ಕಲಬುರಗಿ: ಇಲ್ಲಿನ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮವನ್ನು ಹೋಬಳಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದಾರೆ.
ಇಂದು ಎರಡನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ ಕಂದಗುಳು ಕ್ರಾಸ್. ಒಟ ಒಟಿ .ಕ್ರಾಸ್. ಹೆರೂರು ಕ್ರಾಸ್. ನಾಗೂರ ಕ್ರಾಸ್. ಹರಕಂಚಿ ಕಟ್ಟೊಳ್ಳಿ ಕ್ರಾಸ್. ಮಹಾಗಾಂವ ಕ್ರಾಸ್ ಮಾರ್ಗವಾಗಿ ಹುಮ್ನಾಬಾದ ಬಿದರ್ ಮೆನ್ ರೊಡ ಮಾರ್ಗವಾಗಿ ಕುರುಕೊಟಿ.ಸಿರ್ಗಾಪುರ.ಅವುರಾದ. ಸ್ವಾಮಿ ಸಮರ್ಥ ಸಾಯಂಕಾಲ ವಸತಿ ನಂತರ ಹುಮ್ನಾಬಾದ ರಿಂಗ್ ರೋಡ್ ಮೂಲಕ ಜಿಲ್ಲಾಧಿಕಾರಿಗೆ ಭೇಟಿ ನೀಡಿ ಒತ್ತಾಯಿಸಲಾಗುವುದೆಂದು ಜಾತಾ ಸಂಚಾಲಕರಾದ ಶಂಕರ್ ಚೊಕಾ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ನಡುವಿನ ಮಠ ರಟಕಲ್ ಶ್ರೀ ರೆವಣಸಿದ್ದ ಶಿವಾಚಾರ್ಯರು, ವಿರಕ್ತ ಮಠ ರಟಕಲ್ ಶ್ರೀ ಸಿದ್ದರಾಮ ದೇವರು, ಸುಕ್ಷೆತ್ರ ಗೌರಿ ಗುಡ್ಡ ರಟಕಲ್ ಶ್ರೀ ರೆವಣಸಿದ್ದ ಶರಣರು, ರಟಕಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗೌರಿಶಂಕರ ಕಿಣ್ಣಿ, ಮಾಜಿ ತಾಲೂಕು ಪಂಚಾಯತ ಸದಸ್ಯರು ಹೋರಾಟಗಾರರ ಶರಣಬಸಪ್ಪಾ ಮಮಶೆಟ್ಟಿ, ಮೆಡಿಕಲ್ ಮಸ್ತಾನ್ ಸಾಬ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ.