ಶುಂಠಿಯಲ್ಲಿ ಶಿಲೀಂದ್ರ ಸೊರಗುರೋಗ ನಿರ್ವಹಣೆ

0
11

ಶುಂಠಿ ಜಿಂಜಿಬೆರೇಸಿಯ ಕುಟುಂಬಕ್ಕೆ ಸೇರಿz ಬೆಳೆಯಾಗಿದ್ದು, ಭೂಮಿಯ ಕೆಳಭಾಗದಲ್ಲಿ ಬೆಳೆಯುತ್ತದೆ.ಅದನ್ನು ಬೇರುಕಾಂಡ ಎಂದು ಕರೆಯುತ್ತಾರೆ. ಶುಂಠಿ ಬೆಳೆಗೆ ಒಣ ಮತ್ತುತೇವಾಂಶಕೂಡಿದ ಹವಾಮಾನವು ಸೂಕ್ತವಾಗಿದ್ದು, ಹೆಚ್ಚಿನ ಮಳೆ ಬರುವಅಥವಾ ನೀರಾವರಿ ಪ್ರದೇಶದಲ್ಲಿ ಬೆಳೆಯಬಹುದು. ಮೇ ತಿಂಗಳಿನ ಮುಂಗಾರು ಮಳೆ ಆರಂಭವಾಗುವ ಸಮಯವು ಶುಂಠಿ ನೆಡಲು ಸೂಕ್ತ.ಕಾಲವಾಗಿರುತ್ತದೆ.

ನೀರಾವರಿ ಬೆಳೆಯಾದರೆ ಫೆಬ್ರವರಿ ತಿಂಗಳಿನ ಮಧ್ಯದಲ್ಲಿಅಥವಾ ಮಾರ್ಚ ತಿಂಗಳ ಮೊದಲ ವಾರದಲ್ಲಿ ಮುಂಚಿತವಾಗಿಯೇ ನೆಡಬಹುದು. ಶುಂಠಿಯಲ್ಲಿ ಸಾಮಾನ್ಯವಾಗಿಕಂಡು ಬರುವ ರೋಗಗಳೆಂದರೆ, ಕೊಳೆ ರೋಗ, ದುಂಡಾಣು ಸೊರಗುರೋಗ, ಎಲೆ ಚುಕ್ಕೆ ರೋಗ ಮತ್ತುಜಂತು ಹುಳುಗಳ ಬಾಧೆ.

Contact Your\'s Advertisement; 9902492681

ಕೊಳೆ ರೋಗ: ಕೊಳೆ ರೋಗವು ಶುಂಠಿ ಬೆಳೆಯ ಪ್ರಮುಖ ಮಾರಕರೋಗವಾಗಿದ್ದು ಬೆಳೆಯ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ. ಈ ರೋಗವುಪಿಥಿಯಂ ಎಂಬ ಶಿಲೀಂದ್ರದಿಂದ ಉಂಟಾಗುತ್ತದೆ.ಮಣ್ಣಿನ ಹೆಚ್ಚಾದತೇವಾಂಶ, ಅತಿಯಾದಆರ್ದ್ರತೆ ಮತ್ತು ನೈರುತ್ಯ ಮುಂಗಾರು ಈ ರೋಗಾಣು ಉಲ್ಬಣಗೊಳ್ಳಲು ಪೂರಕ ಅಂಶಗಳಾಗಿವೆ.ಶುಂಠಿಯು ಮೊಳಕೆ ಹಂತದಲ್ಲಿರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತದೆ.

