ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬುದ್ಧನ ಮೂರ್ತಿ ಭಗ್ನಗೊಳಿಸಿದ್ದನ್ನು ಖಂಡಿಸಿ ಬುದ್ಧ ವಿಹಾರದಲ್ಲಿ ಮಂಗಳವಾರ ಮದ್ಹ್ಯಾನ ಜೆಡಿಎಸ್ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪಾಟೀಲ್ ಮಾತನಾಡಿ,ಬುದ್ಧನನ್ನು ಎಲ್ಲರು ಮಹಾತ್ಮ ಎಂದು ಪೂಜಿಸುತ್ತಾರೆ.ಅಂತಹ ಬುದ್ಧನ ಮೂರ್ತಿಯನ್ನು ಭಗ್ನಗೊಳಿಸಿರುವುದು ಖಂಡನಿಯವಾಗಿದೆ,ಈ ಘಟನೆಯನ್ನು ಜೆಡಿಎಸ್ ಪಕ್ಷವು ಉಗ್ರವಾಗಿ ಖಂಡಿಸುತ್ತದೆ.
ಅಲ್ಲದೆ ಇಂತಹ ಘಟನೆಗೆ ಕಾರಣರಾದವರನ್ನು ಕೂಡಲೇ ಪೊಲೀಸರು ಬಂಧಿಸಬೇಕು ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು ಹಾಗು ತಾಲೂಕು ಆಡಳಿತ ಹೊಸದಾದ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು,ಈ ಸ್ಥಳಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕು,ಇಡೀ ಬುದ್ಧ ವಿಹಾರದ ಸುತ್ತಲು ಕಂಪೌಂಡ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ,ಜೆಡಿಎಸ್ ಮುಖಂಡರಾದ ಭೀಮರಾಯ ಹುಲಕಲ್,ಶಾಂತು ತಳವಾರಗೇರಾ,ರಾಘು,ಶೌಕತ್ ಅಲಿ ಖುರೇಶಿ,ಮನ್ಸೂರ್ ಪಾಷಾ ಸೇರಿದಂತೆ ಅನೇಕರಿದ್ದರು.