ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ

0
40

ಕಲಬುರಗಿ: ಕೋವಿಡ್ ದಿನಗಳಲ್ಲಿ ವೇತನವಿಲ್ಲದೆ ಪರಿತಪಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ನೌಕರರು ಇದೇ 16 ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಆಮ್ ಆದ್ಮಿ ಬೆಂಬಲ ಸೂಚಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ  ವಕ್ತಾರರಾದ ಸಂಜೀವಕುಮಾರ ಕರೀಕಲ್  ಸೇವಾಬಡ್ತಿ, ಸಂಬಳ ವ್ಯತ್ಯಾಸ, ಮಿನಿ ಅಂಗನವಾಡಿ ಕೇಂದ್ರಗಳ ನೌಕರರ ವೇತನ, ನಿವೃತ್ತಿ ಸೌಲಭ್ಯದಂತಹ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂಗನವಾಡಿ ನೌಕರರು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

Contact Your\'s Advertisement; 9902492681

ವಿಧಾನಸೌಧದಿಂದಲೇ ಆರಂಭವಾಗುವ ಅಂಗನವಾಡಿಗಳ ಪೌಷ್ಟಿಕ ಆಹಾರ ಮತ್ತು ಕೋಳಿ ಮೊಟ್ಟೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕೊರೋನಾ ಸಂದರ್ಭದಲ್ಲಿ ಅಂಗನವಾಡಿ ನೌಕರರು ಯಾವುದೇ ಷರತ್ತುಗಳಿಲ್ಲದೆ ಕಾರ್ಯ ನಿರ್ವಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೀವ ಕಳೆದುಕೊಂಡ ನೌಕರರಿಗೆ 5 ಲಕ್ಷ ರೂ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ ಅನೇಕ ತಿಂಗಳಿಂದ ತಡೆ ಹಿಡಿಯಲಾಗಿರುವ ವಿಶೇಷ ಚೇತನರ, ವ್ರಧ್ದರ ಹಾಗೂ ವಿಧವೆಯರ ವೇತನವನ್ನು ಪುನರಾರಂಭ, , ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಹಾಗೂ ನೌಕರರಿಗೆ ಕಳೆದ 6 ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದಾಗಿ ಇವರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದು ಖಂಡನೀಯ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದಿದ್ದರೆ ಪಕ್ಷ ಹೋರಾಟಕ್ಕೆ ಇಳಿಯುತ್ತದೆಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here