ವಚನ ದರ್ಶನ ಪ್ರವಚನ ಸಮಾರೋಪ

0
10

ಭಾಲ್ಕಿ: ಶ್ರಾವಣದಒಂದು ತಿಂಗಳು ಪರ್ಯಂತ ನಾವು ನೀವು ಕೂಡಿ ಶರಣರ ವಚನಗಳ ಚಿಂತನ, ಮಂಥನ ಮಾಡುವ ಮೂಲಕ ವಚನ ದರ್ಶನವನ್ನು ಮಾಡಿಕೊಂಡಿದ್ದೇವೆ. ಶರಣರು ನಡೆ-ನುಡಿ ಒಂದಾಗಿಸಿಕೊಂಡು ತಮಗೆಆದ ಅನುಭವಗಳನ್ನು ವಚನ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ವಚನಗಳಲ್ಲಿ ಅಡಗಿರುವ ತತ್ವಾದರ್ಶಗಳು ಶರಣರು ಸ್ವತಃ ಬದುಕಿದ್ದಾರೆ.

ಹಾಗಾಗಿ ನಾವು ಶರಣರ ಮಾರ್ಗದಲ್ಲಿ ಮುನ್ನಡೆಯಬೇಕಾದರೆ ವಚನಗಳಲ್ಲಿ ಹೇಳಿರುವ ಜೀವನ ಮೌಲ್ಯಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಶರಣರ ವಚನಗಳು ಬರೀ ಹೇಳುವ ಕೇಳುವುದಕ್ಕೆ ಸೀಮಿತವಾಗಿರದೇ ಅವು ಆಚರಣೆಯಲ್ಲಿತರುವಅವಶ್ಯಕತೆಇದೆ. ನಾವು ನಮ್ಮಜೀವನ ಸುಖಿ ಸಮಾಧಾನ ಮಾಡಿಕೊಳ್ಳಬೇಕಾದರೆ ನಡೆ-ನುಡಿ ಒಂದಾಗಿಸಿಕೊಳ್ಳಬೇಕು.

Contact Your\'s Advertisement; 9902492681

ನಾವು ಒಂದು ತಿಂಗಳ ಪರ್ಯಂತ ದಿನನಿತ್ಯ ವಚನಗಳಲ್ಲಿ ಅಡಗಿರುವಒಂದೊಂದು ತತ್ವಗಳನ್ನು ಸವಿಸ್ತಾರವಾಗಿ ತಿಳಿದುಕೊಂಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಅವುಗಳನ್ನು ನಮ್ಮಆಚರಣೆಯಲ್ಲಿತರುವ ಮೂಲಕ ನಮ್ಮಜೀವನದಲ್ಲಿ ಹೊಸ ಪರಿವರ್ತನೆಯನ್ನುಕಾಣಬೇಕು. ನಾವು ನಮ್ಮ ಬದುಕು ಪ್ರಸನ್ನತೆಯಿಂದ ಸಾಗಿಸಬೇಕು. ಜೀವನದಲ್ಲಿ ಕಷ್ಟ-ಸುಖ, ನೋವು-ನಲಿವು, ಮಾನ-ಅಪಮಾನ, ಸ್ತುತಿ-ನಿಂದೆ, ಹಾನಿ-ವೃದ್ಧಿ ಬಂದೇ ಬರುತ್ತದೆ. ಈ ಎಲ್ಲಾ ಪ್ರಸಂಗದಲ್ಲಿಯೂ ನಾವು ನಮ್ಮ ಮಾನಸಿಕ ತಾಳ್ಮೆಯನ್ನು ಕೇಡಿಸಿಕೊಳ್ಳದೇ ಸಮಚಿತ್ತವಾಗಿ ಬಾಳುವ ಬದುಕಿನಕಲೆಯನ್ನುಕಲಿಯಬೇಕು.

