ಕೈಮಗ್ಗ ನೇಕಾರಿಕೆಗೆ ಒತ್ತು ನೀಡಲು ರಾಜ್ಯ ಸರ್ಕಾರಕ್ಕೆ ಸನಗುಂದಿ ಮನವಿ

0
19

ಆಳಂದ: ರಾಜ್ಯದಲ್ಲಿ ಕೈಮಗ್ಗ ನೇಕಾರಿಕೆ ತೀರಾ ಸಂಕಷ್ಟದಲ್ಲಿದ್ದು ಇದನ್ನು ಉತ್ತೇಜಿಸುವ ಮೂಲಕ ನೇಕಾರರಿಗೆ ಹಾಗೂ ಅದರಲ್ಲಿ ದುಡಿಯುವ ಕಾರ್ಮಿಕರಿಗೆ ವರವಾಗಿಸಲು ರಾಜ್ಯ ಸರ್ಕಾರ ಕೈಮಗ್ಗ ನೇಕಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಲೂಕಿನ ಕೈಮಗ್ಗ ನೇಕಾರ ಸಂಘದ ಮಾಜಿ ಅಧ್ಯಕ್ಷ ಸಿದ್ಧರೂಢ ಸನಗುಂದಿ ಅವರು ಮನವಿ ಮಾಡಿದರು.

ಪಟ್ಟಣದ ನೇಕಾರ ಕಾಲೋನಿಯಲ್ಲಿ ಶನಿವಾರ ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ವರ್ಷ ಕಳೆದಂತೆ ಕೈಮಗ್ಗ ನೇಕಾರರಿಗೆ ಸರ್ಕಾರಿ ಸೌಲಭ್ಯಗಳು ಮರೆಚಿಕೆಯಾಗಿದ್ದು, ಕೈಮಗ್ಗ ನೂಲಿಗೆ ಬೆಲೆಯಿಲ್ಲದೆ ಜೀವನ ಸಂಕಷ್ಟವಾಗಿದೆ. ಪವರಲೂಂಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದರಿಂದ ಹ್ಯಾಂಡಲೂಂಗೆ ಹೊಡೆತ ಬಿದ್ದು ಕಾರ್ಮಿಕರು ಬೀದಿಪಾಲಾಗಿದ್ದಾರೆ. ಕೈಮಗ್ಗ ನಿಗಮದ ಅನುದಾನದಿಂದಲೂ ಪವಲೂಂಗೆ ಖರ್ಚು ಮಾಡುವ ಸರ್ಕಾರ ಹ್ಯಾಂಡಲೂಂಗೆ ಅಷ್ಟೊಂದು ಖರ್ಚು ಮಾಡುತ್ತಿಲ್ಲ. ಕೈಮಗ್ಗ ಕಾರ್ಮಿಕರ ಹಿತದೃಷ್ಟಿಂದ ಹ್ಯಾಂಡ್‍ಲೂಂಗೆ ಒತ್ತು ನೀಡಿ ನೇಕಾರರ ಬದುಕಿಗೆ ಆಶ್ರಯ ನೀಡುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಎಲ್ಲ ಸರ್ಕಾರಗಳು ಕೇವಲ ಭರವಸೆಗಳನ್ನೇ ನೀಡುತ್ತಾ ಬರುತ್ತಿದ್ದು, ಆದರೆ ಈ ಉದ್ಯಮೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಪಕವಾಗಿ ಕೈಗೊಳ್ಳುತ್ತಿಲ್ಲ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರವೂ ಕೈಬಗ್ಗ ನೇಕಾರಿಕೆ ಮತ್ತು ಅದರ ಉತ್ಪನಗಳ ಖರೀದಿಸುವ ಮೂಲಕ ನೇಕಾರರಿಗೆ ಕೆಲಸ ನೀಡಬೇಕು ಎಂದು ಅವರು ಹೇಳಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣು ಕುಮಸಿ ಅವರು ಮಾತನಾಡಿ, ಕೈಮಗ್ಗ ನೇಕಾರರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಪಕ್ಷದ ರಾಜ್ಯ ಪ್ರಕೋಷ್ಠದ ಸಮಿತಿ ಸದಸ್ಯ ಸಂಜಯ ಮಿಸ್ಕಿನ್, ಜಿಲ್ಲಾ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಸುನಿಲ ಹಿರೋಳಿಕರ್ ಮಾತನಾಡಿದರು.

ಸಮಾರಂಭದಲ್ಲಿ ಮಹಿಳಾ ಮತ್ತು ಪುರುಷ ಕೈಮಗ್ಗ ನೇಕಾರರಿಗೆ ಸನ್ಮಾನಿಸಲಾಯಿತು.

ಭಾರತಿ ಪೋದ್ದಾರ, ಉಪಾಧ್ಯಕ್ಷೆ ವಂದನಾ ಪೋದ್ದಾರ, ದಮಯಂತಿ ಪಾಟೀಲ ಸಕ್ಕರಗಾ ಹಾಗೂ ವಾರ್ಡ್ ಸದಸ್ಯೆ ಕವಿತಾ ಗೋವಿಂದ, ತುಳಸಿ ಪೋದ್ದಾರ, ಆಸೀಫ್ ಅನ್ಸಾರಿ ಮತ್ತಿತರು ಪಾಲ್ಗೊಂಡಿದ್ದರು.

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜ್ಞಾನಿ ಪೋದ್ದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಪರಣ ಹೋದಲೂರಕರ್ ನಿರೂಪಿಸಿದರು. ಭಾರತಿ ಎಸ್. ಪೋದ್ದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here