ಶೀಘ್ರದಲ್ಲಿ ರಾಜಾ ಮದನಗೋಪಾಲ ನಾಯಕರ ಪುತ್ಥಳಿ ಅನಾವರಣ: ರಾಜಾ ಮುಕುಂದ ನಾಯಕ

0
17

ಸುರಪುರ: ಗರುಡಾದ್ರಿ ಕಲಾ ಮಂದಿರವೆಂಬ ಸುಂದರವಾದ ಸಭಾ ಭವನವನ್ನು ನಿರ್ಮಿಸಿ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಮುಂದಾಗಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಪುತ್ಥಳಿಯನ್ನು ಕೆಲವೇ ತಿಂಗಳುಗಳಲ್ಲಿ ಅನಾವರಣಗೊಳಿಸಲಾಗುವುದು ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷರಾದ ರಾಜಾ ಮುಕುಂದ ನಾಯಕ ಮಾತನಾಡಿದರು.

ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಮಂಗಳವಾರ ಸಂಹೆ ಹಮ್ಮಿಕೊಂಡಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಒಂದು ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವುದು ನನಗೆ ಈಗ ಅರ್ಥವಾಗಿದೆ.ಆದರೆ ಇಂತಹ ಕಷ್ಟದ ಜವಬ್ದಾರಿಯನ್ನು ನಿಭಾಯಿಸುವ ಮೂಲಕ ಇಡೀ ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡು ಬದುಕಿ ಹೋದ ರಾಜಾ ಮದನಗೋಪಾಲ ನಾಯಕರ ಸೇವೆ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ಇದಕ್ಕೂ ಮುನ್ನ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ ನ್ಯಾಯವಾದಿ ಜೆ.ಅಗಸ್ಟಿನ್ ಮಾತನಾಡಿ,ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರು ಒಂದು ಕೆಲಸವನ್ನು ಹಿಡಿದರೆ ಅದನ್ನು ಪೂರ್ಣಗೊಳಿಸುವವರೆಗೆ ಬಿಡುವ ಜಾಯಮಾನದವರಾಗಿರಲಿಲ್ಲ.ಆದ್ದರಿಂದ ಇಂದು ನಾವೆಲ್ಲರು ಅವರನ್ನು ಕನ್ನಡದ ರಾಜ ಎಂದು ಕರೆಯುತ್ತೇವೆ.ನಿಜಕ್ಕೂ ಅವರು ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಹೌದು.ಅವರು ಮಾಡಿರುವ ಸೇವೆ ಇನ್ನೆಂದು ಯಾರಿಂದಲೂ ಮಾಡಲು ಸಾಧ್ಯವಿಲ್ಲ.ಅಲ್ಲದೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಮೇಲೆ ಇಪ್ಪತ್ತು ಪಿಹೆಚ್‌ಡಿ ಬಂದಿವೆ,ಆದರೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಹೆಸರು ಬಂದಿದ್ದೆ ಮದನಗೋಪಾಲ ನಾಯಕರಿಂದ ಎಂದರು.

ಸುರಪುರದ ಇತಿಹಾಸ ದಾಖಲಾಗಲು ಕಪಟರಾಳ ಕೃಷ್ಣಾರಾಯರು ಮತ್ತು ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕರು ಕಾರಣ.ಆದರೆ ಇಲ್ಲಿಯ ಇತಿಹಾಸ ಇನ್ನೂ ಸರಿಯಾಗಿ ದಾಖಲಾಗಿಲ್ಲ,ದಾಖಲಿಸುವ ಕೆಲಸ ಆಗಬೇಕು.ಅದನ್ನು ರಾಜಾ ಮದನಗೋಪಾಲ ನಾಯಕರಿಂದ ಸಾಧ್ಯವಿತ್ತು ಎಂದರು.ಇದೆಲ್ಲವನ್ನು ಗುರುತಿಸಿದ್ದ ರೇವಣಸಿದ್ದಯ್ಯ ಮಾಸ್ತರರು ರಾಜಾ ಮದನಗೋಪಾಲ ನಾಯಕರ ಕಾರು ಹೊರಟರೆ ಶ್ರೀಕೃಷ್ಣ ದೇವರಾಯನ ಪಲ್ಲಕ್ಕಿ ಹೊರಟಂತೆ ಭಾಸವಾಗುತ್ತದೆ ಎಂದು ಬಣ್ಣಿಸಿದ್ದರು ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಶ್ರೀಹರಿರಾವ್ ಆದವಾನಿ,ಡಾ:ಉಪೇಂದ್ರ ನಾಯಕ ಸುಬೇದಾರ,ಕಿಶೋರ ಚಂದ್ ಜೈನ್,ಶ್ರೀನಿವಾಸ ಜಾಲವಾದಿ ಮಾತನಾಡಿದರು.ಕಾರ್ಯಕ್ರಮದ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ರಾಜಾ ಮದನಗೋಪಾಲ ನಾಯಕರ ಸಹೋದರ ರಾಜಾ ಪಾಮನಾಯಕ,ಹಿರಿಯ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್,ರಾಜಾ ಮದನಗೋಪಾಲ ನಾಯಕರ ಸುಪುತ್ರ ರಾಜಾ ವಿಷ್ಣುವರ್ಧನ ನಾಯಕ,ಕ್ಲಬ್‌ನ ಉಪಾಧ್ಯಕ್ಷ ರಾಮನಗೌಡ ಇದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಜಿ.ಎಸ್.ಪಾಟೀಲ್,ವೀರಪ್ಪ ಆವಂಟಿ,ವಕೀಲ ಉದಯಸಿಂಗ್,ರಾಘವೇಂದ್ರ ಬಾಡ್ಯಾಳ,ಬಸವರಾಜ ಜಮದ್ರಖಾನಿ,ಪ್ರಕಾಶ ಸಜ್ಜನ್,ಮಂಜುನಾಥ ಗುಳಗಿ,ಶರಣಬಸವ ಯಳವಾರ,ರಾಘವೇಂದ್ರ ಭಕ್ರಿ,ಸಲೀಂ ವರ್ತಿ,ಮುದ್ದಪ್ಪ ಅಪ್ಪಾಗೋಳ,ರಾಜಶೇಖರ ದೇಸಾಯಿ ಸೇರಿದಂತೆ ಅನೇಕರಿದ್ದರು.ದೇವು ಹೆಬ್ಬಾಳ ನಿರೂಪಿಸಿದರು,ಪ್ರಕಾಶ ಅಲಬನೂರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here