ಶಹಾಬಾದ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಶನಿವಾರ ಮಾಲಗತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿಯನ್ನು ಉದ್ಘಾಟನೆ ಮಾಡಲಾಯಿತು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಜಿಲ್ಲಾ ಸಂಯೋಜಕ ಶರಣಪ್ಪ ವಸ್ತ್ರದ್ ಮಾತನಾಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ವತಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳು ನೂತನತಂತ್ರಜ್ಞಾನದ ಶಿಕ್ಷಣದ ಮೂಲಕ ಹೆಚ್ಚು ಕಲಿಯುವಂತಾಗಲು ಸ್ಮಾರ್ಟ ಕ್ಲಾಸ್ ನಡೆಸಲು ಅಗತ್ಯ ನೆರವನ್ನು ನೀಡುತ್ತಿದೆ. ಈ ಭಾಗದ ಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು.ಅಲ್ಲದೇ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಸಹಕರಿಸಿ, ಸ್ಮಾರ್ಟ ಕ್ಲಾಸ್‌ನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರಲ್ಲದೇ ಕಲ್ಯಾಣ ಕರ್ನಾಟಕ ವತಿಯಿಂದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಶಹಾಬಾದ-ವಾಡಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಕಾರ್ಯಕ್ರಮದ ಅಧ್ಯಕ್ಷv ವಹಿಸಿದ್ದರು. ತಾಲೂಕಾ ಸಂಯೋಜಕ ಮಲ್ಲಿಕಾರ್ಜುನ ಇಟಗಿ ಕಲ್ಯಾಣ್ ಕರ್ನಾಟಕದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶಕುಂತಲಾ ಬೆಳಗುಂದಿ, ಶರಣಪ್ಪ ಸಣಮೋ, ಚಂದ್ರಶೇಖರ್ ರಾವೂರ್, ಹಣಮಂತ ಬಾಳಕ್, ವಿಜಯಕುಮಾರ ಕಟ್ಟಿ, ಬಸಪ್ಪ ಮುಲಿಮನಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಬಸವರಾಜ ಬಾಳಕ್, ಸಿದ್ದು ಅಲ್ಲೂರ್, ತಾಲೂಕ ಸಂಯೋಜಕ ಸುನೀಲಕುಮಾರ ಗುಡೂರು, ರಮೇಶ ಸಾಹು, ಅಣವೀರಪ್ಪ ಬಾಳಿ, ಶಾಲೆಯ ಶಿಕ್ಷಕರ ವೃಂದ ದವರು ಇದ್ದರು. ಸೌಮ್ಯ ಜೋಷಿ ನಿರೂಪಿಸಿದರು.