ಸ್ವಾತಂತ್ರ್ಯಕ್ಕಾಗಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್

0
49

ಶಹಾಬಾದ: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್ ಎಂದು ಎಐಡಿಎಸ್‍ಓ ಅಧ್ಯಕ್ಷ ತುಳಜರಾಮ.ಎನ್.ಕೆ ಹೇಳಿದರು.

ಅವರು ನಗರದ ಎಐಡಿಎಸ್‍ಓ ಕಛೇರಿಯಲ್ಲಿ ಆಯೋಜಿಸಲಾದ ಸ್ವಾತಂತ್ರ ಸಂಗ್ರಾಮದ ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ರವರ 114 ನೇ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕಿಂಗ್ಸ್ ಫೆÇರ್ಡ್ ಎಂಬ ಬ್ರಿಟೀμï ನ್ಯಾಯಾಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೆÇರ್ಡ್ ನನ್ನ ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೆÇರ್ಡ್ ಬಚಾವಾದ. ಆದರೂ ಆ ಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲುಶಿಕ್ಷೆಯಾಯ್ತು.

ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿμï ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿದ ಈ ಕೆಲಸದ ರೂವಾರಿ ಹತ್ತೊಂಭತ್ತರ ಹುಡುಗ ಖುದಿರಾಮ್ ಭೋಸ್. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಬಾರಿಗೆ ಬಾಂಬ್ ಬಳಸಿದ್ದು ಕೂಡ ಇದೇ ಖುದಿರಾಮ್ ಬೋಸ್ ಎಂದು ಹೇಳಿದರು.

ಎಐಡಿಎಸ್‍ಓ ಉಪಾಧ್ಯಕ್ಷ ರಮೇಶ ದೇವಕರ ಮಾತನಾಡಿ, ಖುದಿರಾಮ್ ಬೋಸ್ ಹುತಾತ್ಮರಾಗಿ 114 ವರ್ಷಗಳು ಕಳೆಯುತ್ತವೆ. ಆದರೆ ಇಂದಿಗೂ ಅವರು ಪ್ರೀತಿಯಿಂದ ಕಂಡ ಬಡಜನರ, ರೈತ-ಕಾರ್ಮಿಕರ ಮೇಲಿನ ಶೋಷಣೆ ನಿಂತಿಲ್ಲ. ಈ ದೇಶದ ವಿದ್ಯಾರ್ಥಿಗಳು, ಯುವಕರು ನಾವು ಖುದಿರಾಮ್ ರ ಹೋರಾಟದ ಕಿಚ್ಚನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕಿದೆ. ಅವರ ಕನಸಿನಂತೆ ಬಡಜನರ ಮೇಲಿನ ಶೋಷಣೆಯನ್ನು ಕೊನೆಮಾಡಲು ಪಣತೊಡಬೇಕಿದೆ. ಆಗ ಮಾತ್ರವೇ ನಾವು ಖುದಿರಾಮ್ ಬೋಸ್ ರಿಗೆ ನಿಜವಾದ ಗೌರವವನ್ನು ಸಲ್ಲಿಸಲು ಸಾಧ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಐಡಿಎಸ್‍ಓ ಕಿರಣ್.ಜಿ.ಮಾನೆ, ಸುರೇಶ ವಾಸ್ಟರ್, ಸಾಕ್ಷಿ.ಜಿ.ಮಾನೆ, ಅಜಯ್, ಚೇತನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here