ಸೇಡಂ: ದೇಶಭಕ್ತಿ, ಸ್ವಾತಂತ್ರ್ಯದ ಉತ್ಸಾಹದ ಎದುರಿಗೆ ನಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಇಂತಹ ಸಕಾರ್ಯದಲ್ಲಿ ಪಾಲ್ಗೊಳ್ಳುವುದು ಖುಷಿ ತರುತ್ತದೆ. ಮಧ್ಯರಾತ್ರಿಯಲ್ಲಿ ಹಿರಿ ಯರು, ಕಿರಿಯರು, ಓಣಿಯ ಸಕಲ ದೇಶ ಬಾಂಧವರು ಸೇರಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದನ್ನು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಸೇಡಂನ ತಹಸೀಲ್ದಾರರಾದ ಬಸವರಾಜ ಬೆಣ್ಣೆಶಿರೂರು ಹೇಳಿದರು.
ಪಟ್ಟಣದ ವಾರ್ಡ್ ನಂಬರ್ 1 ಸಣ್ಣ ಅಗಸಿಯಲ್ಲಿ ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ 25 ನೇ ಆಚರಣೆಯನ್ನು 75ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದು, ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪತ್ರಕರ್ತ,ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಯುವಕರನ್ನು ಒಗ್ಗೂಡಿಸಿ, 25 ವರ್ಷದ ಹಿಂದೆ ಇಂತಹ ಉತ್ತಮ ದೇಶಪ್ರೇಮದ ಕಾರ್ಯಕ್ರಮ ರೂಪಿಸಿದ್ದಲ್ಲದೇ, ನಿರಾತಂಕವಾಗಿ ನಡೆಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರು. ಕಳೆದ ಏಳೆಂಟು ವರ್ಷಗಳಿಂದ ಯುವಕರಾದ ಜನಾರ್ಧನರೆಡ್ಡಿ ತುಳೇರ ತಮ್ಮ ಗೆಳೆಯರೊಂದಿಗೆ ನಡೆಸಿಕೊಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಸದಸ್ಯ ಶಿವಶರಣರೆಡ್ಡಿ ಪಾಟೀಲ ಅತಿಥಿಗಳಾಗಿದ್ದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ವೈದ್ಯರು, ರೈತರು, ಸರಕಾರಿ ಅಧಿಕಾರಿಗಳು ಸೇರಿದಂತೆ 25 ಜನರನ್ನು ಸನ್ಮಾನಿಸಲಾಯಿತು.
ಹಿರಿಯರು ಮತ್ತು ರೈತರಾದ ಚಿನ್ನಪ್ಪ ತುಳೇರ, ಧನಶೆಟ್ಟಿ ಸಕ್ರಿ, ಶರಣಪ್ಪ ತುಳೇರ, ರ್ಯಾವಣ್ಣಾ ತುಳೇರ, ಶರಣಪ್ಪ ತಳವಾರ, ಮಲ್ಲಣ್ಣ ಮುಚಖೇಡ, ಮಕಬೂಲ್ ಹೈಯ್ಯಾಳ, ಭೀಮಶಾ ಜಜ್ಜಲ್, ಮಹಾದೇವಪ್ಪ ಮೇದಾ, ಶಿವರಾಜ ಯಲಗಾರ, ಚಂದ್ರಶೇಖರ ರುದ್ನೂರು. ಭೋಗಪ್ಪ ಬೋಳದ, ವೆಂಕಟರೆಡ್ಡಿ ತುಳೇರ, ಕಾಶಣ್ಣಾ ರಾಮತೀರ್ಥ, ನಾಗೇಂದ್ರಪ್ಪ ರಾಜಾಪುರ, ಮತ್ತು ಕೊರೊನಾ ವಾರಿಯರ್ಸರಾದ ಡಾ.ಶ್ರೀನಿವಾಸ ಮಕದುಂ. ಡಾ.ವೀರೇಂದ್ರ ರೆಮ್ಮಣ್ಣಿ, ಡಾ.ಬಿರಾದಾರ, ಡಾ.ಸದಾನಂದ ಶೇರಿ, ಡಾ.ಪ್ರವೀಣ ಜೋಶಿ ಅವರನ್ನು ಸತ್ಕರಿಸಲಾಯಿತು.
ಮುರುಗೇಂದ್ರÀರೆಡ್ಡಿ ಪಾಟೀಲ ಸ್ವಾಗತಿಸಿದರು. ದೇಶಭಕ್ತಿ ಗೀತೆ ಬಸವರಾಜ ಬಾಳಿ ಹಾಡಿದರು, ಬಾಲ ವಾಗ್ಮಿ ಶಿವಾರೆಡ್ಡಿ ಆನಂದರೆಡ್ಡಿ ತುಳೇರ ಸ್ವಾತಂತ್ರ್ಯದ ಭಾಷಣ ಮಾಡಿದನು. ಮಹೆಬೂಬ್ ವಂದಿಸಿದರು. ಕಾರ್ಯಕ್ರಮವನ್ನು ನಾಗರೆಡ್ಡಿ ನಿರೂಪಿಸಿದರು. ತಾಲೂಕು ಕಸಾಪ ಅಧ್ಯಕ್ಷ ಅನಿಲ ಸಕ್ರಿ, ಶಂಕರ ಬೋಳದ, ಬಸವರಾಜ ಸಕ್ರಿ, ಸದಾನಂದರೆಡ್ಡಿ, ಸಿದ್ದಪ್ರಸಾದ ರೆಡ್ಡಿ, ಶಿವು ತುಳೇರ, ಗುರು ಬೋಳದ, ಆಕಾಶ ಸಕ್ರಿ, ಸೇರಿದಂತೆ ನೂರಾರು ಯುವಕರು ಇದ್ದರು.
ಮುರುಗೇಂದ್ರÀರೆಡ್ಡಿ ಪಾಟೀಲ ಸ್ವಾಗತಿಸಿದರು.
ದೇಶಭಕ್ತಿ ಗೀತೆ ಬಸವರಾಜ ಬಾಳಿ ಹಾಡಿದರು, ಬಾಲ ವಾಗ್ಮಿ ಶಿವಾರೆಡ್ಡಿ ಆನಂದರೆಡ್ಡಿ ತುಳೇರ ಸ್ವಾತಂತ್ರ್ಯದ ಭಾಷಣ ಮಾಡಿದನು. ಮಹೆಬೂಬ್ ವಂದಿಸಿದರು.
ಕಾರ್ಯಕ್ರಮವನ್ನು ನಾಗರೆಡ್ಡಿ ನಿರೂಪಿಸಿದರು. ತಾಲೂಕು ಕಸಾಪ ಅಧ್ಯಕ್ಷ ಅನಿಲ ಸಕ್ರಿ, ಶಂಕರ ಬೋಳದ, ಬಸವರಾಜ ಸಕ್ರಿ, ಸದಾನಂದರೆಡ್ಡಿ, ಸಿದ್ದಪ್ರಸಾದ ರೆಡ್ಡಿ, ಶಿವು ತುಳೇರ, ಗುರು ಬೋಳದ, ಆಕಾಶ ಸಕ್ರಿ, ಸೇರಿದಂತೆ ನೂರಾರು ಯುವಕರು ಇದ್ದರು.