ಕಲಬುರಗಿ: ಕಮಲಪೂರ ತಾಲ್ಲೂಕಿನ ನರೋಣ ಗ್ರಾಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕಲಬುರಗಿ ಮತ್ತು ಮೈರಾಡ ಸಂಸ್ಥೆ ಕಲಬುರಗಿ ಹಾಗೂ ಗ್ರಾಮ ಪಂಚಾಯತ ನರೋಣ ಇವರ ಸಂಯುಕ್ತಾಶ್ರಯದಲ್ಲಿ ಕ್ಷಯ ಮುಕ್ತ ಗ್ರಾಮ ಮಾಡುವಲ್ಲಿ ಗ್ರಾಮ ಪಂಚಾಯಿತಿ ಮಾಡುವಲ್ಲಿ ಗ್ರಾಮ ಸದಸ್ಯರ ಪಾತ್ರ ದ ಕುರಿತು ಒಂದು ದಿನದ ತರಬೇತಿಯನ್ನು ನರೋಣ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ನರೋಣ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಜನ ಜಾಗೃತಿ ತರಬೇತಿಯನ್ನು ಹಮ್ಮಿಕೊಂಡಿದರು.
ಈ ತರಬೇತಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಗಳಿಗೆ ತರಬೇತಿ ಪಡೆದುಕೋಳ್ಳುವುದು ಬಹಳ ಮುಖ್ಯ ಪ್ರತಿ ಒಂದು ಮನೆಯಲ್ಲಿ ಆರೋಗ್ಯದ ಸಮಸ್ಯೆ ಇದ್ದೆ ಇರುತ್ತದೆ ಗ್ರಾಮದ ಜನರಿಗೆ ನಿಮಗೆ ಮುಖ್ಯ ವಾಗಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಅದು ಹೇಗೆಂದರೆ ನಿಮ್ಮ ನಿಮ್ಮ ಊರಿನಲ್ಲಿ ಟಿಬಿ ರೋಗಿಗಳು ಎಷ್ಷು ಇದ್ದರೆ ಎಂದು ಗುರುತ್ತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಗಬೇಕು ಹಾಗೆ ಜನರಿಗೆ ಬಹಳ ಮುಖ್ಯವಾಗಿ ನಮ್ಮ ಗ್ರಾಮದ ಜನರಲ್ಲಿ ಆರೋಗ್ಯದ ಅರಿವು ಬಹಳ ಮುಖ್ಯವಾಗಿದೆ ಎಂದು ಮೈರಾಡ ಸಂಸ್ಥೆಯ ಜೀತೆಂದ್ರ ಹೇಳಿದರು.
ವೇದಿಕೆ ಮೇಲೆ ಇನ್ನೋರ್ವ ತಾಲ್ಲೂಕ ಹಿರಿಯ ಟಿಬಿ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ ಪಾಟೀಲ್ ಈ ತರಬೇತಿಯ ಉದ್ದೇಶಿಸಿ ಮಾಹಿತಿ ಹಂಚಿಕೊಂಡರು ಹಲವಾರು ರೋಗ ಲಕ್ಷಣಗಳು ನಮ್ಮಲ್ಲಿ ಕಂಡು ಬಂದರು ಕಾಳಜಿ ತೆಗೆದುಕೊಳ್ಳುವುಲ್ಲಿ ಈ ಊರಿನ ಜನರಲ್ಲಿ ಬರಬೇಕು. ಆಶಾ ಕಾರ್ಯಕರ್ತೆಯರು ಹಾಗೆ ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿಯವರು ಮನೆ ಮನೆ ಭೇಟಿ ಮಾಡಿ ಊರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತರೆ ಅಂತಹ ಸಂದರ್ಭದಲ್ಲಿ ಗ್ರಾಮಸ್ಥರು ಆಸಕ್ತಿ ಬೆಳಸಿಕೊಳ್ಳಬೇಕು.
