ವಯೋವೃದ್ಧರ ಮನೆಗೆ ತೆರಳಿ ಪಿಂಚಣಿ ಸೌಲಭ್ಯ ಕಲ್ಪಿಸಿ: ಐವಾನ್ ಡಿಸೋಜಾ

0
66

ಕಲಬುರಗಿ: ವಯೋವೃದ್ಧ ಹಿರಿಯ ಜೀವಿಗಳು ಕಚೇರಿಗೆ ಅಲೆದಾಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯ ಸೌಲಭ್ಯ ಪಡೆಯುವುದು ಕಷ್ಠ. ಇಂತಹ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಿಗರು ಮತು ಇತರೆ ಸಿಬ್ಬಂದಿಗಳನ್ನು ವಯೋವೃದ್ದರು ವಾಸವಿರುವ ಮನೆಗಳಿಗೆ ಕಳುಹಿಸಿ ದಾಖಲೆಗಳನ್ನು ಪಡೆದು ಪರಿಶೀಲಿಸಿ ಅವರಿಗೆ ಪಿಂಚಣಿ ಸೌಲಭ್ಯಗಳನ್ನು ಮಂಜೂರಾತಿಗೆ ಆದೇಶ ನೀಡಬೇಕು ಎಂದು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ೧.೯೦ ಲಕ್ಷ ಜನ ಸಾಮಾಜಿಕ ಪಿಂಚಣಿ ಪಡೆಯುತ್ತಿದ್ದು, ಅವರೆಲ್ಲರು ಸಮಪರ್ಕವಾಗಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆಯೆ ಎಂಬುದನ್ನು ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆಯಿರಿ ಎಂದರು.

Contact Your\'s Advertisement; 9902492681


ಸಾಮಾಜಿಕ ಪಿಂಚಣಿಯ ಸಮಸ್ಯೆಗಳು ಮತ್ತು ಕಂದಾಯ ಇಲಾಖೆಯ ಕುಂದುಕೊರತೆಗಳ ನಿವಾರಣೆಗೆ ಜಿಲ್ಲಾಧಿಕಾರಿಗಳು ಹೋಬಳಿ ಮಟ್ಟದಲ್ಲಿ ನಿಯಮಿತವಾಗಿ ಪಿಂಚಣಿ ಮತ್ತು ಕಂದಾಯ ಅದಾಲತ್ ನಡೆಸಿ ಸ್ಥಳದಲ್ಲಿಯೆ ಪರಿಹಾರಕ್ಕೆ ಮುಂದಾಗಬೇಕು. ಪಿಂಚಣಿ ಆದೇಶ ಪಡೆದರು ನಾನಾ ಕಾರಣಗಳಿಂದ ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ಜಮಾವಾಗುವುದಿಲ್ಲ. ಇಂತಹ ಅನೇಕ ಸಮಸ್ಯೆಗಳನ್ನು ಅದಾಲತ್‌ನಲ್ಲಿ ಬಗೆಹರಿಸಬಹುದಾಗಿದೆ ಎಂದು ಐವಾನ್ ಡಿಸೋಜಾ ತಿಳಿಸಿದರು.

ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಶಹಾಬಾದ, ಕಾಳಗಿ, ಕಮಲಾಪುರ ಮತ್ತು ಯಡ್ರಾಮಿಯಲ್ಲಿ ತಾಲೂಕು ಕಚೇರಿಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರವು ೧೦ ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಕೂಡಲೇ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ಬರ ನಿರ್ವಹಣೆಗೆ ಜಿಲ್ಲೆಯಲ್ಲಿ ಒಟ್ಟಾರೆ ೬೯೭ ಕಾಮಗಾರಿಗಳನ್ನು ಟಾಸ್ಕ್ ಫೋರ್ಸ್‌ನಡಿ ಕೈಗೊಂಡಿದ್ದು, ಇದರಲ್ಲಿ ಈಗಾಗಲೆ ೬೪೩ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ೮.೧೨ ಕೋಟಿ ರೂ. ಅನುದಾನ ವ್ಯಯ ಮಾಡಲಾಗಿದೆ. ಜಿಲ್ಲೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆಯಿಲ್ಲ. ಜಿಲ್ಲೆಯ ೧೯ ಕಡೆ ಮೇವು ಬ್ಯಾಂಕ್ ಸ್ತಾಪಿಸಲಾಗಿದೆ. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೭೫ ರೈತರಿಗೆ ತಲಾ ೫ ಲಕ್ಷ ರೂ.ಗಳಂತೆ ಪರಿಹಾರ ಧನ ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸದಿಯ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು ಕೆಲ ಫಲಾನುಭವಿಗಳಿಗೆ ವೃದ್ದಾಪ್ಯ ವೇತನ, ವಿಕಲಚೇತನ ವೇತನ, ವಿಧವಾ ವೇತನ ಮತ್ತು ಸಂಧ್ಯಾ ಸುರಕ್ಷಾ ವೇತನ ಮಂಜೂರಾತಿಯ ಆದೇಶ ಪತ್ರವನ್ನು ವಿತರಣೆ ಮಾಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತರಾದ ರಾಹುಲ ಪಾಂಡ್ವೆ, ವೀರಮಲ್ಲಪ್ಪ ಪೂಜಾರ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ತಾಲೂಕಿನ ತಹಶೀಲ್ದಾರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here