ಶಹಾಪುರ: ಲಾರಿ ಮತ್ತು ಕಾರುಗಳ ಮಧ್ಯೆ ಮುಖಾಮುಖಿ ಕಾರಣ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಗಜೇಂದ್ರಗಡದ ಹತ್ತಿರ ಜರುಗಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟಿರುವ ಇಬ್ಬರು ಯುವಕರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದವರು ಎಂದು ತಿಳಿದು ಬಂದಿದೆ.ಮಲ್ಲಣಗೌಡ ತಂದೆ ನಿಂಗನಗೌಡ ಪೊಲೀಸ್ ಪಾಟೀಲ್ (18) ಹಾಗೂ ರಮೇಶ್ (21) ಮೃತ ದುರ್ದೈವಿಗಳು.
ಎಲ್ಲರೂ ಗೆಳೆಯರೊಂದಿಗೆ 6 ಜನ ಗೋವಾ ಪ್ರವಾಸಕ್ಕೆ ತೆರಳುತ್ತಿರುವಾಗ ಈ ದುರ್ಘಟನೆ ಜರುಗಿದೆ ಉಳಿದ ಇನ್ನುಳಿದ 4 ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ರೋದನ ಮುಗಿಲು ಮುಟ್ಟುವಂತಿತ್ತು ಗ್ರಾಮದಲ್ಲಿ ಸ್ತಬ್ಧ ವಾತಾವರಣ ನಿರ್ಮಾಣವಾಗಿದೆ.