ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕ ಹುದ್ದೆ ಶ್ರೇಷ್ಠ

0
16

ಕಲಬುರಗಿ : ಜಗತ್ತಿನ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕ ಹುದ್ದೆ ಅತಿ ಶ್ರೇಷ್ಠವಾದದ್ದು ಎಂದು ವಿ.ಜಿ.ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಅಣ್ಣಾರಾವ ಧುತ್ತರಗಾಂವ ಅಭಿಪ್ರಾಯಪಟ್ಟರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕ್ತಿ ಎನ್ನುವಂತೆ ವಿದ್ಯಾರ್ಥಿಗಳಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಭಾವಿ ಪ್ರಜೆಗಳನ್ನು ರೂಪಿಸಬೇಕಿದೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗುರುಗಳು ಶ್ರಮವಿದೆ. ಶರಣಬಸವೇಶ್ವರ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮರ್ಪಣಾಭಾವ, ಸಮಯ ಅರಿವು ಇರುತ್ತದೆ. ಜಗತ್ತಿನ ಅನೇಕ ಉನ್ನತ ಹುದ್ದೆಗಳಲ್ಲಿ ಶರಣಬಸವೇಶ್ವರ ಸಂಸ್ಥಾನ ಕಲಿತ ವಿದ್ಯಾರ್ಥಿಗಳಿದ್ದಾರೆ. ಸತತ ಓದು, ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಉನ್ನತ ಹುದ್ದೆಗಳಿಗೆ ಸೇರಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಈ ಭಾಗದಲ್ಲಿ ಮೊದಲಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಆರಂಭಿಸಿ, ಹೆಣ್ಣುಮಕ್ಕಳು ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯವಾಗಿದೆ. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಅಪ್ಪ ಅವರು ಸಹ ತಮ್ಮ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಕರನ್ನು ನೇಮಿಸಿಕೊಂಡು ಈ ಭಾಗದ ಶಿಕ್ಷಣ ಉನ್ನತ ಸ್ಥಾನದಲ್ಲಿರುವಂತೆ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಕರ ಆದರ್ಶಗಳು ಮೈಗೂಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಹೊಸ ಮಾರ್ಗ ತೋರಿಸುತ್ತದೆ. ಈ ವಿಷಯ ಕುರಿತು ಪ್ರಾಥಮಿಕ ಶಾಲೆಯ ಶಿಕ್ಷಕರು ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಮಾಡುವ ಅವಶ್ಯಕತೆ ಇದೆ ಎಂದರು.

ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಸಿದ್ದಮ್ಮ ಗುಡೇದ್ ಅವರು ಸನ್ಮಾನ ಸ್ವೀಕರಿಸಿ ಮಾತಾಡಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಾಬುರಾವ ಚವ್ಹಾಣರನ್ನು ವಿಶೇಷ ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ಕಲಾವಾಣಿ ವಿದ್ಯಾರ್ಥಿ ಸಂಘದ ಸಲಹೆಗಾರ ಶ್ರೀಮತಿ ಜಾನಕಿ ಹೊಸುರ, ಸಹ ಸಲಹೆಗಾರ ಡಾ.ಸೀಮಾ ಪಾಟೀಲ, ವಿದ್ಯಾರ್ಥಿ ಸಂಘದ ಪದಾಧಿಕಾರಿ ಕು. ಭಾಗ್ಯಶ್ರೀ ಕೆಲ್ಲೂರ, ಕು. ಕವಿತಾ ಗುತ್ತೇದಾರ ವೇದಿಕೆ ಮೇಲಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪುಟ್ಟಮಣಿ ದೇವಿದಾಸ, ಕೃಪಾಸಾಗರ ಗೊಬ್ಬುರ, ಡಾ.ಸಂಗೀತಾ ಪಾಟೀಲ, ಶ್ರೀಮತಿ ದೀಶಾ ಮೆಹತಾ, ಶ್ರೀಮತಿ ವೀಣಾಮಠ, ಶ್ರೀಮತಿ ದಾಕ್ಷಾಯಣಿ ಕಾಡಾದಿ, ಶ್ರೀಮತಿ ಕಲ್ಪನಾ ಡಿ., ಕು.ಶ್ರದ್ಧಾ ಪುರಾಣಿಕ, ಶ್ರೀಮತಿ ರೂಪಾ ಕುಲಕರ್ಣಿ, ಶಾಂತಲಿಂಗ ಬೋಧಕೇತರ ಸಿಬ್ಬಂದಿ ಶ್ರೀಮತಿ ವಿದ್ಯಾ ರೇಷ್ಮಿ, ವಿನೋದ ಹಳಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ ಮತ್ತು ವಿದ್ಯಾರ್ಥಿನಿಯರಿದ್ದರು.

ಕು. ವಚನಶ್ರೀ ಸ್ವಾಗತಿಸಿದರು, ಕು.ಚಂದ್ರಕಲಾ ಪಾಟೀಲ ನಿರೂಪಿಸಿದರೆ, ಕು. ಕವಿತಾ ಗುತ್ತೇದಾರ ವಂದಿಸಿದರು, ಕು.ಭುವನೇಶ್ವರಿ ಚವ್ಹಾಣ ಪ್ರಾರ್ಥಿಸಿದರು, ಮಹಾವಿದ್ಯಾಲಯದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here