ಲಕ್ಷಣಗಳು :ರೊಗವುಕಾಂಡದ ಮೇಲೆ ನೀರಿನ ಚುಕ್ಕೆಗಳಂತೆ ಶುರುವಾಗಿ ನಂತರ ಕೆಳಗಿನ ಭಾಗಕ್ಕೆ ಹರಡುತ್ತದೆ. ರೋಗವು ಬೇರುಕಾಂಡಕ್ಕೆ ಹರಡಿಕೊನೆಯ ಹಂತದಲ್ಲಿ ಬೇರುಗಳು ಕೊಳೆಯುತ್ತವೆ.ರೋಗಕ್ಕೆ ತುತ್ತಾದಗಿಡದ ಕೆಳಗಿನ ಎಲೆಯ ತುದಿಗಳು ಹಳದಿ ಬಣ್ಣಕ್ಕೆತಿರುಗಿ ನಂತರ ಮಧ್ಯಭಾಗಕ್ಕೆ ಮತ್ತು ಮೇಲಿನ ಭಾಗಕ್ಕೆ ಹರಡುತ್ತದೆ.ನಂತರ ಎಲೆಗಳು ಒಣಗಿ ಉದುರುತ್ತವೆ.ಬೆಳೆಯ ಬೆಳವಣಿಗೆ ಸ್ಥಗಿತವಾಗಿ ಎಲೆಗಳು ತಿಳಿ ಹಳದಿ ಬಣ್ಣಕ್ಕೆತಿರುಗುತ್ತವೆ.ಬಾಧಿತಗಿಡವನ್ನುಜಗ್ಗಿದಾಗ ಸುಲಭವಾಗಿಕಿತ್ತು ಬರುತ್ತದೆ.

ನಿರ್ವಹಣೆ :ಬೀಜಕ್ಕೆಉಪಯೋಗಿಸುವ ಬೇರುಕಾಂಡವನ್ನುರೋಗಮುಕ್ತ ಹೊಲದಿಂದ ಆಯ್ದುಕೊಳ್ಳುವುದರಿಂದ ರೋಗವನ್ನುತಡೆಗಟ್ಟಬಹುದು.
ಭೂಮಿಯಲ್ಲಿ ನೀರು ನಿಂತುಕೊಳ್ಳುವುದರಿಂದ ರೋಗಾಣುವು ಉಲ್ಬಣಗೊಳ್ಳುವುದು. ಆದ್ದರಿಂದ ನೀರು ನಿಲ್ಲದಂತೆಎಚ್ಚರ ವಹಿಸಬೇಕು. ಅಥವಾ ನೀರು ಬಸಿಯುವ ಮಣ್ಣಿನಲ್ಲಿ ಶುಂಠಿಯನ್ನು ಬೆಳೆಯುವುದು ಸೂಕ್ತ. ಬೆಳೆ ಪರಿವರ್ತನೆ ಮಾಡಬೇಕು.

೧ ಕೆ.ಜಿ. ಟ್ರೈಕೋಡರ್ಮಾ ಹಾರ್ಜಿಯಾನಮ್‌ನ್ನು ೯೦ ಕೆ.ಜಿ. ಕೊಟ್ಟಿಗೆಗೊಬ್ಬರ ಮತ್ತು ೧೦ ಕೆ.ಜಿ. ಬೇವಿನ ಹಿಂಡಿಯಲ್ಲಿ ಬೆರೆಸಿ ಮಣ್ಣಿಗೆ ಹಾಕುವುದರಿಂದರೋಗವನ್ನು ನಿರ್ವಹಣೆ ಮಾಡಬಹುದು. ಬೀಜಕ್ಕೆಉಪಯೋಗಿಸುವ ಬೇರುಕಾಂಡವನ್ನು, ರಿಡೋಮಿಲ್ ಎಂ. ಝೆಡ್‌ಅಥವಾಕರ್ಜೆಟ್ ೩ ಗ್ರಾಂ./ಲೀ. ದ್ರಾವಣದಲ್ಲಿ ೪೦ ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು.

ರೋಗದ ಲಕ್ಷಣಕಂಡಕೂಡಲೇ ೩ ಗ್ರಾಂ./ಲೀ. ನಂತೆರಿಡೋಮಿಲ್ ಎಂ. ಝೆಡ್‌ಅಥವಾತಾಮ್ರದಆಕ್ಸಿಕ್ಲೋರೈಡ್ ಬೆರೆಸಿ ಬಾಧಿತಗಿಡದ ಬುಡಕ್ಕೆ ಸುರಿಯಬೇಕು.

