ಸುರಪುರ: ತಾಲೂಕಿನ ಅನೇಕ ಗ್ರಾಮಗಳಲ್ಲಿನ ಲಕ್ಷಾಂತರ ರೂಪಾಯಿಗಳ ಅಭೀವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಬುಧವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಗುದ್ದಲಿ ಪೂಜೆ ಕಾರ್ಯಕ್ರiದಲ್ಲಿ ಭಾಗವಹಿಸಿದ ರಾಜುಗೌಡ ಮೊದಲಿಗೆ ಶೆಳ್ಳಗಿ ಗ್ರಾಮದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಸುಮಾರು ೮೦ ಲಕ್ಷ ರೂಪಾಯಿಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.ಜೊತೆಗೆ ೨೨ ಲಕ್ಷ ಅನುದಾನದಲ್ಲಿ ೨ ಶಾಲಾ ಕೋಣೆಗಳ ನಿರ್ಮಾಣಕ್ಕೆ ಹಾಗು ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ೫೩ ಲಕ್ಷ ರೂಪಾಯಿಗಳ ಪೈಪ್ ಲೈನ್ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ನಂತರ ಮುಷ್ಠಹಳ್ಳಿ ಗ್ರಾಮಕ್ಕೆ ತೆರಳಿ ಎಎಒ ಯೋಜನೆ ಅಡಿಯಲ್ಲಿ ೨೩.೪೫ ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿರುವ ಪೈಪ್ ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು ಅಲ್ಲದೆ ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಭೀವೃಧ್ಧಿ ಮಂಡಳಿ ಅನುದಾನದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಲಾಗಿರುವ ೨ ಶಾಲಾ ಕೋಣೆಗಳನ್ನು ಉದ್ಘಾಟಿಸಿದರು.
ನಂತರ ಅರಳಹಳ್ಳಿ ಗ್ರಾಮದಲ್ಲಿ ೧೦೮.೨೮ ಲಕ್ಷ ರೂಪಾಯಿಗಳಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ನಿರ್ಮಿಸಲಿರುವ ಪೈಪ್ ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ,ಕಾಮಗಾರಿಗಳನ್ನು ಗುತ್ತಿಗೆ ಪಡೆದವರು ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಆದ್ಯತೆ ನೀಡಿ,ಯಾವುದೇ ಕಳಪೆ ಕಾಮಗಾರಿ ಕಂಡುಬಂದಲ್ಲಿ ಅಂತವರ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ಕಾಮಗಾರಿ ನಿರ್ಮಾಣಕ್ಕೆ ಇರುವ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಒದಗಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ,ಶಾಂತಗೌಡ ಚೆನ್ನಪಟ್ಟಣ,ಎಪಿಎಮ್‌ಸಿ ಅಧ್ಯಕ್ಷ ದುರಗಪ್ಪ ಗೋಗಿಕೇರಿ,ಹೆಚ್.ಸಿ.ಪಾಟೀಲ್, ದೊಡ್ಡ ದೇಸಾಯಿ ದೇವರಗೋನಾಲ,ಭೀಮಣ್ಣ ಬೇವಿನಾಳ,ರಾಜಾ ಜಯರಾಮ ನಾಯಕ ಹಾಗು ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೂಗರಡ್ಡಿ,ದೇವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ಗುತ್ತೇದಾರ,ಪಿಡಿಒ ಬಾಬು ದೊರೆ ಸೇರಿದಂತೆ ಅನೇಕರಿದ್ದರು.