ಸುರಪುರ: ಮಗು ಜನಸಿದ ನಂತರ ದಿಂದ ೬ ತಿಂಗಳ ವರೆಗೆ ಕೇವಲ ಎದೆ ಹಾಲನ್ನು ಮಾತ್ರ ಕುಡಿಸಬೇಕು.ಮಕ್ಕಳಿಗೆ ತಾಯಂದಿರ ಹಾಲು ಅಮೃತಕ್ಕೆ ಸಮಾನವಾಗಿದೆ ಎಂದು ಸಹಾಯಕ ಶಿಶು ಅಭೀವೃಧ್ಧಿ ಅಧಿಕಾರಿ ಮೀನಾಕ್ಷಿ ಪಾಟೀಲ್ ಮಾತನಾಡಿದರು.
ನಗರದ ಧೂಳಪೇಠದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ತಾಯಿಯ ಎದೆ ಹಾಲಿನಲ್ಲಿ ಮಕ್ಕಳಿಗೆ ಸದೃಢ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಮತ್ತು ವಿಟಮಿನ್ ಖನಿಜಾಂಶಗಳು ದೊರೆಯುತ್ತವೆ.ಸ್ತನ್ಯಪಾನ ನವಜಾತ ಶಿಶುಗಳನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ.ಮಕ್ಕಳಿಗೆ ಸಾಂಕ್ರಾಮಿಕ ರೋಗದಿಂದ ಕಾಪಾಡುತ್ತದೆ.ಆದ್ದರಿಂದ ಎಲ್ಲಾ ತಾಯಂದಿರು ಮಕ್ಕಳಿಗೆ ತಪ್ಪದೆ ಎದೆಹಾಲು ಉಣಿಸುವುದು ತುಂಬಾ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ನಗರಸಭೆ ಸದಸ್ಯ ಖಮರುಲ್ ನಾರಾಯಣಪೇಠ ಉದ್ಘಾಟಿಸಿದರು.ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವನುಜಾ,ಅಯಿಷಾ ಪರ್ವಿನ್,ಮೇಲ್ವಿಚಾರಕಿ ಪದ್ಮಾವತಿ ಡಿ.ನಾಯಕ ವೇದಿಕೆಯಲ್ಲಿದ್ದರು.ಅಂಗನವಾಡಿ ಶಿಕ್ಷಕಿಯರಾದ ಈರಮ್ಮ ಕಡಬೂರ,ನಸೀಮಾ ಬಾನು,ರಂಗೂಬಾಯಿ,ಸುನಿತಾ ಬಿಲ್ಲವ್,ಸೈನಾಜ್,ಪರ್ವಿನ್ ಬೇಗಂ,ಅಕ್ಷತಾ ಗುಳಗಿ,ಭಾಗ್ಯಶ್ರೀ,ಸುನಿತಾ,ಲಕ್ಷ್ಮೀ,ಬಿ.ಬಿ.ರಷೀಯಾ,ಸಬಿಯಾ ನಸರೀನ್,ಖಮರುನಿಷಾ ಸೇರಿದಂತೆ ಅನೇಕರಿದ್ದರು.