ಶಿಕ್ಷಕರು ದೇಶದ ರಕ್ಷಕರು

0
32

ಹೌದು ಶಿಕ್ಷಕರೇ ದೇಶದ ರಕ್ಷಕರು ಏಕೆಂದರೆ ಇವರು ರೂಪಿಸು ವಿದ್ಯಾರ್ಥಿಗಳ ಬದುಕು ಸುಂದರ ಸ್ವಪ್ನ.

ಒಬ್ಬ ವಿದ್ಯಾರ್ಥಿಗೆ ಮೂರು ಜನ ಗುರುಗಳು ಇರುತ್ತಾರೆ ಅವರೆಂದರೆ ಬದುಕು ಅಂದ್ರೆ ಏನು ಅಂತ ತಿಳಿಸಿಕೊಟ್ಟ ತಂದೆ, ಜನ್ಮ ನೀಡಿ ಲಾಲನೆ ಪಾಲನೆ ಪೋಷಣೆ ಮಾಡಿ ಬೆಳೆಸಿದ ತಾಯಿ ಹಾಗೂ ಕಲ್ಲನ್ನು ಶಿಲೆಯಾಗಿ ಮಾಡಿದ ಗುರುಗಳು.
ಅದಕ್ಕಾಗಿ ವಿದ್ಯೆ ಕಲಿಸಿದ ಗುರುಗಳೇ ಈ ದೇಶದ ರಕ್ಷಕರು ಎಂದು ಹೇಳುತ್ತಾರೆ.

Contact Your\'s Advertisement; 9902492681

ನಮ್ಮ ಜೀವನದಲ್ಲಿ ಗುರುಗಳ ಪಾತ್ರ ತುಂಬಾ ಮುಖ್ಯವಾದುದು, ಅವರಿಲ್ಲದ ಜೀವನ ಊಹೆ ಮಾಡಿಕೊಳ್ಳಲು ಕೂಡ ನಮ್ಮಿಂದ ಸಾಧ್ಯವಿಲ್ಲ.

ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಶಾಲೆಯಾ ಗುರುಗಳ ಪಾತ್ರ ಯಾಕಂದ್ರೆ ಏನನ್ನು ಅರಿಯದ ಚಿಕ್ಕ ಮಕ್ಕಳನ್ನು ಒಂದು ಶಿಲೆಯ ರೂಪ ನೀಡಿ ಅವರನ್ನು ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವವರು ಈ ಪ್ರಾಥಮಿಕ ಶಾಲಾ ಶಿಕ್ಷಕರು ನಾನು ಸದಾ ನನ್ನ ಗುರುಗಳಿಗೆ ಚಿರಋಣಿಯಾಗಿರುತ್ತೇನೆ.

ಈ ಪ್ರಾಥಮಿಕ ಶಾಲೆಯ ಗುರುಗಳು ಕುರಿತು ನನಗೆ ಒಂದು ಮಾತು ನೆನಪಾಗುತ್ತೆ ಅದೇನೇದರೆ….

ಗದರಿಸಿ ಬೆದರಿಸಿ ಕಟ್ಟಿಗೆ ಇಂದ ಹೊಡೆದು
ವಿದ್ಯೆ ಬುದ್ದಿ ಕಲಿಸಲು ಪರದಾಡಿ
ತಲೆ ತಲೆ ಹೊಡಕೊಂಡ್ರು ಕಲಿಯದ ನಾವುಗಳು
ಆದ್ರೂ ಕೂಡ ನಮನ್ನು ಒಬ್ಬ ಉತ್ತಮ ವ್ಯಕ್ತಿಯಾಗಿ ಮಾಡಲು ಪಡಬಾರದಂತ ಕಷ್ಟ ಪಟ್ಟು ವಿದ್ಯೆ ಕಲಿಸುತ್ತಾರೆ.

