ಕಲಬುರಗಿ. ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಸಂತೃಪ್ತಿಗೊಳಿಸುತ್ತದೆ. ನೋವಿನಿಂದ ನರಳುವಂತೆ ಜೀವಕ್ಕೆ ಸಂಗೀತ ಚಿಕೆತ್ಸೆ ನೀಡಿ ಗುಣಪಡಿಸುವ ಶಕ್ತಿ ಇದೆ ಎಂದು ಡಿ.ಸಿ.ಸಿ. ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ ಸಜ್ಜನ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀಗುರು ಪುಟ್ಟರಾಜ ಸಂಗೀತ ಭವನದಲ್ಲಿ ಸಂಸ್ಕೃತಿಕ ಭವನದಲ್ಲಿ ಮಂಗಳವಾರ ಶ್ರೀಪುಟ್ಟರಾಜ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ೭೫ನೇ ಸ್ವತಂತ್ರ್ಯ ಅಮೃತ ಮಹೋತ್ಸವ ವ?ಚರಣೆಯ ಅಂಗವಾಗಿ ಏರ್ಪಡಿಸಿದ “ಜಾನಪದ ಸಂಗಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಸ್ವಸ್ತ್ಯ ಕಾಪಾಡಲು ಸಂಗೀತವು ಒಂದು ಪ್ರಮುಖವಾದ ಸಾಧನವಾಗಿದೆ. ಸಂಗೀತದ ಪಡೆಯುವ ಹಾಗೂ ಕೇಳುವುದರ ಮೂಲಕ ಪರಮಾನಂದ ದೊರೆಯುತ್ತದೆ ಎಂದು ತಿಳಿಸಿದರು. ಹಾರಕೂಡ ಪೀಠದ ಡಾ. ಚೆನ್ನವೀರ ಶಿವಾಚಾರ್ಯರು ಹಾಗೂ ಚಿಣಮಗೇರಿ ಪೀಠದ ವೀರಮಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದರು. ಉದ್ಯಮಿ ನಿತಿನ್ ವಿ ಗುತ್ತೇದಾರ ಅವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಬಿ ಸಾಂಬಾ, ಸಂಗಣಿಗೌಡ ಪಾಟೀಲ್ ಕಲ್ಲೂರ, ಶರಣು ಬಿಲ್ಲಾಡ, ಮಲ್ಲಿಕಾರ್ಜುನ ಜಿ. ಜಾಮಗೊಂಡ, ಈರಮ್ಮ ಎಸ್. ಕೇಸರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು, ಸಂಸ್ಥೆಯ ಅಧ್ಯಕ್ಷ ದತ್ತರಾಜ ಕಲಶಟ್ಟಿ ಸ್ವಾಗತಿಸಿದರು, ಪ್ರೋ. ಶಿವರಾಜ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.