ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ಹೊಲಗಳಿಗೆ ಹೋಗುವ ರಸ್ತೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಮಾಡುವಂತೆ ಜಾಲಿಬೆಂಚಿ ನೀರು ಬಳಕೆದಾರರ ಸಂಘದ ಮುಖಂಡರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರಿಗೆ iನವಿ ಮಾಡಿದ್ದಾರೆ.
ಮಂಗಳವಾರ ಯಾದಗಿರಿಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಅವರನ್ನು ಭೇಟಿ ಮಾಡಿದ ಮುಖಂಡರು ಮನವಿ ಸಲ್ಲಿಸಿ ಮಾತನಾಡಿದ ಸುಭಾಸ್ ಗುತ್ತೇದಾರ ಅವರು,ಜಾಲಿಬೆಂಚಿ ಗ್ರಾಮದ ರೈತರು ಹೊಲಗಳಿಗೆ ಹೋಗಲು ರಸ್ತೆ ಇಲ್ಲದೆ ತೀವ್ರ ತೊಂದರೆ ಪಡುವಂತಾಗಿದೆ.ನಮ್ಮ ನೀರು ಬಳಕೆದಾರರ ಸಹಕಾರ ಸಂಘದ ಅಡಿಯಲ್ಲಿ ಬರುವ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಹೊಲದಿಂದ ಕುಮಾರಸ್ವಾಮಿ ಗುಡ್ಡಡಗಿ ಅವರ ಹೊಲದ ವರೆಗಿನ ಕಿ.ಮೀ ೦ ದಿಂದ ೦೯ರ ವರೆಗಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.ಅಲ್ಲದೆ ಕಾಲುವೆಗಳು ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದು ನೀರು ಹರಿಯಲು ಸಾಧ್ಯವಿಲ್ಲದಂತಾಗಿವೆ.
ಇದರಿಂದ ರೈತರ ಜಮೀನಿಗೆ ನೀರು ಬರುತ್ತಿಲ್ಲ,ಅಲ್ಲದೆ ಕಾಲುವೆಗಳ ಪಕ್ಕದಲ್ಲಿನ ರಸ್ತೆಗಳು ಮುಳ್ಳು ಕಂಟಿಗಳಿಂದ ಹಾಳಾಗಿವೆ,ಆದ್ದರಿಂದ ಈಗಾಗಲೇ ಸರಕಾರ ಆದೇಶ ಹೊರಡಿಸಿದಂತೆ ಕಾಳುವೆಗಳ ಹೂಳೆತ್ತುವುದು ಮತ್ತು ಹೊಲಗಳ ರಸ್ತೆಯನ್ನು ಉದ್ಯೋಗ ಖಾತ್ರಿಯಡಿಯಲ್ಲಿ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದೆ.ಆದ್ದರಿಂದ ನಮ್ಮ ಗ್ರಾಮದ ಹೊಲಕ್ಕೆ ಹೋಗುವ ರಸ್ತೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಡುವಂತೆ ವಿನಂತಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಿಇಒ ಶಿಲ್ಪಾ ಶರ್ಮಾ ಅವರು ನಿಮ್ಮ ಬೇಡಿಕೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವನಾಥರಡ್ಡಿ ಕಾಮತ್,ಖಾದರ್ ಬಾಷಾ ಭಾಗವಾನ್,ನಿಂಗಮ್ಮ ಮಲ್ಲಿಕಾರ್ಜುನ,ದೇವಮ್ಮ ದೇವಪ್ಪ,ಸೋಪಿಪಟೇಲ್ ಹಾಗು ಮುಖಂಡರಾದ,ನಾಗರಾಜ ಬಳಿ,ಮಲ್ಲಿಕಾರ್ಜುನ ಬಡಿಗೇರ,ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್,ಮೊನೋದ್ದಿನ್ ದಖನಿ,ಇಸ್ಮಾಯಿಲ್ ಉಸ್ತಾದ್,ಮಲ್ಲಿಕಾರ್ಜುನ ಕಟ್ಟಿಮನಿ,ಹಯ್ಯಾಳಪ್ಪ ಕಟ್ಟಿಮನಿ ಹಾಗು ನಿಂಗಯ್ಯ ಗುತ್ತೇದಾರ ಇತರರಿದ್ದರು.