ಸುರಪುರ: ಎಲ್ಲೆಡೆ ಮೋಹರಂ ಹಬ್ಬ ಆಚರಣೆ ನಡೆಯುತ್ತಿದ್ದು ಅದರಂತೆ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಮೋಹರಂ ಆಚರಣೆ ಅಂಗವಾಗಿ ಸೋಮವಾರ ರಾತ್ರಿ ಅಲೈ ಆಡುತ್ತಿರುವಾಗ ಭಕ್ತಿ ಪರವಶನಾದ ವ್ಯಕ್ತಿಯೊಬ್ಬ ದೇವರು ಮೈಯಲ್ಲಿ ಬಂದಿದೆ ಎಂದು ಅಗ್ನಿ ಕುಂಡದಲ್ಲಿ ಹಾಯುವ ಜೊತೆಗೆ ಕೈಯಿಂದ ಬೆಂಕಿ ಕೆಂಡವನ್ನು ತೂರುವ ಮೂಲಕ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಹಾಗು ನೂರಾರು ಜನರು ಕೂಡ ಭಾಗವಹಿಸಿ ಅಲೈ ವೀಕ್ಷಿಸಿ ಸಂತಸಪಟ್ಟರು.