“ಮೋಡದ ಮರೆಯಲ್ಲಿ ಮಿನುಗುವ ನಕ್ಷತ್ರ” ಪ್ರಶಸ್ತಿ ಪ್ರದಾನ

0
183

ಕಲಬುರಗಿ: ಮನುಷ್ಯನಿಗೆ ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ, ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮನಾಗಿರುತ್ತದೆ ಎಂದು ಕೆಎಸ್ ಆರ್ ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ ಹೇಳಿದರು.

ಇಂದು ತಾಲ್ಲೂಕಿನ ಹರಸೂರ ಗ್ರಾಮದ ಶ್ರೀ ಕರಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕರಿಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ  ಸಂಸ್ಥೆ, ಗೆಳೆಯರ ಬಳಗ ಹರಸೂರ ಹಾಗೂ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ “ಮೋಡದ ಮರೆಯಲ್ಲಿ ಮಿನುಗುವ ನಕ್ಷತ್ರ” ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ನಾನು ಎನ್ನುವ ಅಹಂಕಾರ ಮನಸ್ಸನ್ನು ಸುಟ್ಟರೆ ನಾನೆ ಹೆಚ್ಚು ಎನ್ನುವ ದುರಹಂಕಾರ ಜೀವನವನ್ನೇ ಸುಡುತ್ತದೆ.ನಿಸ್ವಾರ್ಥ ಸೇವೆ ಮಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಕೊಡುತ್ತಿರುವುದು ಹೆಮ್ಮೆಯ ವಿಷಯವೆಂದು ಹೇಳಿದರು.

Contact Your\'s Advertisement; 9902492681

ಕಲಬುರಗಿ ತಹಸಿಲ್ದಾರರಾದ  ಪ್ರಕಾಶ ಕುದುರಿ  ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ, ನಮ್ಮ ನೋವು ನಮಗೆ ಗೊತ್ತಾದರೆ ಬದುಕಿದ್ದೇವೆ ಎಂದರ್ಥ ಇನ್ನೊಬ್ಬರ ನೋವು ನಮಗೆ ಗೊತ್ತಾದರೆ ಮನುಷ್ಯರಾಗಿದ್ದೇವೆ ಎಂದರ್ಥ, ಕೆಲವು ಜನರು ಬಣ್ಣಗಳನ್ನು ಬದಲಾಯಿಸಿದರೆ ನಮ್ಮಲ್ಲಿರುವ ಆತ್ಮಶಕ್ತಿ  ಸಮಯವನ್ನೆ ಬದಲಾಯಿಸುತ್ತದೆ. ಸನ್ಮಾನ, ಪ್ರಶಸ್ತಿ ಮನುಷ್ಯನಿಗೆ ಉತ್ತಮ ಕಾರ್ಯ ಮಾಡುವದಕ್ಕೆ ಮನಸ್ಸು ಇಮ್ಮಡಿಗೊಳಿಸುತ್ತದೆ ಎಂದರು.

ಹರಸೂರ ಕಲ್ಮಠದ ಕರಬಸವೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಮುಖ್ಯ ಗುರುಗಳಾದ ಡಾ. ರಾಜಕುಮಾರ ಪಾಟೀಲ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಉದ್ಯಮಿ ಶಿವರಾಜ ಪಾಟೀಲ, ಬಸವರಾಜ ಸಮಾಳ ವೇದಿಕೆಯ ಮೇಲಿದ್ದರು. ರೇವಣಸಿದ್ದಪ್ಪ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಇದೆ ಸಂದರ್ಭದಲ್ಲಿ ರೈತ ವಿಜ್ಞಾನಿ ಶರಣಬಸಪ್ಪ ಪಾಟೀಲ, ಶಿಕ್ಷಕರಾದ ಶಿವಕಾಂತ ಚಿಮ್ಮಾ, ಗಂಗೂಬಾಯಿ ನಂದ್ಯಾಳ, ಸುಧಾರಾಣಿ ಕಂತಿ, ಜನಪದ ಕಲಾವಿದ ರಾಜು ಹೆಬ್ಬಾಳ, ಸಮಾಜ ಸೇವಕ ನಾಗಣ್ಣ ವಿಶ್ವಕರ್ಮ ಇವರಿಗೆ  “ಮೋಡದ ಮರೆಯಲ್ಲಿ ಮಿನುಗುವ ನಕ್ಷತ್ರ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊರೊನಾ ವಾರಿಯರ್ಸ್ ಳಾದ ಕಮಲಾಪುರ ಪೋಲಿಸ ಠಾಣೆಯ ಪಿಎಸ್ಐ ಶಿವಕಾಂತ ಕಮಲಾಪುರ,ಹರಸೂರ ವೈದ್ಯರಾದ ಎಂ ಎಂ ಬೇಗ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರಾಜ ಕುಮಾರ ಉಪ್ಪಿನ, ಸೋಮಶೇಖರ ಡಿಗ್ಗಿ, ವಿಶ್ವನಾಥ ಭೂಸಾರೆ,ದೇವಿಂದ್ರ ವಿಶ್ವಕರ್ಮ,ನೀರಜ ಸಮಾಳ, ಶಿವಕುಮಾರ ಸಮಾಳ,ಮಹೇಶ ತೆಲೆಕುಣಿ,ನಾಗಣ್ಣ ಸೀರಿ, ಸಿದ್ದಯ್ಯಸ್ವಾಮಿ ಸಮಾಳ, ಶಿವಶರಣಪ್ಪ ಮುದ್ದಾ, ರೇವಣಸಿದ್ದಪ್ಪ ಮಂಗಲಗಿ, ಮಾಹಾ೦ತಾಬಾಯಿ ಸಮಾಳ, ಶರಣಮ್ಮ ಪುರಾಣಿಕ, ಮಹಾನಂದ ಸಮಾಳ, ಶರಣಪ್ಪ ಹಳ್ಳ, ದೇವಾನಂದ ದುರ್ಗದ, ಪಂಚಾಕ್ಷರಿ ಕಂತಿ, ಚನ್ನಬಸಯ್ಯ ಸಮಾಳ ಸೇರಿದಂತೆ  ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here