ಸುರಪುರ: ರಾಜ್ಯ ರಾಜಕಾರಣದಲ್ಲಿ ಸಚಿವ ಆನಂದ ಸಿಂಗ್ ಅವರ ಖಾತೆ ಅಸಮಧಾನದಿಂದ ಉಂಟಾದ ಗೊಂದಲಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಮುಂದಾಗಿದ್ದು ಬುಧವಾರ ಹೆಲಿಕಾಪ್ಟರ್ ಮೂಲಕ ದಿಢೀರನೆ ಬೆಂಗಳೂರಿಗೆ ಬೆಳೆಸಿದ ಪ್ರಯಾಣ ಸಾಕ್ಷಿಯಾಯಿತು.
ಬುಧವಾರ ಬೆಳಿಗ್ಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭೀವೃಧ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಾಜುಗೌಡ ಅವರಿಗೆ ಬಂದ ಒಂದು ಕರೆ ತಕ್ಷಣಕ್ಕೆ ಬೆಂಗಳೂರಿಗೆ ಹೊರಡುವಂತೆ ಮಾಡಿತು.ಅಲ್ಲದೆ ಇತ್ತ ನಗರದ ಟೈಲರ್ ಮಂಜಿಲ್‌ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಲ್ಲಿ ಸ್ವಚ್ಛತಾ ಕಾರ್ಯ ಆರಂಭಗೊಂಡಿತ್ತು.ಆದರೆ ಜನರಿಗೆ ಇದ್ಯಾವುದರ ಮಾಹಿತಿ ಇಲ್ಲದೆ ಹೆಲಿಪ್ಯಾಡ್ ಸ್ವಚ್ಛತೆಗೆ ಏನು ಕಾರಣ ಎನ್ನುವುದರ ಕುತೂಹಲದಲ್ಲಿದ್ದರು.ಆದರೆ ಶಾಸಕ ರಾಜುಗೌಡ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ ಎನ್ನುವ ಮಾಹಿತಿ ಜನರಿಗೆ ತಿಳಿಯುತ್ತಿದ್ದಂತೆ ತಂಡೋಪ ತಂಡವಾಗಿ ಜನರು ಹೆಲಿಕಾಪ್ಟರ್ ನೋಡಲು ಟೈಲರ್ ಮಂಜಿಲ್‌ನತ್ತ ಪ್ರಯಾಣ ಆರಂಭಿಸಿದ್ದರು.
ನಂತರ ೧೨ ಗಂಟೆಗೆ ನೇರವಾಗಿ ಹೆಲಿಪ್ಯಾಡ್‌ಗೆ ಆಗಮಿಸಿದ ಶಾಸಕ ರಾಜುಗೌಡ ನೇರವಾಗಿ ಸಿದ್ಧವಾಗಿ ನಿಂತಿದ್ದ ಹೆಲಿಕಾಪ್ಟರ್‌ನತ್ತು ಹೊರಡುತ್ತಿದ್ದಂತೆ ಜನರು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ ’ನಮ್ಮ ನಾಯಕರಾದ ಯಡಿಯೂರಪ್ಪನವರ ನಿರ್ದೇಶನದಂತೆ ಈಗ ಜಿಂದಾಲ್‌ಗೆ ತೆರಳಿ ನಂತರ ಅಲ್ಲಿಂದ ಬೆಂಗಳೂರಿಗೆ ಹೊರಡುತ್ತಿರುವುದಾಗಿ’ ತಿಳಿಸಿದರು.
ಇತ್ತ ಜನರಿಗೆ ಹೆಲಿಕಾಪ್ಟರ್ ಮೂಲಕ ದೀಢೀರನೆ ರಾಜುಗೌಡ ಬೆಂಗಳೂರಿಗೆ ಹೊರಡುತ್ತಿದ್ದಂತೆ ಜನರು ರಾಜುಗೌಡರಿಗೆ ಸಚಿವ ಸ್ಥಾನ ನೀಡಲು ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾರೆ ಎಂದು ಸುದ್ದಿ ಇಡೀ ತಾಲೂಕಿನಾದ್ಯಂತ ಹರಡಲಾರಂಭಿಸಿತ್ತು.
ಅಲ್ಲದೆ ಅನೇಕ ಜನರು ತಮ್ಮದೆ ಕಲ್ಪನೆಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದುದು ಕಂಡುಬಂತು.ನಂತರ ಮಾದ್ಯಮಗಳಲ್ಲಿ ಸುದ್ದಿ ಹರದಾಡಿ ಸಚಿವ ಆನಂದ ಸಿಂಗ್ ಅವರು ತಮ್ಮಿಷ್ಟದ ಖಾತೆ ಸಿಗದಿರುವುದಕ್ಕೆ ಉಂಟಾದ ವಿವಾದ ಬಗೆಹರಿಸಲು ಯಡಿಯೂರಪ್ಪನವರು ಶಾಸಕ ರಾಜುಗೌಡ ಅವರಿಗೆ ಆನಂದ ಸಿಂಗ್ ಅವರನ್ನು ಭೇಟಿ ಮಾಡಲು ಕರೆ ನೀಡಿದ್ದಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ ಎಂದು ಜನರಿಗೆ ತಿಳಿಯುತ್ತಿದ್ದಂತೆ ಜನರ ಕುತೂಹಲಕ್ಕೆ ತಣ್ಣೀರು ಎರಚಿದಂತಾಗಿತ್ತು.