ಬಿಜೆಪಿ ಅಭ್ಯರ್ಥಿ ಮೇಘನಾ ಕಳಸ್ಕರ್ ಪರ ಮತದಾರರ ಒಲವು

0
16

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ ನಂಬರ್ ೩೦ರ ಬಿಜೆಪಿ ಅಭ್ಯರ್ಥಿ ಶ್ರೀಮತಿ ಮೇಘನಾ ಮಂಜುನಾಥ ಕಳಸ್ಕರ್ ಅವರ ಪರವಾಗಿ ಮತದಾರರು ಉತ್ತಮವಾದ ಒಲವು ತೋರಿಸಿದ್ದಾರೆ. ಮಂಜುನಾಥ ಕಳಸ್ಕರ್ ಅವರ ಜನಪರ ಕಾಳಜಿ ಮತ್ತು  ಸಮಾಜ  ಸೇವೆಯನ್ನು ಗುರುತಿಸಿ ಬಿಜೆಪಿ ಹಿರಿಯ ಮುಖಂಡರು ಮತ್ತು ವಿಧಾನ ಪರಿಷತ್  ಸದಸ್ಯರಾದ ಬಿ.ಜಿ.ಪಾಟೀಲ ಅವರು ಹಾಗೂ ಅವರ ಪುತ್ರರಾದ ಕೆ.ಆರ್.ಇ.ಡಿ.ಎಲ್. ಅಧ್ಯಕ್ಷ ಚಂದು ಪಾಟೀಲ ಅವರು ಮಂಜುನಾಥ ಅವರ ಪತ್ನಿ ಮೇಘನಾ ಕಳಸ್ಕರ ಅವರಿಗೆ ಪಕ್ಷದ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸುವುದರ ಜೊತೆಗೆ ವಾರ್ಡನಲ್ಲಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸುವುದರ ಮೂಲಕ ಅವರ ಗೆಲುವಿಗೆ  ಬೆನ್ನೆಲಬಾಗಿ ನಿಂತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ  ಸಮಾಜ  ಸೇವೆಯಲ್ಲಿ  ತೊಡಗಿಸಿಕೊಂಡಿರುವ ಮಂಜುನಾಥ ಕಳಸ್ಕರ್ ಅವರು  ಬೇಸಿಗೆ ಕಾಲದಲ್ಲಿ ವಾರ್ಡನ ಜನತೆಗೆ ಕುಡಿಯುವ ನೀರು ಒದಗಿ ಸುವುದರ ಮೂಲಕ ಜನರ ನೀರಿನ ದಾಹ ನೀಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಕೋವಿಡ್  ಲಾಕ್ ಡೌನ್  ಸಂದರ್ಭದಲ್ಲಿ ಬಡಾವಣೆಯ ನಾಗರಿಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ, ಮಾಸ್ಕ್,  ಸ್ಯಾನಿಟೈಸರ್  ವಿತರಣೆ   ಸೇರಿದಂತೆ  ಅನೇಕ  ಜನಪರ ಕೆಲಸ ಮಾಡುವುದರ ಮೂಲಕ ಜನರ ಪ್ರೀತಿ, ವಿಶ್ವಾ ಸ ಗಳಿಸಿದ್ದಾರೆ. ಮಂಜುನಾಥ ಅವರ ಜನಪರ ಕೆಲಸಗಳನ್ನು ಮೆಚ್ಚಿಯೇ ಪಕ್ಷ ಅವರ  ಪತ್ನಿ  ಮೇಘನಾ  ಕಳ ಸ್ಕರ್  ಅವರಿಗೆ  ಟಿಕಟ್  ನೀಡಿದ್ದು ಇದು ಮೇಘನಾ ಅವರ ಗೆಲುವಿಗೆ ದಾರಿಯಾದಂತಾಗಿದೆ.

Contact Your\'s Advertisement; 9902492681

ಅಲ್ಲದೆ ವಾರ್ಡನ ಎಲ್ಲ  ಸಮುದಾಯಗಳ ಜನರು ಮೇಘನಾ ಅವರ ಪರವಾಗಿ ಒಲವು ತೋರಿರುವುದರಿಂದ ಅವರ ಗೆಲುವಿನ ದಾರಿ  ಸುಗಮವಾದಂತಾಗಿದೆ. ವಾರ್ಡನ ಪ್ರಮುಖ ದೇವಸ್ಥಾನಗಳ ಸಮಿತಿಯವರು  ಸಭೆ  ಸೇರಿ ಚರ್ಚೆ ನಡೆಸಿ ಮೇಘನಾ ಕಳಸ್ಕರ್ ಅವರ ಗೆಲುವಿಗೆ ಒಮ್ಮತದ  ನಿರ್ಣಯ  ಕೈಗೊಂಡಿದ್ದು ಅವರ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಇದರಿಂದಾಗಿ ಮೇಘನಾ ಕಳಸ್ಕರ್ ಅವರ ಗೆಲುವು ಶತಸಿದ್ಧ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ವಾರ್ಡನ ಎಲ್ಲ ಪ್ರಮುಖ ದೇವಸ್ಥಾನಗಳ ಪ್ರಮುಖರಾದ ಸುಭಾಷ ಕಮಲಾಪೂರ, ರಂಗನಾಥ ದೇಸಾಯಿ, ನಾಗಣ್ಣ ಗಣಜಲಖೇಡ, ಘಾಳಪ್ಪ ದೊಡ್ಡಮನಿ, ಬಸವರಾಜ ಶೆಟಗಾರ, ಸಿದ್ರಾಮಯ್ಯ ಸ್ವಾಮಿ, ವಿರುಪಾಕ್ಷಯ್ಯ ಮಠಪತಿ,ಅಶೋಕ ಇಂಡಿ, ಭೀಮಾಶಂಕರ ಚಕ್ಕಿ, ಬಿಜೆಪಿ ಮುಖಂಡರಾದ ಧರ್ಮಪ್ರಕಾಶ ಪಾಟೀಲ, ಗುರು ಸ್ವಾಮಿ, ವಿಜಯಕುಮಾರ ಹುಲಿ, ದತ್ತು ಫಡ್ನಿಸ್, ಗೋರಖನಾಥ ಪಾಟೀಲ, ಶರಣು ಸಿಗಿ, ಸಂತೋಷ ಹುಡಗಿ, ಪವನ ಕದಮ್, ಅಮರ ಖಪಾಟೆ, ಸುರೇಶ  ಸಾಲಕ್ಕಿ, ವಿಜಯಕುಮಾರ ಬಿ.ಕೆ., ಸಾವಿತ್ರಿ ಕುಳಗೇರಿ, ಪ್ರ ಭಾವತಿ ದೊಡ್ಮಮನಿ ಹಾಗೂ ಸೇರಿದಂತೆ ಮತ್ತಿತರರು ಮೇಘನಾ ಕಳಸ್ಕರ ಅವರ ಪರವಾಗಿ ಮತಯಾಚನೆ ಮಾಡಿ ಮತ ನೀಡಿ ಕಳಸ್ಕರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here