ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಚನ ದಿನ ಆಚರಣೆ

0
8

ಸುರಪುರ:ನಗರದ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸುರಪುರ ತಾಲೂಕಾ ಘಟಕದ ವತಿಯಿಂದ ವಚನದಿನ ಕಾರ್ಯಕ್ರಮ ಹಾಗೂ ಸುತ್ತೂರು ಜಗದ್ಗೂರು ಲಿಂ. ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನೋತ್ಸವ, ಪರಿಷತ್ತಿನ ಸಂಸ್ಥಾಪನ ದಿನ ಹಾಗೂ ಲಿಂ. ಗೌರಮ್ಮ ಶರಣಪ್ಪ ಹೊಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳವರು, ಬಸವಣ್ಣನವರು ಮತ್ತು ಬಸವಾದಿ ಶರಣರು ಈ ನಾಡಿಗೆ ಮಹತ್ತರವಾಗಿ ಕೊಡುಗೆ ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕು ಪ್ರಸ್ತುತವಾಗಿದೆ ಎಂದರು.ವಚನ ಸಾಹಿತ್ಯವು ಮಾನವೀಯ ಮೌಲ್ಯಗಳ ಸಂಗಮವಾಗಿದೆ ಜೊತೆಗೆ ವಚನಸಾಹಿತ್ಯ ನಮಗೆ ಬದುಕನ್ನು ಕಟ್ಟಿಕೊಡುತ್ತದೆ ಹಾಗೂ ನಮ್ಮ ಬದುಕಿನ ಪ್ರತಿಗಳಿಗೆಗೂ ವಚನಗಳ ಸಾರ ಅನ್ವಯವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಾಗಿ ಶರಣ ಸಾಹಿತ್ಯ ಮತ್ತು ವಚನಸಾಹಿತ್ಯದ ಅದ್ಯಾಯನಮಾಡುವುದು ಪ್ರಸ್ತುತ ಸಂದರ್ಭಕ್ಕೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞ ಜೊತೆಗೆ ಸಾಂಸ್ಕೃತಿಕ ಸ್ಥಿತಿ, ವ್ಯಕ್ತಿತ್ವ ವಿಕಸನ ಈ ಎಲ್ಲವುಗಳ ಬಲವರ್ಧನೆಯಲ್ಲಿ ವಚನಸಾಹಿತ್ಯದ ಕೊಡುಗೆ ಮಹತ್ತರವಾಗಿದೆ ಎಂದು ಹೆಳಿದರು.

Contact Your\'s Advertisement; 9902492681

ಯಾದಗಿರಿ ಜಿಲ್ಲೆಯ ವಚನಕಾರರು ಹಾಗೂ ತತ್ವ ಪದಕಾರರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಶರಣಗೌಡ ಜೈನಾಪೂರ ಮಾತನಾಡಿ, ಮುದನುರಿನ ದಾಸಿಮಯ್ಯನರು ವಚನ ಸಾಹಿತ್ಯದ ಆದ್ಯ ವಚನಕಾರರು ನಂತರ ಹಾವಿನಾಳದ ಕಲ್ಲಯ್ಯ, ರಸ್ತಾಪೂರದ ಭೀಮಕವಿ, ಕೋಡಕಲ್ಲದ ಬಸವಣ್ಣ ಅನೇಕ ಜನ ವಚನಕಾರರು ಹಾಗೂ ತತ್ವ ಪದಕಾರರು ಈ ನೇಲದಲ್ಲಿ ಜನಿಸಿ ಮಹತ್ತರವಾದ ಕೊಡಿಗೆ ನೀಡಿದ್ದಾರೆ, ಅವರ ಹಾದಿಯಲ್ಲಿ ನಾವೇಲ್ಲ ಸಾಗಬೇಕಾಗಿದೆ ಅವರ ಸಾಹಿತ್ಯ ಅಧ್ಯಾಯನ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಡೋಣ್ಣುರು, ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ವೇದಿಕೆಮೆಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಸುರಪುರ ತಾಲೂಕ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ವಹಿಸಿದ್ದರು.

ಇದೆ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಂದ ವಚನ ಕಂಟಪಾಠ ಸ್ಪರ್ದೆ ಹಾಗೂ ವಿಧ್ಯಾರ್ಥಿನಿಯರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು, ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮವನ್ನು ಬಲಭೀಮ ಪಾಟೀಲ್ ನಿರೂಪಿಸಿದರು, ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು. ಪ್ರವೀಣ ಜಕಾತಿ ಸ್ವಾಗತಿಸಿದರು, ದೇವರಾಜ ನಂದಗಿರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here