ಜಗದ ಅರಿವಿಲ್ಲದ ಮಗುವಿಗೆ ಗುರು

0
16

ಒಂದು ಕಾಡು ಕಗ್ಗಲ್ಲು ಕೆತ್ತಿ ಶಿಲ್ಪಿ ಮೂರ್ತಿ ಮಾಡಿದ.
ಆ ಮೂರ್ತಿಗೆ ಜಗವೆಲ್ಲ ಕೈಯೆತ್ತಿ ಮುಗಿಯಿತು ದೇವರೆಂದು ಪೂಜಿಸಿ.

ಜಗದ ಅರಿವಿಲ್ಲದ ಮಗುವಿಗೆ ಗುರು ಅಕ್ಷರ ಬೋಧಿಸಿದ.
ಆ ಮಗು ಬ್ರಹ್ಮಾಂಡವೇ ಶೂನ್ಯವೆಂದ ಗುರುವಿನ ಅಕ್ಷರ ಧ್ಯಾನಿಸಿ.

Contact Your\'s Advertisement; 9902492681

ತನ್ನ ಕಷ್ಟ-ಸುಖಗಳನ್ನು ಬದಿಗಿಟ್ಟು ಸದಾ ಹಸನ್ಮುಖಿಯಾಗಿ
ಮೇಣದಂತೆ ಸವೆದ ನಮ್ಮ ದಾರಿಗೆ ದೀಪವಾಗಿ ಧೈರ್ಯ-ಸ್ಥೈರ್ಯ ತುಂಬಿದ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿನಿಲ್ಲಲು ಬಂಡೆ ಹಾಗೆ ಗಟ್ಟಿಗೊಳಿಸಿದ ಬಿರುಗಾಳಿಗೆ ಹುಲ್ಲುಕಡ್ಡಿ ಸೆಟೆದು ನಿಂತ ರಿತಿ ನಿಲ್ಲಲು.

ಕನಸುಕಂಡ, ದೇಶ ಭಾಷೆ ಕಟ್ಟಲು ನಮ್ಮ ಕೈಗಳಿಂದ
ಭಾರತಾಂಬೆಯ ಮಕ್ಕಳೆ ನೀವು ವಿವಿಧತೆಯಲ್ಲಿ ಏಕತೆ ಕಾಣಿರೆಂದ.

ಶಿಷ್ಯಗಣ ಪೂಜಿಪ ಗುರುವಿನ: ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ಶಿಕ್ಷಕರ ದಿನಾಚರಣೆಯ ಶುಭಾಶಯಗಳು ..💐💐💐

ಡಾ. ಸರ್ದಾರ ರಾಯಪ್ಪ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here