ಚಿತ್ತಾಪುರ:ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಕೋವಿಡ್-19 ಲಸಿಕೆ ಮಹಾ ಅಭಿಯಾನವನ್ನು ಶಾಸಕ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿ ಮಾತನಾಡಿದರು.
ಕರೋನಾ ಮಹಾಮಾರಿ ಮನುಕುಲಕ್ಕೆ ದೊಡ್ಡ ತಲೆನೋವಾಗಿದೆ.ಈ ಮಹಾಮಾರಿ ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿದೆ. ಜನರ ಜೀವನ ಸಂಕಷ್ಟಕ್ಕೆ ಸಿಲುಕಿಸಿದೆ.ಇದಕ್ಕೆ ಪರಿಹಾರ ಎಲ್ಲರು ಲಸಿಕೆಯನ್ನು ಪಡೆದುಕೊಳ್ಳುವುದಾಗಿದೆ.3ನೇ ಅಲೆ ಮಕ್ಕಳಿಗೆ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ಸಮಿತಿ ವರದಿ ಕೊಟ್ಟಿದೆ ಜನರು ಅತಿ ಜಾಗುರಕತೆಯಿಂದ ಇದ್ದು ತಮ್ಮ ಮಕ್ಕಳಿಗೆ ಒಳ್ಳೆಯ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕು ಎಂದು ಹೇಳಿದರು.
ನಂತರ ಅಪೌಷ್ಠಿಕಾಂಶ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಕಾಂಗ್ರೆಸ್ ಶಕ್ತಿಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಪಾಲ್ ಮೂಲಿಮನಿ,ಮುಖಂಡರಾದ ರವಿರೆಡ್ಡಿ,ವೈದ್ಯರಾದ ಡಾ.ಅಮೃತ್, ವೈದ್ಯಕೀಯ ಸಿಬ್ಬಂದಿಗಳಾದ ಗುಲಾಂ ಗೌಸ್,ಶ್ರೀದೇವಿ,ಸ್ಮಿತಾ,ರಮೇಶ ದೇಸಾಯಿ, ಸಂಗೀತಾ,ನಿಲ್ಲಮ್ಮ ಕೊಳ್ಳಿ,ಪುಷ್ಪಾ,ಶಿವರಾಜ್ ಸೇರಿದಂತೆ ಇನ್ನಿತರರು ಇದ್ದರು.