ಹಾಗೆ ಆಶ್ರಿತ ರೋಗಗಳ ಜೊತೆಗೆ ಕ್ಷಯರೋಗವು ಚಿಕಿತ್ಸೆ ಪಡೆಯದೇ ಇದ್ದಾಗ ಒಬ್ಬ ಕ್ಷಯರೋಗಿ ಹತ್ತು ಜನರಿಗೆ ಹಾರಡಿಸಬಲ್ಲನ್ನು. ಈ ಕಾರ್ಯಕ್ರಮದ ಉದ್ದೇಶ ಪ್ರತಿಯೊಂದು ಮನೆಯಲ್ಲಿ ಕ್ಷಯರೋಗದ ಲಕ್ಷಣಗಳು ಕಂಡುಬರುತ್ತದೆ, ಅದನ್ನು ಹೇಗೆ ಪತ್ತೆ ಹಚ್ಚಬೇಕೆಂದರೆ ಕ್ಷಯರೋಗಿಗಳು ನಾಲ್ಕೈದು ಲಕ್ಷಣ ಗಮನಿಸಿ ಕೆಮ್ಮಿದಾಗ ಸೀನಿದಾಗ ಹೊರಬರುವ ತುಂತುರು ಹನಿಗಳಿಂದ ಗಾಳಿ ಮೂಲಕ ಸೊಂಕು ಹರಡುತ್ತದೆ, ರಾತ್ರಿ ವೇಳೆ ಜ್ವರ / ಬೇವರವುದು ಕಣಿಸಿಕೊತ್ತದೆ, ತೂಕ / ಊಟ ಕಡಿಮೆ ಆಗುವುದು, ಕಫದಲ್ಲಿ ರಕ್ತ ಬಿಳುವುದು. ಕಂಡು ಬರತ್ತದೆ.
ಇದನ್ನು ಹೇಗೆ ಪರೀಕ್ಷೆಗೆ ಒಳ ಪಡಿಸಬೇಕೆಂದರೆ ಸಮೀಪದ ಡಾಟ್ಸ್ ಸೆಂಟರ್ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಇದೆ ಎಂದು ವಿವರಿಸಿದ್ದರು, ಹಾಗಾಗಿ ಈಗ ನಾವೆಲ್ಲರೂ ಈ ಸೋಂಕಿಗೆ ತುತ್ತಾಗಿದ್ದೇವೆ, ಕಾರಣ ಈ ಕ್ಷಯರೋಗವನ್ನು 2025ಕ್ಕೆ ಕ್ಷಯಮುಕ್ತ ಮಾಡಲು ಪಂಚಾಯಿತಿ ಸದಸ್ಯರ ಸಹಭಾಗಿತ್ವ ಮತ್ತು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಇದೆ ಸಂದರ್ಭದಲ್ಲಿ ಮೈರಾಡ ಸಂಸ್ಥೆಯ ಟಿಬಿ ರೀಚ್ ನ. ಮೇಲ್ವಿಚಾರಕಿ ಪಾರ್ವತಿ ರವರು ಮಾತಾನಾಡಿ ಎಲ್ಲಾ ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷಯ ರೋಗದ ಬಗ್ಗೆ ಯಾವ ಯಾವ ಕಾರ್ಯಕ್ರಮಗಳನ್ನು ಹಳ್ಳಿ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಹಾಗೂ ಎಲ್ಲಾ ಸದಸ್ಯರು ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ, ಅಧ್ಯಕ್ಷರಾದ ಶರಣಬಸಪ್ಪ ಸಾವಳಗಿ, ಇವರ ನೇತ್ರತ್ವದಲ್ಲಿ ತರಬೇತಿಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ. ಮೈರಾಡ ಟಿಬಿ ರೀಚ್ . ಸಿ ಆರ್ ಪಿ ಗಳಾ ಸೋನುಬಾಯಿ. ಶೋಭಾ. ಉಪಾದ್ಯಕರು ಕರುಣಬಾಯಿ ಮಾಲಿ ಪಾಟೀಲ ಹಾಲಿ ಸದಸ್ಯರುಗಳಾದ ಕಾದಂಬರಿ ಬೆಡರ, ಮಲ್ಲಿಕಾರ್ಜುನ ಕರಕುನ,ದಸ್ತಗಿರಿ ಇನಾಮದಾರ, ಶಿವಮ್ಮ ಹೀರಾ, ಭಾಗೀರಥಿ ಸಾವಳಗಿ, ಸಂಗೀತ ಕೋರೆ, ಶ್ರೀನಾಥ್ ಚಿಚಕೋಟೆ, ಯಲ್ಲಾಲಿಂಗ ಯಾಳಸಂಗಿ ಹಾಗೂ ಮಾಜಿ ತಾ.ಪಂ. ಸಧಸ್ಯರು/ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಮತ್ತು ಮೈರಾಡ ಸಂಸ್ಥೆಯ ರೇಣುಕಾ , ಜಯಶ್ರೀ, ಗಂಗಮ್ಮತರಬೇತಿಯಲ್ಲಿ ಉಪಸ್ಥಿತರಿದ್ದರು.