ಅಂದ್ರೆ ಈ ಚುಟುಕುವಿನ ಅರ್ಥ ನಾವುಗಳು
ಶಾಲೆಗೆ ಸೇರುವ ಚಿಕ್ಕ ವಯಸ್ಸಿಗೆ ಏನು ಅರಿಯದೆ ಇರುವ ಸಂದರ್ಭದಲ್ಲಿ ಗುರುಗಳು ನಮನ್ನು ಹೊಡೆದು ಬಡೆದು ಗದರಿಸಿ ಪಡಬಾರದ ಕಷ್ಟ ಪಟ್ಟು ನಮನ್ನು ಒಂದು ಹಂತಕ್ಕೆ ತರುವಲ್ಲಿ ಇವರ ಪಾತ್ರ ತುಂಬಾ ದೊಡ್ಡದು.

ಮೊದಲನೇ ಬಾರಿ ಮಗು ಶಾಲೆಗೆ ಹೋದಾಗ ಆ ಮಗುವಿಗೆ ವಿವೇಕ, ವಿನಯ, ಭಕ್ತಿ, ಭಾವ, ಎಲ್ಲಾ ರೀತಿಯ ಗುಣಗಳನ್ನು ತೋರಿಸಿ ತಿಳಿಸಿ ಬೆಳೆಸುವ ಬಲಿಷ್ಠ ಶಕ್ತಿ ಈ ಪ್ರಾಥಮಿಕ ಶಾಲಾ ಶಿಕ್ಷಕರು ಹೊಂದಿರುತ್ತಾರೆ ಹಾಗೆ ಇವರೇ ಮಕ್ಕಳಿಗೆ ರೋಲ್ ಮೋಡಲ್ ಆಗಿರುತ್ತಾರೆ.

ಶಿಕ್ಷಕ ಎಂಬ ಪದದ ಮುಖ್ಯ ಅರ್ಥ -:-

ಶಿ – ಶಿಸ್ತು
ಕ್ಷ – ಕ್ಷಮೆ
ಕ -ಕರುಣೆ

ಈ ಮೂರನ್ನು ಹೊಂದಿರುವವರೆ ನಿಜವಾದ ಶಿಕ್ಷಕರು ಎಂಬ ಪರಿಪಾಠವಿದ ನಮನ್ನು ಈ ದೇಶದ ಸತಾಪ್ರಜೆಯನ್ನಾಗಿ ರೂಪಿಸುವ ಶಿಕ್ಷಕರಿಗೆ ನಾವುಗಳು ಎಷ್ಟು ವಂದನೆ ಸಲ್ಲಿಸಿದರು ಅದು ಕಡಿಮೇನೆ.

ಗುರುಗಳೇ ನಮಗೆ ದಾರಿದೀಪ
ನೀಡುವರು ನಮ್ಮ ಜ್ಞಾನಕ್ಕೆ ಸ್ಪಷ್ಟರೂಪ
ಇವರೇ ನಮ್ಮ ಪ್ರೀತಿಯ ಹೆಮ್ಮೆಯ ಗುರುಗಳು.

ಈ ಕವಿತೆಯಲ್ಲಿ ನಾವು ಹೆಚ್ಚು ಯಾರನ್ನು ಹಚ್ಚಿಕೊಂಡಿರುತ್ತೇವೊ ಎಂಬುದನ್ನು ಕಾಣುತ್ತೆವೆ ನಮಗೆ ವಿದ್ಯೆ ಕಲಿಸಿದ ಗುರುಗಳಲ್ಲಿ ಕೆಲವೊಬ್ಬರನ್ನು ನಮಗೆ ಗೊತ್ತಿರದೆ ಅಷ್ಟು ಅವರ ಮಾರ್ಗದರ್ಶನ ಮೇರೆಗೆ ನಾವುಗಳು ಅವರ ಭಾವನೆಗಳಿಗೆ ಸ್ಪಂದನೆ ನೀಡುತ್ತೇವೆ.

