ಸುರಪುರ: ತಾಲೂಕಿನ ಶಿಬಾರಬಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಮುಖಂಡರು ಶಿಕ್ಷಣ ಸಚಿವ ಹಾಗು ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ರವಿನಾಯಕ ಬೈರಿಮಡ್ಡಿ ಶಿಬಾರಬಂಡಿ ಗ್ರಾಮಕ್ಕೆ ಕುಡಿಯುವ ನೀರು,ರಸ್ತೆ ಮತ್ತು ಶಾಲೆ,ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ವಿನಂತಿಸಿದರು.ಅಲ್ಲದೆ ತಿಪ್ಪನಟಗಿ ಗ್ರಾಮದಲ್ಲಿ ಗೋಮಾಳ ಜಾಗದಲ್ಲಿ ಆಸ್ಪತ್ರೆ ಶಾಲೆ ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಒದಗಿಸಲು ಮನವಿ ಮಾಡಿದರು ಹಾಗು ಪೇಠ ಅಮ್ಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಾಹಿಲ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ),ಜಿಲ್ಲಾಧಿಕಾರಿ ಡಾ:ರಾಗಪ್ರಿಯ ಆರ್,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶಿಲ್ಪಾ ಶರ್ಮಾ, ಎಸ್ಪಿ ಸಿ.ಬಿ.ವೇದಮೂರ್ತಿ,ಡಿಹೆಚ್‌ಒ ಇಂದುಮತಿ ಕಾಮಶೆಟ್ಟಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಟಿಹೆಚ್‌ಒ ಡಾ:ಆರ್.ವಿ.ನಾಯಕ ಹಾಗು ಸಂಘಟನೆಯ ಮುಖಂಡರಾದ ಶರಣಪ್ಪ ಬೈರಿಮಡ್ಡಿ,ಮಲ್ಲು ನಾಯಕ ಕಬಾಡಗೇರಿ,ಯಲ್ಲಪ್ಪ ನಾಯಕ ಕಬಾಡಗೇರಾ,ರಾಘವೇಂದ್ರ ಗೋಗಿಕರ್,ಅಂಬ್ರೇಶ ಪೂಜಾರಿ,ವೆಂಕಟೇಶ ರಾಮಬಾಣ,ಬಸವರಾಜ ಸಿದ್ದಪ್ಪ,ರಂಗನಾಥ ರಾಮಬಾಣ,ವೆಂಕೋಬ ಪೂಜಾರಿ,ಚಂದಪ್ಪ ರಾಮಬಾಣ ಹಾಗು ಮೌನೇಶ ಸಂಗಪ್ಪ ಸೇರಿದಂತೆ ಅನೇಕರಿದ್ದರು.