ತಬ್ರೆಜ್ ಅನ್ಸಾರಿ ಹತ್ಯೆ ಪ್ರಕರಣ ಖಂಡಿಸಿ ಬ್ರಹತ್ ಪ್ರತಿಭಟನೆ

0
103

ಕಲಬುರಗಿ: ತಬ್ರೆಜ್ ಅನ್ಸಾರಿ ಹತ್ಯೆ ಪ್ರಕರಣ ಹಾಗೂ ದೇಶದಲ್ಲಿ ದಲಿತರ ಮತ್ತು ಮುಸ್ಲಿಂರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹತ್ಯೆಗಳನ್ನು ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಮುಸ್ಲಿಂ ಸಂಘಟನೆಗಳು ಸೇರಿದಂತೆ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.

Contact Your\'s Advertisement; 9902492681

ಪ್ರತಿಭಟನೆಯ ಮುಖ್ಯ ನೇತೃತ್ವವಹಿಸಿದ ಮಾಜಿ ಎನ್.ಇ.ಕೆಎಸ್.ಆರ್.ಟಿ.ಸಿ ಅಧ್ಯಕ್ಷ ಇಲಿಯಾಸ್ ಸೇಠ್ ಬಾಗ್ ಬಾನ್ ಮಾತನಾಡಿ, ದೇಶದಲ್ಲಿ ಮುಸ್ಲಿಂರಿಗೆ ‘ಜೈ ಶ್ರೀರಾಮ’ ಎಂದು ಘೋಷಣೆಗಳನ್ನು ಒತ್ತಾಯಿಸಲಾಗುತ್ತಿರುವುದು ಖಂಡನಿಯ ದೇಶದ ಸಂವಿಧಾನದ ಉಲ್ಲಂಘನೆಯಾಗುತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿ, ಈ ಮೂಲಕ ದೇಶದ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಅವರು ತಮ್ಮ ಅಸಮಧಾನ ಹೊರಹಾಕುವ ಮೂಲಕ ಮುಸ್ಲಿಂ ಮತ್ತು ದಲಿತರು ಸೇರಿದಂತೆ ಯಾವುದೇ ಸಮುದಾಯದ ಮೇಲೆ ಈ ರೀತಿಯ ದಬ್ಬಾಳಿಕೆ ಸಹಿಸಲಾಗದು ಎಂದರು.

ಇದೇ ಸಂದರ್ಭದಲ್ಲಿ ಜಮಾತೆ ಉಲ್ಮಾ ಹಿಂದ್ ಕಲಬುರಗಿ ಅಧ್ಯಕ್ಷ ಶರೀಫ್ ಮಜಹರಿ, ಜಮಾತೆ ಇಸ್ಲಾಮಿ ಅಧ್ಯಕ್ಷ ಜಾಕೀರ್ ಹುಸೇನ್, ತಾಮೀರ್ ಎ ಮಿಲತ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಗೊಲಾ, ನ್ಯಾಯವಾದಿ ವಾಹಾಜ್ ಬಾಬಾ, ನ್ಯಾಯವಾದಿ ಮಝರ್ ಹುಸೇನ್, ಸುನ್ನಿ ದಾವತೆ ಇಸ್ಲಾಮಿಯ ಅಧ್ಯಕ್ಷ ಮೌಲಾನ ಹಫೀಜ್ ಅಝರ್, ಎಸ್.ಡಿ.ಪಿ.ಐ ಕಲಬುರಗಿ ಘಟಕದ ಅಧ್ಯಕ್ಷ ಮಹ್ಮದ್ ಮೋಹಸಿನ್, ಇಮಾಮ್ ಕೌನ್ಸಿಲ್ ಸದಸ್ಯ ಮೌಲಾನಾ ಅತೀಕ್ ಉರ್ ರಹೇಮಾನ್ ಆಶ್ರಫಿ ಸೇರಿದಂತೆ ವಿವಿಧ ಸಮುದಾಯದ ಗಣ್ಯರು ಹಾಗೂ ಸಂಘಟನೆಯ ಸದಸ್ಯರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here