ಗುರುಗಳು ಎಂದರೆ ಕೇವಲ ಒಬ್ಬ ಸಾದಾರಣವಾದ ವ್ಯಕ್ತಿ ಅಲ್ಲ ಅವರು ಈ ದೇಶದ ಬಲಿಷ್ಠ ಶಕ್ತಿ.ನಾನು ಇಂದು ಏನ್ ಅಗಿದೇನ್ನೊ ಅದಕ್ಕೆ ಮೂಲ ಕಾರಣಿಕರ್ತಾರೆ ಈ ನನ್ನ ಗುರುಗಳು.ಹೌದು ವಿದ್ಯಾರ್ಥಿ ಕಷ್ಟದಲ್ಲಿದ್ದಾಗ, ಅವರಿಗೆ ಹೆಗಲಾಗಿ ನಿಲ್ಲುವವರೇ ನಿಜವಾದ ಗುರುಗಳು.ನನ್ನ ಕಷ್ಟಕ್ಕೆ ಹೆಗಲಾದ ನನ್ನ ಗುರುಗಳು.

ವಿದ್ಯಾರ್ಥಿಗಳಿಗೆ ಅವರು ಯಾವ ಹಂತಕ್ಕೆ ಹೋಗಿರುತ್ತಾರೋ ಅದಕ್ಕೆ ಮುಖ್ಯ ಕಾರಣಿಭುತ್ತಾರೆ ಈ ಶಿಕ್ಷಕರು.
ಅಜ್ಞಾನದಲ್ಲಿ ಜ್ಞಾನವನ್ನು ಪಡೆದು ಕೊಳ್ಳುವಂತೆ ಮಾಡಿದವರು ಈ ನಮ್ಮ ಶಿಕ್ಷಕರು ನಾವುಗಳು ನಮ್ಮ ಜೀವನದಲ್ಲಿ ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಅದರಲ್ಲಿ ಗುರುವಿನ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. ಗುರು ಎಂದರೆ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಕಡೆ ಕೊಂಡೊಯ್ಯುವುದೇ ಎಂದರ್ಥ.ಹಿಂದಿನ ಕಾಲದಿಂದಲೂ ಒಂದು ಮಾತು ಹೇಳುತ್ತಾರೆ ಅದೇನೆಂದರೆ ಜ್ಞಾನವಿಲ್ಲದೆ ಮುಕ್ತಿಯಿಲ್ಲ ಎಂಬ ಮಾತು.

ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯವರೆಗೆ ಈ ಬ್ರಹ್ಮ ನೋಡಲಲ್ಲಿ ಒಂದಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಾದವರ ಮೊದಲ ಕರ್ತವ್ಯವೆಂದರೆ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಳ್ಳುವುದು ಗೌರವ ನೀಡುವುದು. ಪಠ್ಯವಸ್ತುವಿನಲ್ಲಿರುವ ವಿವಿಧ ವಿಷಯಗಳನ್ನು ಬೋಧಿಸಲು ತರಗತಿಗೆ ಬರುವ ಎಲ್ಲ ಶಿಕ್ಷಕರನ್ನು ಸಮಾನವಾಗಿ ಗೌರವಿಸುವುದು ನಮ್ಮ ಗುಣವಾಗಿರಬೇಕು.

ಯಾವುದೇ ಭೇದಭಾವ ಬೇಡ. ಯಾವ ಶಿಕ್ಷಕರ ಬಗ್ಗೆಯೂ ಪೂರ್ವಗ್ರಹ ಇಟ್ಟುಕೊಳ್ಳಬಾರದು ಎಲ್ಲ ಶಿಕ್ಷಕರ ಬಳಿ ನಮ್ಮ ನಡವಳಿಕೆ ಒಂದೇ ರೀತಿ ಇರಬೇಕು.ಅನುಭವದಿಂದ ಕೂಡಿರುವ ಅವರ ಬೋಧನೆಯಿಂದ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ ಎಂಬುದನ್ನು ನಾವುಗಳು ನೆನಪಿನಲ್ಲಿ ಇಟ್ಟುಕೊಂಡಿರಬೇಕು..

