ಕಲಬುರಗಿ ಪಾಲಿಕೆ: ಅಲ್ಪಸಂಖ್ಯಾತರ 8 ಸ್ಥಾನಗಳಲ್ಲಿ ಗೆಲವು ಖಚಿತ: ಮುಜಾಮ್ಮಿಲ್ ಅಹ್ಮದ್

0
24

ಕಲಬುರಗಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಲ್ಪಸಂಖ್ಯಾತ 8 ಕ್ಕೆ 8 ಸ್ಥಾನಗಳಲ್ಲೂ ಗೆಲವಿನ ನಗೆ ಬೀರುವುದು ಖಚಿತ ಎಂದು ಅಲ್ಪ ಸಂಖ್ಯಾತರ ರಾಜ್ಯಾಧ್ಯಕ್ಷ ಮುಜಾಮ್ಮಿಲ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾಭವಬನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಒಟ್ಟು 47 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಅದರಲ್ಲಿ ಅಂತಿಮವಾಗಿ 8 ಸ್ಥಾನಗಳಲ್ಲಿ ಸ್ಪರ್ಧೆಗಿಳಿದ ಅಲ್ಪಸಂಖ್ಯಾತರ ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆಂದು ತಿಳಿಸಿದ ಅವರು, 2 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ ಎಂದರು.

Contact Your\'s Advertisement; 9902492681

ಕೇಂದ್ರ ಸರ್ಕಾರದಿಂದ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವೇ ಅದರ ಸದ್ಬಳಕೆ ಮಾಡಿಕೊಳ್ಳುತ್ತಿದೆ, ಯಡಿಯೂರಪ್ಪನವರ ಸರ್ಕಾರವಿದ್ದಾಗ ಹಜ್ ಭವನಗಳಿಗೆ ಹೆಚ್ಚಿನ ಅನುದಾನ ನೀಡಿ, ಹಿಂದಿರುವ 77 ಕೋಟಿ ಅನುದಾನವನ್ನು 125 ಕೋಟಿಗೆ ಹೆಚ್ಚಿಸಿ, ಇದೀಗ 525 ಕೋಟಿಗೂ ಹೆಚ್ಚಿಸಿ ಅಲ್ಪಸಂಖ್ಯಾತ ಕಲ್ಯಾಣಕ್ಕೆ ಬಿಜೆಪಿ ಸರ್ಕಾರವಿದ್ದಾಗ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಜಾಮ್ಮಿಲ್ ಅವರು ತಿಳಿಸಿದರು.

ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಹುಸೇನ್ ಪಠಾಣ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಕೋವಿಡ್ ಸಂಕಟದಲ್ಲೂ ನಿಗಮಕ್ಕೆ ಅನುದಾನ ನೀಡಿ, ಬಡವರ್ಗದ ಮಹಿಳೆಯರಿಗೆ 10 ಸಾವಿರದಂತೆ ಪೆÇ್ರೀತ್ಸಾಹಧನ ನೀಡಿದಲ್ಲದೇ ವೃತ್ತಿಪರತೆದವರ ಪರವಾಗಿಯೂ ನಿಂತಿದೆ ಎಂದು ಹೇಳಿದರು.

ಮಸೀದಿಯಲ್ಲಿ ಕಾರ್ಯ ನಿರ್ವಹಿಸುವ ಫೌಜೀಮ್ ಹಾಗೂ ಪೇಶ್ ಇಮಾಮ್ ಗಳಿಗೂ ಬಿಜೆಪಿ ಸರ್ಕಾರ ಸಹ ಸಹಾಯ ಮಾಡಿದೆ, ಇವೆಲ್ಲವುಗಳ ಸಾಧನೆಯಿಂದಾಗಿ ಪಾಲಿಕೆಯಲ್ಲಿ ಸ್ಪರ್ಧಿಸುತ್ತಿರುವ 8 ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದು ಮುಖ್ತಾರ ಪಠಾಣ ಪುನರುಚ್ಛಿಸಿದರು.

ಈ ಸಂದರ್ಭದಲ್ಲಿ ಸಯ್ಯದ್ ಸಲಾಂ, ನೂರ್ ಪಾಶಾ, ಕೆಎಂಡಿಸಿ ನಿರ್ದೇಶಕರಾದ ಸದ್ದಾಮ್ ವಜೀರ್‍ಗಾಂವ್, ಸುರೇಶ್ ತಂಗಾ, ಅಬ್ದುಲ್ ರಬ್, ಮೋಯಿನ್ ಅಹ್ಮದ್, ಮುಮ್ತಾಜ ಬೇಗಂ, ಶೀರೀನ್‍ಬೇಗಂ, ಅಮೀರ್ ಅಹ್ಮದ್ ಸೇರಿದಂತೆ ಮತ್ತಿತರರು ಹಾಜರಿದ್ದರು.

advertisement
advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here