ಕೃಷಿ ಪಂಪಸೆಟ್‍ಗಳಿಗೆ ಮೀಟರ್ ಅಳವಡಿಸಿದರೆ ಹೋರಾಟ: ಥಂಬೆ

0
18

ಆಳಂದ: ಕೃಷಿ ಪಂಪಸ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮುಂದಾಗಿರುವ ಕ್ರಮವನ್ನು ಕೂಡಲೇ ಕೈಬಿಡದೆ ಹೋದಲ್ಲಿ ರಾಜ್ಯದಾದ್ಯಂತ ರೈತರ ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ನಾಗೀಂದ್ರಪ್ಪ ಥಂಬೆ ಅವರು ಎಚ್ಚರಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿ ವೃಷ್ಟಿ ಅನಾವೃಷ್ಟಿಯಿಂದ ಸರ್ಪಕವಾಗಿ ಬೆಳೆ ಬೆಳೆಯಲಾಗದೆ, ಬೆಳೆದರು ಸಹ ಬೆಲೆ ದೊರೆಯದೆ ನಷ್ಟದ ನಡುವೆ ಕೋವಿಡ್ ಭೀತಿ ಲಾಕ್‍ಡೌನಲ್ಲಿ ಬೆಳೆದ ಧಾನ್ಯಗಳ ಸೂಕ್ತ ಬೆಲೆಗೆ ಮಾರಾಟವಾಗದೆ, ಕೃಷಿ ಭಿಕ್ಕಟ್ಟಿನಲ್ಲಿರುವ ರೈತ ಸಮೂದಾಯಕ್ಕೆ ಪಂಪಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಸಿ ಬಿಲ್ ವಸೂಲಿಗೆ ಮುಂದಾಗಿರುವ ಕ್ರಮ ರೈತ ವಿರೋಧಿ ದೋರಣೆ ಇದಾಗಿದೆ ಎಂದು ಆರೋಪಿಸಿದರು.
ರೈತರು ಬೆಳೆದ ಉದ್ದು, ಹೆಸರು, ತೊಗರಿ ಸೇರಿ ಇನ್ನೂಳದ ಧಾನ್ಯಗಳಿಗೆ ಬೆಂಬಲ ಬೆಲೆ ನಿಗಧಿಪಡಿಸಬೇಕು.

Contact Your\'s Advertisement; 9902492681

ಪಂಪಸೆಟ್‍ಗಳಿಗೆ ಮೀಟರ್ ಅಳವಡಿಸುವಂತೆ ನೀತಿಗಳನ್ನು ಕೈಬಿಟ್ಟು ರೈತರಿಗೆ ಅನುಕೂಲಕರ ಯೋಜನೆಗಳು ಜಾರಿಗೆ ತಂದು ಕೃಷಿಯನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು.

ಜುಲೈ ತಿಂಗಳಲ್ಲಿ ತಾಲೂಕಿನ ಎಲ್ಲಡೆ ಸತತವಾಗಿ ಸುರಿದ ಮಳೆಯಿಂದ ಮುಂಗಾರಿನ ಉದ್ದು, ಹೆಸರು ತೊಗರಿ ಬೆಳೆ ಹಾನಿಗಿಯಾಗಿ ರೈತರಿಗೆ ತೊಂದರೆ ಆಗಿದೆ.

ಹಾಳಾದ ಬೆಳೆಯ ಕುರಿತು ಅಧಿಕಾರಿಗಳ ಮೂಲಕ ಜಂಟಿ ಸರ್ವೆ ಕೈಗೊಂಡು ಕೂಡಲೇ ಪರಿಹಾರ ಒದಗಿಸಿ ಹಿಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here