ಗುರು-ಶಿಷ್ಯರ ಸಂಬಂಧ ಪರಸ್ಪರ ಏಳೇಳು ಜನುಮಕ್ಕೂ ಮಿಗಿಲಾದ ಸಂಬಂಧ.ನಾವು ನಮ್ಮ ಶಿಕ್ಷಕರ ಬಗ್ಗೆ ಎಷ್ಟು ವಿಶ್ವಾಸ ತೋರಿಸುತ್ತೀರೋ ಅಷ್ಟೇ ವಿಶ್ವಾಸವನ್ನು ನಮ್ಮ ಶಿಕ್ಷಕರು ನಮ್ಮ ಬಗ್ಗೆ ತೋರುತ್ತಾರ, ತೋರುವಂತೆ ನಾವುಗಳು ನಡೆದುಕೊಳ್ಳಬೇಕು.ನಮ್ಮ ಮತ್ತು ಶಿಕ್ಷಕರ ನಡುವೆ ಬೆಳೆದುಬಂದಿರುವ ವಿಶ್ವಾಸವ, ನಂಬಿಕೆ ಎಲ್ಲಾವನ್ನು ಶಿಕ್ಷಕರು ತಮ್ಮ ಜೀವನವಿಡೀ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.

ಒಂದು ಉದಾಹರಣೆ — ನಾನು ಡಿಗ್ರಿ ಓದುವ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿದ್ದೆವು ಆಗ ನಮ್ಮ ಜೊತೆ ಬಂದಿದ್ದ ಒಬ್ಬ ಗುರು ಅಂದ್ರೆ ಗುರುಮಾತೆ ಎಂದು ಹೇಳಲು ಬಯಸುತ್ತೇನೆ ನನಗೆ ಅವರು ಒಂದು ರೀತಿಲಿ ತಾಯಿ ಅಂತನೇ ಹೇಳಬಹುದು ಅವರು ನನ್ನಲ್ಲಿ ಯಾವ ಗುಣವನ್ನು ಅರಿತ್ತಿದ್ದರೋ ಏನೋ ಅದು ನನಗೆ ಗೊತ್ತಿರಲಿಲ್ಲ ಆದ್ರೂ ಅವರು ತಮ್ಮ ಇಡೀ ಜವಾಬ್ದಾರಿಯನ್ನು ನನಗೆ ಒಪ್ಪಿಸಿದ್ದರು (8 ದಿನಗಳ ) ಹೋಗಿ ಬರುವವರೆಗೂ ಅವರು ನೀಡಿರುವ ಆ 10000 ಹಣವನ್ನು ನನ್ನ ಹತ್ತಿರ ಕೊಟ್ಟಿದ್ದರು ಅದಕ್ಕೆ ಮುಖ್ಯ ಕಾರಣ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ನಾನು ಅವರಿಗೆ ಕೊಟ್ಟ ಗೌರವ ಅಂದ ಹೇಳಲು ತುಂಬಾ ಹೆಮ್ಮೆಯಿಂದ ಹೇಳಲು ಇಷ್ಟ ಪಡುತ್ತೇನೆ ನಾನು ಅಮ್ಮ ನೀವು ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಭದ್ದಾಳಾಗಿರುತ್ತೇನೆ ಎಂದು ಹೇಳುತ್ತೇನೆ.

ಈ ಉದಾಹರಣೆ ಯಾಕೆ ಹೇಳತಿದೀನಿ ಅಂದ್ರೆ ಇಂದಿನ ಪ್ರಸ್ತುತ ದಿನಗಳಲ್ಲಿ ಒಂದು ರೂಪಾಯಿ ನೇ ಕೊಡದೆ ಇರೋ ಪರಿಸ್ಥಿತಿ ಅದ್ರಲ್ಲಿ ಅವರು ಒಬ್ಬ ಉನ್ನತವಾದ ಸ್ಥಾನದಲ್ಲಿ ಸ್ನಾತಕೋತ್ತರ ವಿಶ್ವ ವಿದ್ಯಾಲಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ದೊಡ್ಡ ಸಂಗತಿ ಅಷ್ಟು ದೊಡ್ಡ ಜವಾಬ್ದಾರಿ ಕೊಟ್ಟಿದ್ದು ನನ್ನ ಭಾಗ್ಯವೇ ಎಂದು ಹೇಳಬಹುದು.