ವಚನ ಪಿತಾಮಹಡಾ.ಫ.ಗು.ಹಳಕಟ್ಟಿಯವರು ತಮ್ಮಇಡೀಆಯುಷ್ಯವನ್ನು ಮುಡುಪಾಗಿಟ್ಟು ವಚನ ಸಾಹಿತ್ಯದ ಸಂಶೋಧನೆ, ಸಂಪಾದನೆಯ ಪ್ರಕಟಣೆಯಲ್ಲಿ ಕಳೆದರು. ತಮ್ಮ ಆಸ್ತಿಯನ್ನು ಮಾರಾಟ ಮಾಡಿ ವಚನ ಗ್ರಂಥ ಪ್ರಕಟಿಸಿದರು. ವಚನಗಳ ಮೇಲೆ ಅವರುಇಟ್ಟಿರುವ ನಿಷ್ಠೆಯನ್ನು ನೋಡಿದರೆ ನಾವು ಬೆರಗಾಗುತ್ತೇವೆ. ಹಳಕಟ್ಟಿಯವರು ವಯಕ್ತಿಕಜೀವನದಲ್ಲಿದಾರಿದ್ರ್ಯವನ್ನು ಅನುಭವಿಸಿ ನಮಗೆ ವಚನಗಳ ಬೆಳಕನ್ನು ನೀಡಿದ್ದಾರೆ.

ಅವರತ್ಯಾಗ, ಅವರ ನಿಷ್ಠೆ ನಮಗೆ ಬರಬೇಕು. ಅವರಒಬ್ಬ ಮಗ ದೆಹಲಿಯಲ್ಲಿದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದನು. ಒಂದು ದಿವಸ ಕೆಲಕ್ಕೆ ಹೋಗುವಾಗ ದಾರಿ ಮಧ್ಯದಲ್ಲಿಅಪಘಾತವಾಗುತ್ತದೆ. ಅವನು ಸ್ಥಳದಲ್ಲಿಯೇ ಮೃತಪಡುತ್ತಾನೆ. ಆ ವಿಷಯವನ್ನು ಹಳಕಟ್ಟಿಯವರಿಗೆ ತಿಳಿಯುತ್ತದೆ. ಆಗ ಅವರುತಮ್ಮ ಸತಿಗೆ ಶಿವ ಕೊಟ್ಟ ಫಲ ಶಿವ ಕರೆದುಕೊಂಡು ಹೋದಅದಕ್ಕೆ ನಾವು ದುಃಖಿಸಬಾರದುಎಂದು ಹೇಳಿ ತಮ್ಮ ವಚನ ಸಂಶೋಧನೆಯಲ್ಲಿತೊಡಗುತ್ತಾರೆ. ಆ ಸಂದರ್ಭದಲ್ಲಿ ಅನೇಕ ವಿದ್ವಾಂಸರು, ಮಠಾಧೀಶರುಅವರ ಭೇಟಿಗೆ ಬಂದಾಗಅವರುತಮ್ಮ ಮಗನನ್ನು ಕಳೆದುಕೊಂಡ ದುಃಖವನ್ನು ಹೇಳದೆ ವಚನಗಳ ಬಗ್ಗೆಯೆಚರ್ಚೆ ಮಾಡುತ್ತಿದ್ದರು.

ಇಂತಹ ವಚನ ನಿಷ್ಠೆ ನಮ್ಮಲ್ಲಿ ಬರಬೇಕು. ವಚನಗಳಿಗಾಗಿ ೧೨ನೇ ಶತಮಾನದಲ್ಲಿ ಅನೇಕ ಶರಣರುತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಅನೇಕ ಸಾಹಿತ್ಯ ಸಂಶೋಧಕರು, ಮಠಾಧೀಶರು ವಚನಗಳ ಪ್ರಕಟಣೆಗಾಗಿ ಅವಿಶ್ರಾಂತವಾಗಿದುಡಿದಿದ್ದಾರೆ. ಅವರ ಶ್ರಮತ್ಯಾಗ ಬಲಿದಾನ ಸಾರ್ಥಕವಾಗಬೇಕಾದರೆ ನಾವು ನಮ್ಮಜೀವನ ವಚನ ಮಾರ್ಗದಂತೆ ರೂಪಿಸಿಕೊಳ್ಳಬೇಕು.

