ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ)ಕ್ಕೆ ನಗರದ ಸುರಪುರ ರಂಗಂಪೇಟೆಯ ೪೦ಕ್ಕೂ ಹೆಚ್ಚು ಜನ ಯುವಕರು ಮಲ್ಲಿಕಾರ್ಜುನ ಕ್ರಾಂತಿಯವರ ಅವಿರತ ಹೋರಾಟವನ್ನು ಮೆಚ್ಚಿ ಸಂಘಟನೆಗೆ ಸೇರ್ಪಡೆಗೊಂಡರು.
ನಗರದ ಮಹಾತ್ಮ ಗೌತಮ್ ಬುದ್ಧ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಎಲ್ಲರಿಗೂ ಹೂಮಾಲೆಯನ್ನು ಹಾಕಿ ಸಂಘಟನೆಗೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿದ ಮಲ್ಲಿಕಾರ್ಜುನ ಕ್ರಾಂತಿ, ನಮ್ಮ ಸಮಿತಿಯ ಅನೇಕ ವರ್ಷಗಳಿಂದ ಮಾಡುತ್ತಿರುವ ದೀನ ದಲಿತ ಸಮಾಜಪರವಾದ ಹೋರಾಟಗಳನ್ನು ಮೆಚ್ಚಿ ಇಂದು ತಾವೆಲ್ಲರು ನಮ್ಮ ಸಂಘಟನೆಗೆ ಸೇರ್ಪಡೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ತಾವೆಲ್ಲರು ಸೇರಿದ್ದರಿಂದ ಇನ್ನಷ್ಟು ಹೋರಾಟಕ್ಕೆ ಶಕ್ತಿ ಬಂದಂತಾಗಿದೆ.ತಾವೆಲ್ಲರು ಸಂಘಟನೆಯ ಜೊತೆಗೂಡಿ ಸಂಘದ ಸಿದ್ಧಾಂತಗಳಡಿ ಹೋರಾಟಗಳನ್ನು ರೂಪಿಸಿಕೊಳ್ಳುವ ಜೊತೆಗೆ ಸಂಘಟನೆಯ ಬೆಳವಣಿಗೆಗ ಕೆಲಸ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಹ್ಮದ್ ಹನೀಪ ಗುಡಗುಂಟಿ,ಮೋಸಿನ್ ,ವಿರೇಶ ಪ್ಯಾಪ್ಲಿ,ಸೈಯದ ಸೋಫಿ ಸೈಯದ್,ಸಾಯಬಣ್ಣ ಸತ್ಯಂಪೇಟೆ,ಮಹ್ಮದ್ ದಾವೂದ್ ಸತ್ಯಂಪೇಟೆ,ಮಹ್ಮದ್ ಯಾಸೀನ್ ಕುರಕುಂದಿ,ಸಮೀರ್ ಮಿಟ್ಟಬಾಯ್,ಹಲ್ತಾಫ್ ನಗನೂರಿ,ಮಹ್ಮದ್ ಹುಸೇನ್ ಕಬಾಡಗೇರಾ,ಜೈರುದ್ಧೀನ್ ದಿವಳಗುಡ್ಡ ಸೇರಿದಂತೆ ನಲವತ್ತು ಜನ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಮುಖಂಡರಾದ ಮಾನಯ್ಯ ಬಿಜಾಸಪುರ,ಖಾಜಾಹುಸೇನ್ ಗುಡಗುಂಟಿ,ಜಟ್ಟೆಪ್ಪ ನಾಗರಾಳ ಸೇರಿದಂತೆ ಅನೇಕರಿದ್ದರು.