ನಾವು ಶಾಲೆ ಬಿಟ್ಟ ನಂತರವೂ ನಮ್ಮ ಶಿಕ್ಷಕರ ಬಗ್ಗೆ ಅದೇ ವಿಶ್ವಾಸ ಮತ್ತು ಗೌರವವನ್ನು ಉಳಿಸಿಕೊಳ್ಳಬೇಕು ನಾನು ಆ ನಂಬಿಕೆಗೆ ಬದ್ದವಾಗಿರುತ್ತೇನೆ ಎಂದು ಹೇಳಬಯಸುತ್ತೇನೆ.

ವಿದ್ಯೆಯ ಒಂದು ಕಲೆ
ಅದನ್ನು ಕಲಿಯಲೇಬೇಕು ತಲೆ
ಕಲಿತ ಮೇಲೆ ಸಿಗುವುದು ಅದರ ಬೆಲೆ ಆ ಬೆಲೆಯನ್ನು ನಾನು ಪಡೆದಿರುವುದು ನನ್ನ ಈ ಗುರುಗಳಿಂದ.

ಗುರುವೆಂದರೆ ಕೇವಲ ಶಿಕ್ಷಕರಲ್ಲ, ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ,
ಮುಂದೆ ಗುರಿ ಇರಬೇಕು ಹಿಂದೆ ಗುರುವಿದ್ದರೆ ಜಯ ಎನ್ನುವುದು ನಮ್ಮದೇ ಆಗಿರುತ್ತೆ.

ಮುಗ್ದ ಮನಸ್ಸು ಹೊಂದಿರುವ ಮಗುವಿನಲ್ಲಿ ಅಕ್ಷರದ ಜ್ಞಾನ ಬಿತ್ತಿ ಪ್ರತಿಯೊಬ್ಬ ಮಗುವಿನ ಭವಿಷ್ಯಕ್ಕೆ ಬೆಳಕು ಚೆಲ್ಲಿ
ದೇಶದ ಸುಂದರ ನಾಡು ಕಟ್ಟುವ ನಿಜವಾದ ಶಿಲ್ಪಿಗಳೇ ಈ ನಮ್ಮ ಶಿಕ್ಷಕರು ಗುರುಗಳೇ ನಮಗೆ ದಾರಿದೀಪ ನೀಡುವವರು ನಮ್ಮ ಜ್ಞಾನಕ್ಕೆ ಸ್ಪಷ್ಟರೂಪ ಇವರೆ ನಮ್ಮ ಪ್ರೀತಿಯ ಹೆಮ್ಮೆಯ ಗುರುಗಳು.

ಇಂದಿನ ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನೇ ಬದಲಾಯಿಸಿಬಿಡಬಲದು, ಯಾಕೆ ಈ ಮಾತನ್ನು ಹೇಳುತ್ತಿರುವೆ ಎಂದರೆ ಮುಂದೊಂದು ದಿನ ನಾವು ಅಂದ್ರೆ ವಿದ್ಯಾರ್ಥಿಗಳಾದವರು ಒಂದು ಉನ್ನತವಾದ ಸ್ಥಾನಕ್ಕೆ ಹೋದಾಗ ನಮಗೆ ತಿದ್ದಿ ತೀಡಿ ಬುದ್ದಿ ಹೇಳಿದ ಗುರುವನ್ನು ಎಂದು ಮರೆಯಬಾರದು. ಆದ್ರೆ ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೆ ನಾವುಗಳು ಎತ್ತರದ ಸ್ಥಾನಕೆ ಹೋದಾಗ ನಮ್ಮ ಎದುರಗಡೆ ನಮ್ಮ ಗುರುಗಳು ಬಂದ್ರು ಕೂಡ ಅವರನ್ನು ನೋಡಿದ್ರು ನೋಡದೆ ಹಾಗೆ ಇರೋ ಅಂತ ಸಂದರ್ಭದ ಇದಾಗಿದೆ.

