ಆಳಂದ: ರಾಜ್ಯದಲ್ಲಿನ ಪಂಚಮಸಾಲಿ, ಗೌಡಲಿಂಗಾಯತ, ಮಲೆಗೌಡ ಹಾಗೂ ದೀಕ್ಷ ಲಿಂಗಾಯತ ಸಮುದಾಯ ಒಳಗೊಂಡು ೨ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕೂಡಲಸಂಗಮ ಲಿಂಗಾಯತ್ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡ ಪ್ರತಿಜ್ಞಾ ಪಂಚಾಯತ ಅಭಿಯಾನವು ಪಟ್ಟಣಕ್ಕೆ ಸೆ. ೧೨ರಂದು ಆಗಮಿಸಲಿದೆ.
ಈ ಕುರಿತು ಪಟ್ಟಣದಲ್ಲಿ ಹೇಳಿಕೆ ನೀಡಿರುವ ಲಿಂಗಾಯತ ಪಂಚಮಸಾಲಿ ತಾಲೂಕು ