ರಾಬಿನ್ ಹುಡ್ ಆರ್ಮಿಯಿಂದ 1.5 ಲಕ್ಷ ಲಸಿಕಾಕರಣ ಗುರಿ

0
22

ಬೆಂಗಳೂರು: ಆಗಸ್ಟ್ 15, 2021 ರ ವೇಳೆಗೆ 1.5 ಲಕ್ಷ ಭಾರತೀಯರಿಗೆ ಲಸಿಕೆ ಹಾಕಿಸುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆಯಾಗಿರುವ ರಾಬಿನ್‍ಹುಡ್‍ಆರ್ಮಿ(ಆರ್‍ಎಚ್‍ಎ) ವಾಟ್ಸಪ್, ಉಬರ್ ಮತ್ತು ಗೂಗಲ್ ಜತೆ ಕೈಜೋಡಿಸಿದೆ.

ಈ ಉಪಕ್ರಮಕ್ಕೆ #mission28states ಎಂದು ಹೆಸರಿಡಲಾಗಿದೆ. ದೇಶದ 28 ರಾಜ್ಯಗಳಲ್ಲಿ ಆರ್‍ಎಚ್‍ಎ ಸ್ವಯಂಸೇವಕರು ಸ್ಥಳೀಯ ಸಂಸ್ಥೆಗಳ ಜತೆಗೂಡಿ ಹಸಿವು ಮುಕ್ತ ಸಮಾಜ ನಿರ್ಮಾಣ ಮತ್ತು ಮಾರಣಾಂತಿಕ ಸಾಂಕ್ರಾಮಿಕದ ಮೂರನೇ ಅಲೆ ಬರುವ ಮುನ್ನ ಎಲ್ಲರಿಗೂ ಲಸಿಕೆ ಹಾಕಿಸುವ ಪ್ರಯತ್ನವನ್ನು ನಡೆಸಲಿದೆ. ಆರ್‍ಎಚ್‍ಎ ದ ಪ್ರತಿಯೊಂದು ಉಪಕ್ರಮಗಳು ಸಂಪೂರ್ಣ ಉಚಿತವಾಗಿ ನಡೆಯುವ ರೀತಿಯಲ್ಲಿಯೇ ಈ ಲಸಿಕಾಕರಣ ಉಪಕ್ರಮವು ಜಾರಿಗೆ ಬರಲಿದ್ದು, ದೇಶಾದ್ಯಂತ #mission28states ಮೂಲಕ ತಂತ್ರಜ್ಞಾನ ಪಾಲುದಾರರೊಂದಿಗೆ ಸೇರಿ ಲಸಿಕಾಕರಣ ಅಭಿಯಾನವನ್ನು ನಡೆಸಲಿದೆ.

Contact Your\'s Advertisement; 9902492681

ಈ ಬಗ್ಗೆ ಮಾತನಾಡಿದ ರಾಬಿನ್‍ಹುಡ್ ಆರ್ಮಿಯ ಸಂಸ್ಥಾಪಕ ನೀಲ್ ಘೋಷ್ ಅವರು, “ಈ ಸಾಂಕ್ರಾಮಿಕವು ಲಕ್ಷಾಂತರ ಕುಟುಂಬಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ಮತ್ತು ಆಡಳಿತಗಳು ಈ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಪಡುತ್ತಿವೆ. ಇದೇ ಸಂದರ್ಭದಲ್ಲಿ ನಾಗರಿಕ ಸಮಾಜವು ಮುಂದೆ ಬರಬೇಕು ಮತ್ತು ನಮ್ಮ ಪ್ರತಿಭೆ ಹಾಗೂ ಸಂಪನ್ಮೂಲವನ್ನು ಕೊಡುಗೆಯಾಗಿ ನೀಡುವುದು ಅತ್ಯಂತ ಪ್ರಮುಖವಾಗಿದೆ.

ಸ್ವಾತಂತ್ರ್ಯೋತ್ಸವ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಾಟ್ಸಪ್, ಉಬರ್ ಮತ್ತು ಗೂಗಲ್ ಬೆಂಬಲದೊಂದಿಗೆ ರಾಬಿನ್‍ಹುಡ್ #mission28states ಮೂಲಕ 1.5 ಲಕ್ಷ ಜನರಿಗೆ ಕೋವಿಡ್-19 ಲಸಿಕೆಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಅಭಿಯಾನ ಜುಲೈ 31 ರಂದು ಆರಂಭವಾಗಿದ್ದು, ಆಗಸ್ಟ್ 15 ರವರೆಗೆ ನಡೆಯಲಿದೆ. ಇದರ ಜತೆಗೆ ಕನಿಷ್ಠ 5 ಮಿಲಿಯನ್ ಊಟವನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿದೆ.

