ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯ ಹಾಗೂ ’ಮೆನ್ ಸೆನ್ ಮೆಟ್ ಈನ್ ಮಿಸ್ಸಿ’ ಮತ್ತು ’ವಿದ್ಯಾ ಲಿಬರೇಶನ್ ಥ್ರೂ ಕಲ್ಚರಲ್ ಆಕ್ಷನ್’ (ವಿಎಲ್‌ಟಿಸಿಎ) ಸಹಯೋಗದೊಂದಿಗೆ ಶಾಂತಿ ಸ್ಥಾಪನೆಯಲ್ಲಿ ಮಾಧ್ಯಮ ಪಾತ್ರ ಕುರಿತು ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಗುರುವಾರ ಸೆಪ್ಟೆಂಬರ್ ೨ ಮತ್ತು ೩ ರಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದೆ.
ವಿಎಲ್‌ಟಿಸಿಎ ನಿರ್ದೇಶಕರಾದ ಜಿ.ಎನ್.ರಾಜಶೇಖರ್ ನಾಯ್ಡು ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಅವರು ಬುಧವಾರ ಜಂಟಿ ಹೇಳಿಕೆಯಲ್ಲಿ, ಉದಯೋನ್ಮುಖ ಪತ್ರಕರ್ತರು ಮತ್ತು ಕಾರ್ಯನಿರತ ಪತ್ರಕರ್ತರಲ್ಲಿ ಜಾಗೃತಿ ಮೂಡಿಸಲು ಈ ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದು ಹೇಳಿದರು. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಘಟನೆಗಳನ್ನು ವರದಿ ಮಾಡುವಾಗ ಮತ್ತು ಪ್ರಚೋದನಕಾರಿ ಸುದ್ದಿಗಳನ್ನು ವರದಿ ಮಾಡುವಾಗ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಧಾರವಾಡದ ಡಾ.ಹ?ವರ್ಧನ ಶೀಲವಂತ ಹಾಗೂ ಪ್ರಜಾವಾಣಿ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾದ ರಶ್ಮಿ.ಎಸ್. ಮತ್ತು ಚೆನೈನ ಹಿರಿಯ ಅಭಿವೃದ್ಧಿ ಸಮಾಲೋಚಕರಾದ ಆಂಬ್ರೋಸ್ ಕ್ರಿಸ್ಟಿ ಅವರು, ಹಿರಿಯ ಪತ್ರಕರ್ತರು ವರದಿ ಮಾಡುವಿಕೆಯ ವಿವಿಧ ಅಂಶಗಳ ಕುರಿತು ಮತ್ತು ಹೇಗೆ ಜವಾಬ್ದಾರಿಯುತ ವರದಿ ಮಾಡುವಿಕೆಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ನಾಯ್ಡು ಹೇಳಿದರು. ಇದರಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ವಿಚಾರ ಸಂಕಿರಣವನ್ನು ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಉದ್ಘಾಟಿಸಲಿದ್ದು, ಸಮಕುಲಪತಿ ಪ್ರೊ. ವಿ ಡಿ ಮೈತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ.