ಸುರಪುರ ಪೊಲೀಸ್ ಉಪ ವಿಭಾಗದ ಎಲ್ಲಾ ಟವರ್‍ಗಳ ಮಾಹಿತಿ ನೀಡಿ: ವೆಂಕಟೇಶ ಉಗಿಬಂಡಿ

0
22

ಸುರಪುರ: ಹುಣಸಗಿ ಶಹಾಪುರ ಮತ್ತು ಸುರಪುರ ತಾಲೂಕುಗಳಿಗೆ ಸಂಬಂಧಿಸಿದಂತೆ ಸುರಪುರ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಮೊಬೈಲ್ ನೆಟವರ್ಕ್ ಕಂಪನಿಗಳ ಟವರ್‍ನ ಮಾಹಿತಿ ನೀಡುವಂತೆ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ತಿಳಿಸಿದರು.

ನಗರದ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಮೋಬೈಲ್ ನೆಟವರ್ಕ್ ಕಂಪನಿಗಳಾದ ಏರಟೆಲ್,ಜಿಯೋ,ಐಡಿಯಾ,ಇಂಡಸ್ ಮತ್ತಿತರೆ ಕಂಪನಿಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ,ಸುರಪುರ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಟವರ್‍ಗಳ ಮಾಹಿತಿಯನ್ನು ನೀಡಿ,ಯಾಕೆಂದರೆ ಅನೇಕ ಟವರ್ ರೂಮ್‍ಗಳಲ್ಲಿನ ಬ್ಯಾಟರಿ ಕಳ್ಳತನ ಮತ್ತು ಡಿಸೇಲ್ ಕಳ್ಳತನ ನಡೆದಿರುವ ಬಗ್ಗೆ ದೂರುಗಳು ಬರುತ್ತಿವೆ.

Contact Your\'s Advertisement; 9902492681

ಅಲ್ಲದೆ ಈ ಟವರ್‍ಗಳಲ್ಲಿ ಕೆಲಸ ಮಾಡಿ ಬಿಟ್ಟಿರುವ ಹಳೆಯ ನೌಕರರೆ ಕಳ್ಳತನ ಮಾಡಿರುವ ಬಗ್ಗೆಯು ಅನುಮಾನದ ಮಾತುಗಳು ಕೇಳಿಬರುತ್ತಿವೆ.ಆದ್ದರಿಂದ ಎಲ್ಲಾ ಟವರ್‍ಗಳ ಮಾಹಿತಿಯನ್ನು ನೀಡುವ ಜೊತೆಗೆ ಟವರ್ ಅಳವಡಿಸಲು ಪಡೆದಿರುವ ಪರವಾನಿಗೆಯ ಸಂದರ್ಭದಲ್ಲಿ ಹೆಸರಿಸಲಾಗಿರುವ ಷರತ್ತುಗಳ ವಿವಿರಣೆಯುಳ್ಳ ಪಟ್ಟಿಯನ್ನು ನೀಡುವಂತೆ ಸೂಚಿಸಿದರು.ಅಲ್ಲದೆ ಎಲ್ಲಾ ಟವರ್ ರೂಮ್‍ಗಳ ಬಳಿಯಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸುವುದು ಮುಖ್ಯವಾಗಿದೆ.ಇದರಿಂದ ಯಾರೇ ಕಳ್ಳತನ ಮಾಡಿದರು ಅಂತವರನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಕಂಪನಿಗಳ ಅಧಿಕಾರಿಗಳು ಮಾತನಾಡಿ,ಡಿವೈಎಸ್ಪಿಯವರು ಕೇಳಿದ ಎಲ್ಲಾ ಮಾಹಿತಿಯನ್ನು ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಹಾಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಚನ್ನಯ್ಯ ಹಿರೇಮಠ,ಎ.ಎಸ್.ಐ ಗೋಪಾಲ ರಾಠೋಡ ಹಾಗು ಮೊಬೈಲ್ ಟವರ್ ಕಂಪನಿಗಳ ಅಧಿಕಾರಿಗಳಾದ ಪ್ರವೀಣ,ಪಾಪಣ್ಣ,ಮಹೇಂದ್ರ,ಮಂಜುನಾಥ,ಸಿದ್ರಾಮ,ಶಂಕರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here