ಭಗತ್, ಬೋಸ್ ಕನಸಿನ ಭಾರತ ಕಟ್ಟಲು ಪ್ರತಿಜ್ಞೆ

0
11

ವಾಡಿ: ಭಾರತದಲ್ಲಿ ಕೇವಲ ತೋರಿಕೆಯ ಸ್ವಾತಂತ್ರ್ಯ ಸಂಭ್ರಮ ಎದ್ದುಕಾಣುತ್ತಿದೆ. ವಾಸ್ತವದಲ್ಲಿ ಬ್ರಿಟೀಷರ ದಬ್ಬಾಳಿಕೆ ಕೊನೆಯಾದ ಬಳಿಕ ಬಂಡವಾಳಶಾಹಿಗಳ ಶೋಷಣೆ ಮುಂದುವರೆದಿದೆ. ಸರ್ವ ಸಮಾನತೆಗಾಗಿ ಸಮಾಜವಾದಿ ರಾಷ್ಟ್ರ ಸ್ಥಾಪನೆ ಅತ್ಯಗತ್ಯವಾಗಿದ್ದು, ಮತ್ತೊಂದು ಕ್ರಾಂತಿಗೆ ಭಾರತೀಯರು ಸಿದ್ಧರಾಗಬೇಕಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಜಿಲ್ಲಾಧ್ಯಕ್ಷ ಹಣಮಂತ ಎಸ್.ಎಚ್. ಹೇಳಿದರು.

ಪಟ್ಟಣದಲ್ಲಿ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳುವಳಿಯ ದೀರ ಹುತಾತ್ಮ ಶಹೀದ್ ಭಗತ್‍ಸಿಂಗ್ ಮತ್ತು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕನಸಿನ ಸಮಾಜವಾದದ ಭಾರತ ನಿರ್ಮಿಸುವ ವಿದ್ಯಾರ್ಥಿಗಳ ಪ್ರತಿಜ್ಞಾ ದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬಡತನ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಅಸಮಾನತೆ, ಅನ್ಯಾಯಗಳಿಂದ ತುಂಬಿರುವ ದೇಶದಲ್ಲಿ ಇಂದು ನಾವೆಲ್ಲರೂ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದೇವೆ.

ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ನಡೆದ ಹೋರಾಟದಲ್ಲಿ, ಲಕ್ಷಾಂತರ ಹೋರಾಟಗಾರರ ತ್ಯಾಗ-ಬಲಿದಾನಗಳಿಂದ ನಾವು ಇಂದು ಈ ಸ್ವಾತಂತ್ರ್ಯವನ್ನು ಗಳಿಸಿದ್ದೇವೆ. ಮಹಾನ್ ನವೋದಯ ಚಿಂತಕರಾದ ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಶರತ್‍ಚಂದ್ರ ಚಟರ್ಜಿ, ಸುಬ್ರಮಣ್ಯ ಭಾರತಿ ಮತ್ತಿತರ ವ್ಯಕ್ತಿಗಳು ಸಮಾಜದಲ್ಲಿನ ಅಂದಿನ ಗೊಡ್ಡು ನಂಬಿಕೆಗಳು, ಸಂಪ್ರದಾಯಗಳ ಆಚರಣೆಗಳ ವಿರುದ್ಧ ಸಿಡಿದು ನಿಂತವರಲ್ಲಿ ಹಾಗೂ ಪ್ರಜಾಸತ್ತಾತ್ಮಕ ಮತ್ತು ಮಾನವತಾವಾದಿ ಮೌಲ್ಯಗಳನ್ನು ಹರಡಿದವರಲ್ಲಿ ಮೊದಲಿಗರಾಗಿದ್ದರು.

ಅದರಲ್ಲಿಯೂ ಅಂದಿನ ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಸಾಂಪ್ರದಾಯಿಕ ಮತ್ತು ಹಳೆಯ ಮೌಲ್ಯಗಳ ಆಧಾರದ ಮೇಲೆ ಬಂಧಿಯಾಗಿ ಜೀವಿಸಬೇಕಾಗಿದ್ದ ಕಾಲದಲ್ಲಿ ಇವರ ವಿಚಾರಗಳು ಅವರನ್ನು ಸ್ವತಂತ್ರಗೊಳಿಸಿದವು ಎಂದರು.

ಇಂದಿನ ಸಂದಿಗ್ಧ ಪರಿಸ್ಥಿಯಲ್ಲಿ ಭಗತ್‍ಸಿಂಗ್ ಹಾಗೂ ನೇತಾಜಿ ಬೋಸ್ ಅವರು ಕಂಡ ಕನಸಾಗಿದ್ದ ಮಾನವನಿಂದ ಮಾನವನ ಶೋಷಣೆಯ ಮುಕ್ತ ಸಮಾಜವಾದಿ ಭಾರತದ ನಿರ್ಮಾಣವೊಂದೇ ನಮಗಿರುವ ಮಾರ್ಗ. ಈ ವ್ಯವಸ್ಥೆಯನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯು ಬಹುಮುಖ್ಯ ಪಾತ್ರವಹಿಸುತ್ತದೆ. ಸಮಾಜವಾದಿ ಭಾರತದ ನಿರ್ಮಾಣ ಪ್ರತಿಜ್ಞೆ ತೊಡುವ ಮೂಲಕ ನಿಜವಾದ ಸ್ವತಂತ್ರ ಭಾರತದ ಆಶಯವನ್ನು ಸಾಕಾರಗೊಳಿಸೋಣ ಎಂದರು.
ಎಐಡಿಎಸ್‍ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ, ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಅರುಣಕುಮಾರ ಹೀರೆಬಾನರ, ದತ್ತು ಹುಡೇಕರ, ಸಿದ್ರಾಜ್ ಮದ್ರಿ, ಸುನೀಲ ಪೂಜಾರಿ, ಪ್ರಕಾಶ ಪವಾರ, ಅನ್ವರ್ ಖಾನ್, ಭೀಮರಾಯ, ಸಿದ್ಧಾರ್ಥ ತಿಪ್ಪನೂರ, ಮಂಜುನಾಥ, ಪ್ರವೀಣ, ಅರುಣ, ವಿನಯ ದಂಡಬಾ, ಶ್ರೀನಿವಾಸ, ಮೌನೇಶ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here