ಸೊರಗುರೋಗ : ರೊಲ್ಸೋನಿಯಾ ಸೊಲಾನೇಸಿಯಾರಮ್ ಎಂಬ ದುಂಡಾಣುವಿನಿಂದ ಈ ರೋಗವುಉಂಟಾಗುತ್ತದೆ.ಈ ರೋಗಾಣುವು ಮಣ್ಣಿನಲ್ಲಿ ಮತ್ತು ಬೀಜದಲ್ಲಿಜೀವಿಸುತ್ತದೆ.ನೈರುತ್ಯ ಮುಂಗಾರಿನಲ್ಲಿರೋಗವು ಹೆಚ್ಚಾಗಿರುತ್ತದೆ.ಅಲ್ಲದೇ ಎಳೆಯ ಬೆಳೆಯು ಹೆಚ್ಚಾಗಿ ರೋಗ ಬಾಧೆಗೊಳಗಾಗುತ್ತದೆ.

ಲಕ್ಷಣಗಳು: ನೀರಿನಿಂದಕೂಡಿದ ಚುಕ್ಕೆಗಳು ಬುಡದ ಭಾಗದಲ್ಲಿ ಕಾಣಿಸಿಕೊಂಡು ನಂತರ ಮೇಲ್ಭಾಗಕ್ಕೆ ಮತ್ತು ಬೇರುಕಾಂಡಕ್ಕೆಹರಡುತ್ತದೆ. ಮೊದಲುಗಿಡದ ಕೆಳಭಾಗದ ಎಲೆಗಳು ಹಳದಿ ಬಣ್ಣಕ್ಕೆತಿರುಗಿಕ್ರಮೇಣವಾಗಿ ಮೇಲ್ಭಾಗದ ಎಲೆಗಳೂ ಹಳದಿಯಾಗುತ್ತವೆ. ನಂತರಗಿಡವು ಸೊರಗುತ್ತದೆ.ರೋಗಕ್ಕೆತುತ್ತಾದಗಿಡದಕಾಂಡವನ್ನು ಮತ್ತು ಬೇರುಕಾಂಡವನ್ನು ಹಿಸುಕಿದರೆ ಹಾಲಿನಂತಹ ನೊರೆದ್ರಾವಣವು ಹೊರ ಬರುತ್ತದೆ.

ನಿರ್ವಹಣೆ: ಬೀಜಕ್ಕೆಉಪಯೋಗಿಸುವ ಬೇರುಕಾಂಡವನ್ನುರೋಗಮುಕ್ತ ಹೊಲದಿಂದ ಆಯ್ದುಕೊಳ್ಳುವುದರಿಂದ ರೋಗವನ್ನುತಡೆಗಟ್ಟಬಹುದು. ಮಣ್ಣಿನಲ್ಲಿ ನೀರು ನಿಂತುಕೊಳ್ಳುವುದರಿಂದ ರೋಗಾಣುವು ಉಲ್ಬಣಗೊಳ್ಳುವುದು.ಆದ್ದರಿಂದ ನೀರು ನಿಲ್ಲದಂತೆಎಚ್ಚರ ವಹಿಸಬೇಕು ಅಥವಾ ನೀರು ಬಸಿಯುವ ಮಣ್ಣನಲ್ಲಿ ಶುಂಠಿಯನ್ನು ಬೆಳೆಯುವುದು ಸೂಕ್ತ. ಬೀಜಕ್ಕೆಉಪಯೋಗಿಸುವ ಬೇರುಕಾಂಡವನ್ನುಸ್ಪ್ರೆಪ್ಟೋಸೈಕ್ಲಿನ್ (೦.೫ಗ್ರಾಂ./ಲೀ) ದ್ರಾವಣದಲ್ಲಿಅಥವಾತಾಮ್ರದಆಕ್ಸಿಕ್ಲೋರೈಡ್ (೩ ಗ್ರಾಂ./ಲೀ.) ದ್ರಾವಣದಲ್ಲಿ ೩೦ ನಿಮಿಷಗಳ ಕಾಲ ಉಪಚರಿಸಿ ನಂತರ ನೆರಳಿನಲ್ಲಿ ಒಣಗಿಸಬೇಕು.ಗಿಡದಲ್ಲಿರೋಗದ ಲಕ್ಷಣಗಳು ಕಂಡು ಬಂದಕೂಡಲೇ ೨ ಗ್ರಾಂ./ಲೀ. ನಂತೆತಾಮ್ರದ ಆಕ್ಸಿಕ್ಲೋರೈಡ್‌ ಅಥವಾ ೨ ಗ್ರಾಂ./ಲೀ. ನಂತೆಕೂಸೈಡ್‌ಅಥವಾ ೧% ಬೋರ್ಡೊದ್ರಾವಣವನ್ನು ಗಿಡಗಳು ತೊಯ್ಯುವಂತೆ ಹಾಕಬೇಕು.

