ದಲಿತ  ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಬಿವಿಪಿ ಸಂಘಟನೆ ನಿಷೇಧಕ್ಕೆ ಆಗ್ರಹ

0
125

ಜಮಖಂಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರನಲ್ಲಿ ದಲಿತ  ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯನ್ನು ಖಂಡಿಸುವದಲ್ಲೆದೆ ಎಬಿವಿಪಿ ಸಂಘಟನೆಯನ್ನು ನಿಷೇಧಿಸಬೇಕೆಂದು  ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ  ಸರಕಾರಕ್ಕೆ ಒತ್ತಾಯಿಸಿದ್ದಾರೆ .

ಸಾಮೂಹಿಕ ಅತ್ಯಾಚಾರ ಮಾಡುವ ಮೂಲಕ ಅದನ್ನ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪುಂಡಾಟಿಕೆ ಮರೆದಿರುವ ಈ ಆರೋಪಿತರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಈ ಘಟನೆಯು ಪುತ್ತೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ 24 ಗಂಟೆಗಳು ಕಳೆದರು ಕೂಡಾ ಅಲ್ಲಿನ ಸಂಸದ ನಳಿನಕುಮಾರ ಕಟೀಲು ಶಾಸಕ ಸಂಜೀವ ಮಾತಂದೂರ ಈ ಘಟನೆ ಕುರಿತು ಮಾತನಾಡದೆ ಇರುವರು ದಲಿತ ವಿರೋಧಿತನ ಎದ್ದು ಕಾಣುತ್ತದೆ, ಈ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿರುವ ಎಬಿವಿಪಿ ಕಾರ್ಯಕರ್ತರು ಇರುವದರಿಂದ ರಾಜ್ಯದ ಬಿಜೆಪಿ ನಾಯಕರು ಒಂದು ದನದ ಮಾಂಸಗೋಸ್ಕರ ರಾಜ್ಯದ ತುಂಬಾ ಬೊಬ್ಬೆ ಹಾಕುತ್ತಿದ್ದು ಒಬ್ಬ ದಲಿತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದರು ಮೌನಕ್ಕೆ ಶರಣಾಗಿರುವದನ್ನು ನೋಡಿದರೆ ಈ ಘಟನೆಯನ್ನು ಬೆಂಬಲಿಸಿತಿರೋವದು ಮೇಲ ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಆರೋಪಿಗಳ ಕೃತ್ಯವು ಅತ್ಯಂತ ಹೇಯವಾಗಿದೆ ಅತ್ಯಾಚಾರವೆಸಗಿ ಅದರ ವಿಡಿಯೋ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವಲು ಹೊರಟಿರುವುದು ನಾಚಿಗೇಡಿನ ಸಂಗತಿಯಾಗಿದೆ ಇದರಿಂದ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ .

ಈ ದೇಶದ ಭಾರತ ಮಾತೆಗೆ ಹೋಲಿಸುವ ಇವರು ಅತ್ಯಾಚಾರ ನಡೆದರು ಕೂಡಾ  ಸಂಸದಿ ಶೋಭಾ ಕರಂದ್ಲಾಜೆಯನ್ನು ಒಳಗೊಂಡಂತೆ ಬಿಜೆಪಿಯ ಮಹಿಳಾ ಘಟಕಗಳ ಮಹಿಳಾಮಣಿಗಳು ಘಟನೆ ಕುರಿತು ಮಾತ ನಾಡದಿರುವದು ಇವರ ಹೆಣ್ಣು ತನಕ್ಕೆ ನಮ್ಮ ದಿಕ್ಕಾರ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ದಲಿತರು ಬೀದಿಗಿಳಿಯುವ ಮುನ್ನ ಈ ಘಟನೆ ಹಿನ್ನಲೆಯಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಗಳು ಇದ್ದರು ಅವರನ್ನು ಒಲೈಸದೆ ಕಠಿಣಕ್ರಮ ಜರುಗಿಸಿಬೇಕೆಂದು ಈ ಸಂದರ್ಭದಲ್ಲಿ ಅವರು  ಒತ್ತಾಯಿಸಿದರು.

ಈ ರಾಜ್ಯದ ಕಾನೂನು ದಲಿತ ವಿರೋದಿತನ ಎದ್ದು ಕಾಣುತ್ತದ್ದು, ಈ ಘಟನೆ ಹೊಣೆ ಹೊತ್ತು  ಗೃಹ ಸಚಿವ ಎಂ ಬಿ ಪಾಟೀಲರು ರಾಜೀನಾಮೆ ಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಾಜು ಮೇಲಿನಕೇರಿ  ಆಗ್ರಹಿಸಿದರು. ರಾಜ್ಯದಲ್ಲಿ ಅಮಾಯಕ ಹಾಗೂ ನಿರ್ಗತಿಕರ ಮೇಲೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸಿದೆ ಸರಕಾರ ವಿರುದ್ಧ ರಾಜ್ಯಾದಂತ ಬ್ರಹತ ಪ್ರತಿಭಟನೆ ನಡೆಸಬೇಕಾಗುತ್ತಿದೆ ಎಂದು ದಲಿತ ಮುಖಂಡ ರವಿ ಬಬಲೇಶ್ವರ ತಾಲೂಕು ಸಂಚಾಲಕ ವಕೀಲ ದೊಡಮನಿ ಅಡಿವೆಪ್ಪ ಮಾದರ ,ಪುಂಡಲೀಕ ಕಾಂಬಳೆ ,ರಾಹುಲ ದೊಡಮನಿ ಸರಕಾರಕ್ಕೆ ಎಚ್ಚರಿಸಿದ್ದಾರೆ .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here