ಸುರಪುರ: ನಗರದ ಡೊಣ್ಣಿಗೇರಾ ಬಡಾವಣೆಯ ದೇವಿಂದ್ರಪ್ಪ ಮಾಸ್ಟರ್ ಮನೆಯ ಆವರಣದಲ್ಲಿ ಕಂಪ್ಯಾಸಿಯನ್ ಚಾರಿಟೇಬಲ್ ಟ್ರಸ್ಟ್ ,ಜೆ.ಸಿ.ಐ ಯೂತ್ಸ್ ಮತ್ತು ಕರುಣಾಲಯ ಮಕ್ಕಳ ಪಾಲನಾ ಕೇಂದ್ರದ ಸಹಯೋಗದಲ್ಲಿ ಉಚಿತ ಟ್ಯೂಷನ್ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಬಡ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳಾದ ನೋಟ್ ಬುಕ್ಸ್,ಬ್ಯಾಗ್,ಪೆನ್,ಪೆನ್ಸಿಲ್ ಸೇರಿದಂತೆ ಅನೇಕ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ಗೃಹರಕ್ಷಕ ದಳದ ಕಂಪನಿ ಕಮಾಂಡರ್ ಹಾಗು ನ್ಯಾಯವಾದಿ ಯಲ್ಲಪ್ಪ ಹುಲಿಕಲ್ ಮಾತನಾಡಿ,ಕೊರೊನಾ ಹಾವಳಿಯಿಂದಾಗಿ ಕಳೆದ ಮೂರು ವರ್ಷದಿಂದ ಸರಿಯಾಗಿ ಶಿಕ್ಷಣ ದೊರೆಯದೆ ವಂಚಿತರಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಈ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ಕೊಡಲು ಮುಂದೆ ಬಂದಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಕರುಣಾಲಯ ಮಕ್ಕಳ ಪಾಲನಾ ಕೇಂದ್ರದ ಅಧ್ಯಕ್ಷರಾದ ಪಾಸ್ಟರ್ ಪರಶುರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರದ ಶಿಕ್ಷಕಿ ಚಂದ್ರಕಲಾ,ಮೇಲ್ವಿಚಾರಕಿ ಅಪ್ಪಣ್ಣ,ಅನುಶ್ರೀ,ಚೇತನ್ ಕುಮಾರ,ಮಹಾಲಿಂಗ ಸೇರಿದಂತೆ ಅನೇಕರು ಭಾಗವಹಿಸಿದ್ದರು.