ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕ್ಷೇತ್ರಿಯ ಕಾರ್ಯಾಲಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸಹಾಯಕ ಭವಿಷ್ಯ ನಿಧಿ ಆಯುಕ್ತ ಸುಪ್ರತಿಕ ದಾಶ್ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಸಂಜಯ ಬಿರ್ಜೆ, ವಿಠ್ಠಲ, ಜಿ.ಎಮ್.ಅಪ್ಸರ, ಬಸವರಾಜ ಹೆಳವರ ಯಾಳಗಿ, ಪಿ. ಮನೋಜಕುಮಾರ, ಪಿ. ರಾಜಕುಮಾರ, ಕಲ್ಪನಾ ಮಧಬಾವಿ, ಚಿಂದಮ ರಾಮು, ಪ್ರತಿಭಾ, ಕೇಶವರಾವ ಕುಲಕರ್ಣಿ, ಮನಿಷಾ ಗಡ್ಡಿಪರ್ತಿ, ಕಿರಣಕುಮಾರ ಮತ್ತು ಇನ್ನಿತರರಿದ್ದರು.