ಕಲಬುರಗಿ ವಿಷನ್-2050 ಅನುಷ್ಠಾನಕ್ಕಾಗಿ ಸಭೆ

0
22

ಕಲಬುರಗಿ :ನಗರದ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಕಲಬುರಗಿ ವಿಷನ್-೨೦೫೦ ಅನುಷ್ಠಾನಕ್ಕಾಗಿ ಕಲ್ಯಾಣ ನಾಡು ವಿಕಾಸ ವೇದಿಕೆಯ ಮೂಲಕ ಪರಿಣಿತರಿಂದ ವರದಿಯನ್ನು ತಯಾರಿಸಿ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರುಗಳಿಗೆ ಮನವಿ ನೀಡುವ ಕುರಿತು ಸಭೆಯಲ್ಲಿತಿರ್ಮಾನಿಸಲಾಯಿತು.

ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ರವರ ಕಲಬುರಗಿ ವಿಷನ್-೨೦೫೦ ಯೋಜನೆ ದೂರದೃಷ್ಟಿಯ ಅತ್ಯುತ್ತಮ ಯೋಜನೆಯಗಾಗಿದ್ದು, ನಿಲ್ಲಿಸಬಾರದೆಂದು ಸರ್ಕಾರದಕ್ಕೆ ವೇದಿಕೆಯ ಮೂಲಕ ಆಗ್ರಹಿಸಲಾಯಿತು.

Contact Your\'s Advertisement; 9902492681

ಕೃಷಿ ನಿರಾವರಿ, ಅಂತರ್ಜಲ ಮಟ್ಟದ ಹೆಚ್ಚಳ, ಸಾಮಾಜಿಕ ಅರಣ್ಯಿಕರರಣದ ಅಭಿವೃದ್ಧಿ, ಸಾರಿಗೆ ಸಂಪರ್ಕ, ಕೈಗಾರಿಕೆ ಅಭಿವೃದ್ಧಿ, ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆ, ಶೈಕ್ಷಣಿಕ ಅಭಿವೃದ್ಧಿ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳ ಸರಿಯಾದ ಬಳಕೆ, ವ್ಯಾಪಾರ ವಾಣಿಜ್ಯ ಅಭಿವೃದ್ಧಿ, ಐ.ಟಿ.ಬಿ.ಟಿ ಕ್ಷೇತ್ರದಲ್ಲಿನ ಅಭಿವೃದ್ಧಿ, ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಎಲ್ಲಾ ಕ್ಷೇತ್ರಗಳ ಸರ್ವಾಂಗಿಣ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಪರಿಣಿತರಿಂದ ವರದಿಯನ್ನು ತಯಾರಿಸಿ ವಿಷನ್-೨೦೫ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರುಗಳಿಗೆ ಮನವಿ ಮಾಡಲು ನಮ್ಮ ವೇದಿಕೆ ಮೂಲಕ ಇಂದು ನಡೆದ ಸಭೆಯಲ್ಲಿ ತಿರ್ಮಾನಿಸಲಾಯಿತು.

ರಾಜ್ಯದ ನೂತರ ಮುಖ್ಯಮಂತ್ರಿಯಾಗಿರುವ ಬಸವರಜ ಬೊಮ್ಮಾಯಿ ರವರಿಗೆ ವೇದಿಕೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಮೊದಲು ಬಸವರಾಜ ಬೊಮ್ಮಾಯಿ ರವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷಿ ಮಹಾವಿದ್ಯಾಲಯ ಹಾಗೂ ಕಲಬುರಗಿಯಲ್ಲಿ ಸಚಿವರ ಸಂಪುಟ ಸಭೆ ನಡೆಸಿದ್ದರು. ಈಲ್ಲೆಯ ಸಮಸ್ಯೆಗಳು ಕುರಿತು ಅವರಿಗೂ ಅರಿವಿದ್ದು, ಅವರಿಗೆ ಮತ್ತೊಮ್ಮೆ ಸಮಸ್ಯೆಗಳ ಕುರಿತು ಮನವರಿಕೆ ಮಾಡಿ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಹೆಚ್ದಿನ ಸಹಾಯ ಮಾಡಲು ಆಗ್ರಹಿಸಲಾಯಿತು.

ಕೈ ತಪ್ಪಿ ಹೋಗುತ್ತಿರುವ ಂIಒS ರೈಲ್ವೆ ವಿಭಾಗೀಯ ಕಛೇರಿ, ಜವಳಿ ಪಾರ್ಕ, ತೋಗರಿ ಟೆಕ್ನಾಲಜಿ ಪಾರ್ಕ, ಎರಡನೇ ವರ್ತುಲ ರಸ್ತೆ, ಕೇಂದ್ರಿಯ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಮುಂತಾದ ಯೋಜನೆಗಳನ್ನು ಕಲಬುರಗಿಯಲ್ಲಿಯೇ ಸ್ಥಾಪಿಸುವಂತೆ ವೇದಿಕೆಯ ಮೂಲಕ ಆಗ್ರಹಿಸಲಾಯಿತು.

ನೂತರ ಸರ್ಕಾರದಲ್ಲಿ ಜಿಲ್ಲೆಯವರಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಬೇಕೆಂದು ಈ ಸಭೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್ ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ್, ಜಿಲ್ಲಾ ಉಪಾಧ್ಯಕ್ಷ ಅನಿಲ ಕಪನೂರ, ನಗರಾಧ್ಯಕ್ಷ ಗೌತಮ ಕರಿಕಲ್ ಹಾಗೂ ವೇದಿಕೆಯ ಸಂಘಟಕರಾದ ಸಾಗರ ಪಾಟೀಲ, ಬಸ್ಸು ಚವ್ಹಾಣ, ಮಹೇಶ ಪಾಟೀಲ, ಸಿದ್ದಲಿಂಗ ಉಪ್ಪಾರ, ಶ್ರೀಧರ ಪೊದ್ದಾರ, ನಾಗರಾಜ ಕಾಂಬಳೆ, ಮಂಜುನಾಥ ಅಣಕೇರಿ, ದೇವು ದೊರೆ, ಸೂರ್ಯಪ್ರಕಾಶ ಚಾಳಿ, ಕುಶಾಲ ಕಪನೂರ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here