ರಾಬಿನ್‍ಹುಡ್ ಆರ್ಮಿಯಲ್ಲಿ ನಾವು ನಾಗರಿಕ ಸಮಾಜ ಮತ್ತು ಪ್ರಮುಖ ತಂತ್ರಜ್ಞಾನ ಪಾಲುದಾರರನ್ನು ಒಟ್ಟುಗೂಡಿಸಲು ಕೋವಿಡ್-19 ವಿರುದ್ಧದ ಪ್ರಚಾರವನ್ನು ಹೆಚ್ಚಿಸಲು ಮತ್ತು ದೇಶದ ಪ್ರತಿಯೊಂದು ರಾಜ್ಯದಲ್ಲೂ ಪ್ರಭಾವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಬೃಹತ್ ಪ್ರಯತ್ನವನ್ನು ನಡೆಸುತ್ತಿದ್ದೇವೆ’ ಎಂದರು.

ವಾಟ್ಸಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಅವರು ಮಾತನಾಡಿ, “ದೇಶವು ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ನಾವು ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಅಗತ್ಯತೆ ಇರುವ ಜನರ ನಡುವಿನ ಅಂತವನ್ನು ಹೋಗಲಾಡಿರುವ ಪ್ರಯತ್ನ ನಡೆಸಿದ್ದೇವೆ.

ರಾಬಿನ್ ಹುಡ್ ಆರ್ಮಿ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ನಾಗರಿಕರಿಗೆ ನೆರವಾಗುವ ಸದುದ್ದೇಶ ಹೊಂದಿದ್ದು, ಇದಕ್ಕಾಗಿ ಹಲವು ಸಂಸ್ಥೆಗಳೊಂದಿಗೆ ಕೈಜೋಡಿಸಿರುವ ಸ್ತುತ್ಯಾರ್ಹವಾಗಿದೆ. ವಾಟ್ಸಪ್

ಮೂಲಕ ಆರ್‍ಎಚ್‍ಎ ಸುಮಾರು ಎರಡು ಲಕ್ಷ ಸ್ವಯಂಸೇವಕರನ್ನು ಬೆಳೆಸಿಕೊಂಡಿದೆ. 236 ನಗರಗಳಲ್ಲಿ ಅತ್ಯಂತ ನಿರ್ಣಾಯಕ ಸಮಯದಲ್ಲಿ ಪರಿಹಾರಗಳನ್ನು ಒದಗಿಸುತ್ತಿದೆ. ಒಂದು ಸಂಸ್ಥೆಯಾಗಿ ಇಡೀ ದೇಶಕ್ಕೆ ನೆರವಾಗುತ್ತಿರುವ ಈ ಮಹತ್ಕಾರ್ಯದಲ್ಲಿ ನಾವೂ ಕೈಜೋಡಿಸುತ್ತಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು.

ಈ ಉಪಕ್ರಮದ ಬಗ್ಗೆ ಮಾತನಾಡಿದ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು, “ರಾಬಿನ್ ಹುಡ್ ಆರ್ಮಿಯ #mission28states ಅಭಿಯಾನಕ್ಕೆ ಸಹಯೋಗ ಹೊಂದಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. ದೇಶದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುತ್ತಿರುವುದು ನಮಗೆ ಗೌರವವನ್ನು ತಂದುಕೊಡುವ ವಿಚಾರವಾಗಿದೆ. ಉಬರ್‍ನಲ್ಲಿ ಸಮುದಾಯಗಳಿಗೆ ಸಕಾಲಿಕವಾಗಿ ವ್ಯಾಕ್ಸಿನೇಷನ್‍ಗೆ ಚಲನಶೀಲತೆ ಅಡ್ಡಿಯಾಗುವುದಿಲ್ಲ ಮತ್ತು ಸಾಂಕ್ರಾಮಿಕ ರೋಗದಿಂದ ಕೆಟ್ಟ ಪರಿಣಾಮ ಬಿರುವ ವಿರುದ್ಧ ಹೋರಾಟ ನಡೆಸಲು ನಾವು ಬದ್ಧರಾಗಿದ್ದೇವೆ. ಒಟ್ಟಾಗಿ ಕೆಲಸ ಮಾಡುವುದರಿಂದ ನಮ್ಮ ಸಮುದಾಯಗಳು ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಆರ್ಥಿಕತೆ ಪುನಶ್ಚೇತನಗೊಳ್ಳಲು ನಾವು ಸಹಾಯ ಮಾಡಬಹುದಾಗಿದೆ’’ ಎಂದು ಅಭಿಪ್ರಾಯಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here