ಎಲೆ ಚುಕ್ಕೆ ರೋಗ : ಎಲೆ ಚುಕ್ಕೆ ರೋಗದ ಸೋಂಕು ಫಿಲ್ಲೊಸ್ಟಿಕ್ಟ್ ಜಿಂಜಿಬೆರಿ ಎಂಬ ರೋಗಾಣುವಿನಿಂದತಗಲುತ್ತದೆ ಹಾಗೂ ಜುಲೈನಿಂದಅಕ್ಟೋಬರ್ ವರೆಗೆ ಎಲೆಚುಕ್ಕೆ ರೋಗವುಕಂಡು ಬರುತ್ತದೆ. ಈ ರೋಗವುಅತಿಯಾದಆರ್ದ್ರತೆ, ಕಡಿಮೆತಾಪಮಾನ ಮತ್ತು ಸಣ್ಣ ಮಳೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು :ಎಲೆಗಳ ಮೇಲೆ ನೀರಿನಿಂದಕೂಡಿದ ಚುಕ್ಕೆಗಳು ಕಾಣಿಸಿಕೊಂಡು ನಂತರ ಬಿಳಿ ಬಣ್ಣಕ್ಕೆತಿರುಗುತ್ತವೆ. ಕೊನೆಯ ಹಂತದಲ್ಲಿ ಚುಕ್ಕೆಗಳ ಅಂಚುಗಳು ಕಂದು ಬಣ್ಣಕ್ಕೆತಿರುಗಿ ಮಧ್ಯಭಾಗವು ಹಳದಿಯಾಗಿ ಕ್ರಮೇಣ ಎಲೆಗಳು ಉದುರುತ್ತವೆ.

ನಿರ್ವಹಣೆ :ನಾಟಿ ಮಾಡಲುರೋಗರಹಿತ ಬೇರುಕಾಂಡವನ್ನು ಬಳಸಬೇಕು.ಬೀಜಕ್ಕೆ ಉಪಯೋಗಿಸುವ ಬೇರುಕಾಂಡವನ್ನುರಿಡೋಮಿಲ್ ಎಂ. ಝೆಡ್‌ಅಥವಾ ಮ್ಯಾಂಕೋಜೆಬ್ ೨ ಗ್ರಾಂ./ಲೀ. ದ್ರಾವಣದಲ್ಲಿ ೩೦ ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು.ಒಣಗಿದ ಮತ್ತು ಭಾದಿತ ಎಲೆಗಳನ್ನು ತೆಗೆದು ೧ ಗ್ರಾಂ. ಕಾರ್ಬನ್‌ಡೈಜಿಮ್‌ಅಥವಾ ೨.೫ ಗ್ರಾಂ. ಮ್ಯಾಂಕೋಜೆಬ್ ಮತ್ತು ೦.೫ ಮಿ.ಲೀ. ಸಾಬೂನಿನ ದ್ರಾವಣವನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ೧೫ ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

– ಜಹೀರ್‌ಅಹಮದ್ ಬಿ, ರಾಜು ಜಿ.ತೆಗ್ಗಳ್ಳಿ ಹಾಗೂ ವಾಸುದೇವ ನಾಯಕ್‌ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಐಸಿಎಆರ್‌ಕೃಷಿ ವಿಜ್ಞಾನಕೇಂದ್ರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here