ಕಲಬುರಗಿ: ನಗರದ ಎಸ್ವಿಪಿ ವೃತ್ತದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಕ್ಕೆ ಪಡಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಜಿಲ್ಲಾ ಅಧ್ಯಕ್ಷ ದಯಾನಂದ ಪಾಟೀಲ್, ರಾಜ್ಯ ಸಮಿತಿಯ ಶ್ರೀಧರ ನಾಗನಹಳ್ಳಿ, ಮತ್ತು ಉಪಾಧ್ಯಕ್ಷ ಕಲ್ಯಾಣರಾವ ಪಾಟೀಲ್ ಕಣ್ಣಿ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ ಮಹಾಗವಂಕರ, ಮಹೇಶ್ ಚಂದ್ರ ಪಾಟೀಲ್ ಕಣ್ಣಿ,ಸಂಘಟನಾ ಕಾರ್ಯದರ್ಶಿ ಆನಂದ ಕನಸೂರ, ಜಿಲ್ಲಾ ಸಂಚಾಲಕರಾದ ಸತೀಶ ಮಾಹೂರ, ಗುರುರಾಜ ಅಂಬಾಡಿ, ಸದಸ್ಯರಾದ ಅಣ್ಣಾರಾಯ ಹೀರೆಗೌಡ, ಗುರುರಾಜ ಸುಂಟನೂರ, ಪ್ರಜ್ವಲ್ ಕೊರಳ್ಳಿ, ನಿಖಿಲ ಬಿಲಗುಂದಿ, ಜೇ.ಕೆ ಪಾಟೀಲ್ ಹರಸೂರ ಇದ್ದರು.