ನಮ್ಮಜೀವನ ಶರಣಜೀವನಆಗಬೇಕಾದರೆ ನಾವು ಸಂಸಾರ, ಮನೆ, ಹೊಲ, ಮಕ್ಕಳು ಬಿಡಬೇಕಾಗಿಲ್ಲ. ಸಂಸಾರದಲ್ಲಿದ್ದುಕೊಂಡೆ ಸದ್ಗತಿ ಪಡೆಯುವ ಮಾರ್ಗ ಶರಣರು ಹೇಳಿದ್ದಾರೆ. ಶರಣರುಎಲ್ಲವನ್ನುಇಟ್ಟುಕೊಂಡೇ ಲಿಂಗಾಂಗ ಸಾಮರಸ್ಯವನ್ನು ಪಡೆದಿದ್ದಾರೆ. ಅದಕ್ಕಾಗಿ ನಾವು ಸಂಸಾರದಲ್ಲಿದ್ದರುಇಲ್ಲದಹಾಗೆಇರಬೇಕು. ಕಮಲದ ಹೂ ಕೆಸರಲ್ಲಿಯೇ ಅರಳುತ್ತದೆ. ಆದರೂಅದುಕೆಸರಿಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ನಮ್ಮಜೀವನಇರಬೇಕು.

ನಾವು ನಮ್ಮ ಬುದ್ಧಿ ಸಿಟ್ಟಿನ ಕೈಯಲ್ಲಿಕೊಡಬಾರದು. ಸ್ವಲ್ಪ ತಾಳ್ಮೆ ಸಮಾಧಾನ, ಸಂತೃಪ್ತಿ, ಶಾಂತಿಯಿಂದ ಬದುಕಲು ಪ್ರಯತ್ನಿಸಬೇಕು. ನಮ್ಮಲ್ಲಿರುವಒಂದೊಂದು ಅವಗುಣಗಳನ್ನು ಕಳೆಯುತ್ತ ಸದ್ಗುಣಗಳನ್ನು ಪಡೆದುಕೊಳ್ಳಬೇಕು. ಈ ದಿಶೆಯಲ್ಲಿ ಮುನ್ನಡೆದರೆ ನಮ್ಮಜೀವನದೈ ವೀಜೀವನವಾಗುತ್ತದೆ. ಅದನ್ನು ವಿಶ್ವಗುರುಬಸವಣ್ಣನವರು ನಿಮ್ಮೆಲ್ಲರಿಗೆಕರುಣಿಸಲೆಂದು ಶುಭ ಹಾರೈಸಿ, ಈ ವರ್ಷದ ಶ್ರಾವಣ ಮಾಸದ ಪ್ರವಚನ ಮಂಗಲ ಮಾಡುತ್ತೇವೆ. ಎಲ್ಲರಿಗೂ ಶರಣು ಶರಣಾರ್ಥಿಗಳು.

ಪೂಜ್ಯಗುರುಬಸವ ಪಟ್ಟದ್ದೇವರು ದಿವ್ಯ ಸಮ್ಮುಖ ವಹಿಸಿದ್ದರು. ಪೂಜ್ಯ ನಿರಂಜನ ಮಹಾಸ್ವಾಮಿಗಳು ವಚನ ಗಾಯನ ಮಾಡಿದರು. ಪೂಜ್ಯ ಬಸವಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು. ಒಂದು ತಿಂಗಳು ಪರ್ಯಂತ ಪ್ರವಚನ ನಡೆಯಲಿಕ್ಕೆ ಸಹಕರಿಸಿದ ಎಲ್ಲಾ ವರದಿಗಾರರಿಗೆ ಹಾಗೂ ಸಹಕರಿಸಿದ ಎಲ್ಲರಿಗೆ ಪೂಜ್ಯರು ಆರ್ಶೀವದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here