ಆ ತರ ಮಾಡುವುದಕ್ಕಿಂತ ಮುಂಚೆ ಒಂದು ಬಾರಿ ನಾವು ನಮ್ಮ ಮನಸ್ಸಿಗೆ ಕೇಳಿ ನೋಡಿದಾಗ ಒಳ ಮನಸ್ಸು ಹೇಳುತ್ತೆ ನೀನು ಮಾಡುತ್ತಿರುವುದು ಸರಿ ಅಲ್ಲ ಅಂತ ಅದೆ ಸಂದರ್ಭದಲ್ಲಿ ಹೊರ ಮನಸ್ಸು ಹೇಳುತ್ತೆ ಎ ಹೋಗ್ಲಿ ಬಿಡು ಅಂತ. ಆದ್ರೆ ನಾವು ಹಾಗೆ ಮಾಡುವುದು ತುಂಬಾ ದೊಡ್ಡ ತಪ್ಪು.

ಅಂದು ಆ ಗುರುಗಳೇ ನಮಗೆ ವಿದ್ಯೆ ಕಲಿಸಿ ಬುದ್ದಿ ಹೇಳಿ ಮಾರ್ಗದರ್ಶನ ನೀಡದಿದ್ದರೆ ನಾವು ಈ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿತ್ತಾ? ಖಂಡಿತವಾಗಿವು ಅದು ಅಸಾಧ್ಯವಾದ ಮಾತು. ಅದಕ್ಕಾಗಿ ನಾವುಗಳು ಎಷ್ಟೆ ದೊಡ್ಡ ಸ್ಥಾನಕ್ಕೆ ಹೋದ್ರು ಕೂಡ ಮೊದಲು ಗುರುಗಳಿಗೆ ಗೌರವ ನೀಡುವ ಮನೋಭಾವನೆ ನಮ್ಮಲಿರಬೇಕು ಬರಬೇಕು.ಒಂದು ಗಾದೆ ಮಾತಿದೆ ಅದೇನೆಂದರೆ ಗುರುವಿನ ಗುಲಾಮನಗುವ ತನಕ ದೊರೆಯದಣ್ಣ ಮುಕ್ತಿ.

ಅಂದ್ರೆ ನಾವು ಮೊದಲು ನಮ್ಮ ಶಿಕ್ಷಕರನ್ನ ಗೌರವದಿಂದ ಗುಲಾಮರಾಗಿ ಅವರನ್ನ ಅನುಸರಿಸಬೇಕು ಎಂಬುದು ಈ ಮಾತಿನ ಅರ್ಥ.ಪ್ರಸ್ತುತ ದಿನಗಳಲ್ಲಿ ಅಂದ್ರೆ ಈ ಕೊರೋನ ಎಂಬ ಮಹಾ ಮಾರಿ ಒಕ್ಕರಿಸಿರುವ ಕಾರಣ ಕಳೆದ 2 ವರ್ಷಗಳಿಂದಲೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹೇಳಲಾರದ ಪರಿಸ್ಥಿತಿಗೆ ಬಂದು ನಿಂತಿದೆ ಎನ್ನಬಹುದು.

ಮೊದಲು ವಿದ್ಯಾರ್ಥಿಗಳಿಗೆ ಬೇಸಮೆಂಟ್ ಚನ್ನಾಗಿ ಆದ್ರೆ ಮೇಲಿರುವ ಗೋಡೆ ಅಭಿವೃದ್ಧಿಎಡಗೆ ಸಾಗಲು ಯಾವುದೇ ತೊಂದರೆಯು ಆಗುವುದಿಲ್ಲ.

