ಕಲಬುರಗಿ: ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಕಾಳಗಿ ತಾಲೂಕಿನ ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾಳಗಿ ತಾಲೂಕಿನಲ್ಲಿ ಬರುವ ದೊಡ್ಡ ಗ್ರಾಮವಾದ ರಟಕಲ್ ಗ್ರಾಮವನ್ನು ಹೋಬಳಿ ಮಟ್ಟದ ಗ್ರಾಮವನ್ನು ಅನುಮೋದಿಸಲು ಈ ಹಿಂದಿನ ಡಿಸಿ ಬಿ.ಶರತ್ ಅವರಲ್ಲಿ ಕೋರಲಾಗಿತ್ತು. ಆದರೆ ಈ ವರೆಗೆ ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಿ ಆದೇಶಿಸಬೇಕು ಎಂದು ಒತ್ತಾಯಿಸಿದರು.
ರಟಕಲ್ ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಆಗಲು ಎಲ್ಲ ಅರ್ಹತೆ ಹೊಂದಿದೆ. ಹೋಬಳಿ ಮಾಡಿದರೆ ಸುತ್ತಲಿನ 20 ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಶೇ.80ರಷ್ಟು ಸರಕಾರಿ ಸೌಲಭ್ಯ ಗ್ರಾಮ ಹೊಂದಿದೆ. ಭೌಗೋಳಿಕವಾಗಿಯೂ ವಿಸ್ತೀರ್ಣ ಹೊಂದಿದೆ ಗ್ರಾಪಂ ಸದಸ್ಯರ ಸಂಖ್ಯೆಯಲ್ಲಿಯೂ ರಟಕಲ್ ಗ್ರಾಮ ಮುಂದೆ ಇದೆ. ಹೀಗಾಗಿ ಕೂಡಲೇ ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕ ಉಪಾಧ್ಯಕ್ಷ ರಾಜಶೇಖರ ಗುಡುದಾ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ರೇವಣಸಿದ್ದ ಬಡಾ, ರೈತ ಮೋರ್ಚಾ ಉಪಾಧ್ಯಕ್ಷ ಚಂದ್ರಶೇಖರ ಚೋಕಾ, ಬಿಜೆಪಿ ಮಂಡಲ ಸಂಘಟನಾ ಕಾರ್ಯದರ್ಶಿ ಮಲ್ಲು ಎಸ್.ಮರಗುತ್ತಿ, ಗ್ರಾ.ಪಂ ಸದಸ್ಯರಾದ ಜಗದೀಶ ಮಂಳಗಿ, ದಿದ್ದು ಭೈರಪ್ಪ, ಬಿಜೆಪಿ ಮುಖಂಡ ಮುನ್ನಾ ಕಂಠಿ ಇದ್ದರು.