ಕಲಬುರಗಿ: ಇಲ್ಲಿನ ನ್ಯೂ ರೆಹಮತ್ ನಗರ, ಮೆಕ್ಕಾ ಕಾಲೋನಿಯ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ HKRBD ಅನುದಾನದಲ್ಲಿ ಹೆರಿಗೆ ಚಿಕಿತ್ಸೆಗಾಗಿ ಕಟ್ಟಡ ನಿರ್ಮಿಸಿರುವ ಕಟ್ಟಡದಲ್ಲಿ ಹೆರಿಗೆ ಚಿಕಿತ್ಸೆ ಪ್ರಾರಂಭಿಸಬೇಕೆಂದು ಮಾನವ ಹಕ್ಕುಗಳ ಹೋರಾಟಗಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಅಲ್ಲದೇ ಆರೋಗ್ಯ ಕೇಂದ್ರದಲ್ಲಿ ನೈಟ್ ಡ್ಯೂಟಿ ಡಾಕ್ಟರ್ ಇಲ್ಲ. ರೋಗಿಗಳಿಗೆ ಔಷಧಿ ನೀಡುತ್ತಿಲ್ಲ. 10 ವರ್ಷಕಳೆದರು ಕೇಂದ್ರದ ವ್ಯಾಪ್ತಿಯಲ್ಲಿ ಕಾಯಿಲೆಗಳ ಸರ್ವೆ, ಮತ್ತು ನೀರಿನ ಪರೀಕ್ಷೆಗಳ ನಡೆಸಿಲ್ಲ. ಹೆರಿಗೆ ಪರೀಕ್ಷೆ ಸೇರಿದಂತೆ ಇರುವ ಸೌಲಭ್ಯಗಳ ಪರೀಕ್ಷೆ ಸಹ ನಿಲ್ಲಿಸಲಾಗಿದೆ.
ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಧಿಕಾರಿ ಸಹ ನಿರ್ಲಕ್ಷ್ಯ ವಹಿಸುತ್ತಿರುವು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು, ಪಿಎಚ್‌ಸಿಯಲ್ಲಿ ಹೆರಿಗೆ ಸೌಲಭ್ಯವನ್ನು ಪ್ರಾರಂಭಿಸಲು ಜಿಲ್ಲಾಡಳಿತ ಮತ್ತು ಡಿಎಚ್‌ಒಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗುವುದೆಂದು ಮನವಿ ಪತ್ರದಲ್ಲಿ ಆಗ್ರಹಿಸಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾದ ಅಬ್ದುಲ್ ರಜಾಕ್, ಮುನಿರೋದ್ದಿನ್, ರಿಯಾಜ್ ಖತೀಬ್ ಸೇರಿದಂತೆ ಇತರರು ಇದ್ದರು.