ಅಡಿಪಾಯವೇ ಗಟ್ಟಿಯಾಗಿ ಇರದೇ ಹೋದರೆ
ಅದನ್ನು ನಾವುಗಳು ತಿಳಿದುಕೊಳ್ಳೋದು ಒಂದು ಮಾತು ದೂರಾನೇ ಉಳಿಯಿತು ಅದ್ರಲ್ಲಿ ಈ ಕೋವಿಡ್ ಇಂದಾಗಿ ಆನ್ಲೈನ್ ತರಗತಿ ಆರಂಭವಾಗಿ ಎಲ್ಲವು ಅಸ್ತ ವ್ಯಾಸ್ತವಾಗಿ ಪರಿಣಾಮಿಸುವ ಸಂದರ್ಭ ಇದಾಗಿದೆ.

ನನ್ನ ಮಾತು ಮುಗಿಸುವುದಕ್ಕಿಂತ ಮುಂಚೆ ಒಂದು ಮಾತು ಹೇಳಲು ಬಯಸುತ್ತೇನೆ ಅದೇನೆಂದರೆ ಗುರುಗಳು ಹೇಳಿದಂತೆ ಕೇಳಿ ಅಪ್ಪ ಅಮ್ಮ ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ಒಂದು ಸ್ಥಾನಕ್ಕೆ ನಿಲ್ಲುವುದು ನಮ್ಮೆಲ್ಲರ ( ವಿದ್ಯಾರ್ಥಿಗಳ ) ಆದ್ಯ ಕರ್ತವ್ಯವಾಗಿದೆ.

ಅದನ್ನು ಸಾದಿಸಲು ಕೂಡ ಗುರುಗಳು ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಮನೋಭಾವನೇ ಹಾಗೂ ಅವರು ನಮ್ಮ ಮಕ್ಕಳೇ ಎಂದು ಮಾನವೀಯತೆಯಾ ದೃಷ್ಟಿಯಿಂದ ನಡೆದುಕೊಳ್ಳುತ್ತಾರೆ ಎಂದು ಅಪೇಕ್ಷೆ ಪಡುತ್ತೇನೆ ಅದಕ್ಕೆ ನಾವುಗಳು ಕೂಡ ಬದ್ದವಾಗಿರಬೇಕು ಅಂದಾಗ ಮಾತ್ರ ದೇಶದ ಭದ್ರತೆ ಸುರಕ್ಷತೆ ಇಂದ ಕಾಣಲು ಪ್ರಗತಿಯತ್ತ ಕಾಣಲು ಸದ್ಯವಾಗುತ್ತದೆ.

ನನ್ನ ಸಾಧನೆಗೆ ಸ್ಪೂರ್ತಿ
ಬದುಕಿಗೆ ದಾರಿ ತೋರಿದ
ಗುರುವಿನ ಆಶೀರ್ವಾದ ಯಾವಾಗಲೂ ಸದಾ ನನ್ನ ಮೇಲೆ ಇರಲಿ ಎಂದು ಆಶಿಸುತ್ತೇನೆ.

ನನಗೆ ಉತ್ತಮ ಮಾರ್ಗದರ್ಶನ ನೀಡಿ
ಗೆಳೆಯರಂತೆಯೇ ಇಂದಿಗೂ ಕೂಡ ನನ್ನೊಂದಿಗೆ ಸದಾ ಕಷ್ಟ ಸುಖ ,ನೋವು ನಲಿವುಗಳಲ್ಲಿ ಭಾಗಿಯಾಗಿ ಸರಿ ತಪ್ಪುಗಳನ್ನು ತಿಳಿಸಿ ನನ್ನ ಜೀವನದಲ್ಲಿ ಶಿಸ್ತು ಮೂಡಿಸಿದಂತ ನನ್ನ ಎಲ್ಲಾ ಗುರು ವೃಂದದವರಿಗೆ ನನ್ನ ಮನಪೂರ್ವಕವಾಗಿ ಅಭಿನಂದನೆಗಳು ಹಾಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here