ಸುರಪುರ ಎನ್ನುವ ಹೆಸರು ಐತಿಹಾಸಿಕದ ಅನೇಕ ಸಂಗತಿಗಳನ್ನು ನೆನಪಿಸುವಂತದ್ದು,ಅಲ್ಲಿಯ ಅರಸರ ಶೂರ ಸಾಹಸ,ಅಲ್ಲಿಯ ಕಲೆ ಸಾಂಸ್ಕೃತಿ ಹಾಗು ಮೆಡಸ್ ಟೇಲರ್ ನೀಡಿದ ಆಡಳಿತ ಎಲ್ಲವು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತವು.ಅಂತಹ ಅನೇಕ ಸಂಗತಿಗಳುಳ್ಳ ವೆಬ್‌ಸೈಟ್ ನಾನು ಉದ್ಘಾಟಿಸುವಂತೆ ಜೆ.ಅಗಸ್ಟಿನ್ ಅವರು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡಿರುವೆ ಎಂದು ತಿಳಿಸಿದರು.

ವೇದಿಕೆ ಮೇಲೆ ರಾಜಾ ಮದನಗೋಪಾಲ ನಾಯಕರ ಸುಪುತ್ರ ರಾಜಾ ವಿಷ್ಣುವರ್ಧನ ನಾಯಕ ಇದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ನಮ್ಮ ಸುರಪುರ ಇತಿಹಾಸದ ಎಲ್ಲಾ ನೆನಪುಗಳನ್ನು ವೆಬ್‌ಸೈಟ್‌ಲ್ಲಿ ದಾಖಲಿಸುವ ಕೆಲಸ ಹಿಂದೆ ರಾಜಾ ಮದನಗೋಪಾಲ ಅವರ ಕನಸಾಗಿತ್ತು,ನಮಗೆ ಅನೇಕ ಬಾರಿ ಕೊರೊನಾ ಸಂದರ್ಭದಲ್ಲಿ ಕರೆ ಮಾಡಿ ಕೊರೊನಾ ಸ್ಥಿತಿಗತಿಯ ಬಗ್ಗೆ ಕೇಳುತ್ತಿದ್ದರು,ಅಲ್ಲದೆ ನಮಗೆಲ್ಲರಿಗು ಶ್ರೇಯಸ್ಸನ್ನು ಬಯಸುತ್ತಿದ್ದರು.ಆದರೆ ದುರಾದೃಷ್ಟದ ಸಂಗತಿ ಕೊರೊನಾ ದಿಂದ ನಾವು ಅವರನ್ನೆ ಕಳೆದುಕೊಂಡೆವು ಎಂದರು.ಅಲ್ಲದೆ ಇಂದು ಅನೇಕರು ಮೊಬೈಲ್ ಮಾಯೆಯಿಂದ ಕಲೆ ಸಾಹಿತ್ಯದ ಅಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ,ಇದು ಉತ್ತಮವಾದ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನಂತರ ಕಾರ್ಯಕ್ರಮದ ಕುರಿತು ಹಾಗು ಕನ್ನಡ ಸಾಹಿತ್ಯ ಸಂಘ ಬೆಳೆದು ಬಂದ ಪರಿಯನ್ನು ಕುರಿತು ನ್ಯಾಯವಾದಿ ಜೆ.ಅಗಸ್ಟಿನ್ ಅವರು ಮಾತನಾಡಿದರು ಹಾಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಮುಖ್ಯಅತಿಥಿಗಳಾಗಿದ್ದ ರಾಜಾ ಮುಕುಂದ ನಾಯಕ ಹಾಗು ಪ್ರಾಸ್ತಾವಿಕವಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ಗಳಾದ ಡಾ: ಆರ್.ವಿ.ನಾಯಕ,ಡಾ:ಓಂ ಪ್ರಕಾಸ ಅಂಬುರೆ,ಡಾ:ಹರ್ಷವರ್ಧನ ರಫಗಾರ ಸೇರಿದಂತೆ ಆರೋಗ್ಯ ಇಲಾಖೆಯ ಅನೇಕ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ನಂತರ ನಡೆದ ಕವನ ವಾಚನದಲ್ಲಿ ಚುಸಾಪ ತಾಲೂಕು ಅಧ್ಯಕ್ಷ ಬೀರಣ್ಣ ಬಿ.ಕೆ ಅವರು ’ಶ್ರೀ ರಾಜಾ ಮದನಗೋಪಾಲ ನಾಯಕ ಆಗಿದ್ದರು ರಾಜಾಹುಲಿ,ಹೆಬ್ಬುಲಿ,ಬಾಹುಬಲಿ, ಆದರೆ ಅವರನ್ನು ತೆಗೆದುಕೊಂಡಿತು ಕ್ರೂರಿ ಕೊರೊನಾ ಬಲಿ,ಅವರನ್ನು ಸ್ಮರಿಸಲು ಸುರಪುರ ಕನ್ನಡ ಸಾಹಿತ್ಯ ಸಂಘ ಇಂದು ಬಯಸುತ್ತದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಚುಟುಕು ವಾಚಿಸುತ್ತಿದ್ದಂತೆ ಎಲ್ಲರಲ್ಲಿ ಮೌನ ಆವರಿಸಿತ್ತು.ನಂತರ ಸಾಹಿತಿಗಳಾದ ನಬಿಲಾಲ್ ಮಕಾನದಾರ್, ಶ್ರೀಹರಿರಾವ್ ಆದವಾನಿ,ಮಹಾಂತೇಶ ದೇವರಗೋನಾಲ,ಜ್ಯೋತಿ ದೇವಣಗಾಂವ್ ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ಕೇದಾರನಾಥ ಶಾಸ್ತ್ರಿ,ಪ್ರಕಾಶಚಂದ ಜೈನ್,ಇಕ್ಬಾಲ್ ರಾಹಿ,ಜಯಲಲಿತಾ ಪಾಟೀಲ್,ಪಾರ್ವತಿ ದೇಸಾಯಿ,ರಂಗನಗೌಡ ಅಂಜಳ,ಯಲ್ಲಪ್ಪ ಹುಲಿಕಲ್,ರಮೇಶ ದೊರೆ,ವೆಂಕಟೇಶ ಬೇಟೆಗಾರ,ಶರಣಗೌಡ ಪಾಟೀಲ್,ಕನಕಪ್ಪ ವಾಗಣಗೇರಾ,ದೇವು ಹೆಬ್ಬಾಳ,ಕಮಲಾಕರ ಅರಳಿಗಿಡ,ಲಕ್ಷ್ಮಣ ಗುತ್ತೇದಾರ,ರಾಘವೇಂದ್ರ ಬಾಡಿಹಾಳ,ರಾಘವೇಂದ್ರ ಭಕ್ರಿ,ವೆಂಕಟೇಶ ಸುರಪುರ,ವೆಂಕಟೇಶಗೌಡ,ಮಲ್ಲು ಕಟ್ಟಿಮನಿ,ಹಣಮಂತ್ರಾಯ ದೊರೆ,ಸೇರಿದಂತೆ ಅನೇಕರಿದ್ದರು.ರಾಜಶೇಖರ ದೇಸಾಯಿ ನಿರೂಪಿಸಿದರು,ಅನ್ವರ ಜಮಾದಾರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here