ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ ಸರಕಾರಕ್ಕೆ ಸಮಿತಿ ಗಡುವು

0
110

ಕಲಬುರಗಿ : ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿ ಮಂಡಳ ಸೇರಿದಂತೆ ಎಲ್ಲಾ ಕ್ಷೇತ್ರಗಳ ಪ್ರತಿನಿಧಿತ್ವ ನೀಡುವಲ್ಲಿ ನಿರ್ಲಕ್ಷತನ, ಮಲತಾಯಿ ಧೋರಣೆ ಅದರಂತೆ ಅಬಿವೃದ್ಧಿ ವಿಷಯದಲ್ಲಿ ನಿರಂತರವಾಗಿ ಕಡೆಗಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ, ಕಲ್ಯಾಣ ಕರ್ನಾಟಕದ ಜನಮಾನಸದ ವತಿಯಿಂದ ನಮ್ಮ ಪ್ರದೇಶದ ಪ್ರಗತಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಬೇಡಿಕೆಯಂತೆ ಬರುವ ನವ್ಹೆಂಬರ್ ರಾಜ್ಯೋತ್ಸವದ ಒಳಗೆ ಕಲ್ಯಾಣ ಕರ್ನಾಟಕ ಪ್ರದೆಶಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ, ನ್ಯಾಯ ನೀಡಲು ಇಂದಿನ ಸಮಿತಿಯ ಸಭೆಯಲ್ಲಿ ಸರ್ವಾನುಮತದ ನಿರ್ಣಯದಂತೆ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಸರಕಾರಕ್ಕೆ ಎಚ್ಚರಿಕೆಯ ಗಡುವು ನೀಡಿದ್ದಾರೆ.

ಹಿಂದಿ ಪ್ರಚಾರ ಸಭಾದಲ್ಲಿ ಜರುಗಿದ ಇಂದಿನ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸರಕಾರ ನಿರಂತರ ಅನ್ಯಾಯ, ಮಲತಾಯಿ ಧೋರಣೆ ಕುರಿತು ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯ ಬಗ್ಗೆ ನಮ್ಮ ಜನಪ್ರತಿನಿಧಿಗಳು ಸಹಿಸಿಕೊಳ್ಳುತ್ತಿರುವುದು ಖೇದಕರವಾದ ವಿಷಯವಾಗಿದೆ.

Contact Your\'s Advertisement; 9902492681

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತರ ಕರ್ನಾಟಕದವರಾಗಿದ್ದರೂ ಸಹ ಅವರ ಕಣ್ಣಿಗೆ ಕಲ್ಯಾಣ ಕರ್ನಾಟಕ ಕಾಣುತ್ತಿಲ್ಲ, ಕೇವಲ ಉತ್ತರ ಕರ್ನಾಟಕವೆಂದರೆ ಮುಂಬೈ ಕರ್ನಾಟಕ ಮಾತ್ರ ಕಾಣುತ್ತಿದೆ. ಪ್ರಸ್ತುತ ನಮ್ಮ ಪ್ರದೇಶಕ್ಕೆ ಆಗಿರುವ ಅವಮಾನ ರೀತಿಯ ಧೋರಣೆ ಖಂಡನೀಯ ವಾಗಿದೆ ಎಂದು ಸಮಿತಿಯ ಸಭೆಯಲ್ಲಿ ಭಾಗವಹಿಸಿದ ಮುಖಂಡರು ಖಂಡಿಸಿದರು.

ಈ ಸಭೆಯಲ್ಲಿ ಮುಖಂಡರಾದ ಮನೀಷ್ ಜಾಜು, ಅಶೋಕ ಗುರುಜಿ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಸಾಲೋಮನ ದಿವಾಕರ, ಸಂತೋಷ ಜವಳಿ, ಬಿ.ಬಿ. ನಾಯಕ, ಡಾ. ಭದ್ರಶೆಟ್ಟಿ ಎ.ಎಸ್. ವೀರೇಶ ಪುರಾಣಿಕ, ರಾಜೆ ಶಿವಶರಣ, ಅಬ್ದುಲ ರಹೀಮ್, ಅಸ್ಲಂ ಚೌಂಗೆ, ರಾಜು ಜೈನ್, ಮಲ್ಲಮ್ಮ ಕಾಡಾ, ಗಿರೀಶ ಗೌಡ, ಶಿವಾನಂದ ಕಾಂದೆ, ಶಿವುಕುಮಾರ ಬಿರಾದಾರ, ಬಾಬಾ ಫಕ್ರೋದ್ದೀನ್, ಸಾಬೀರ ಅಲಿ, ಅಂಬಾರಾಯ ಬಿ., ಗೌತಮ್ ಕಾಂಬ್ಳೆ, ವಿಶಾಲದೇವ ಧನೇಕರ, ಅಂಬಾರಾಯ, ಹಾರಕುಡೆ, ಶರಣು, ಜಗದೇವಿ, ಮುನ್ನೀ ಬೇಗಂ, ಮುಮ್ತಾಜ ಬೇಗಂ, ಫರಜಾನ ಬೇಗಂ ಇವರುಗಳು ಮಾತನಾಡಿದರು. ಸಭೆಯಲ್ಲಿ ನೂರಾರು ಜನ ಕ್ರೀಯಾ ಸದಸ್ಯರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here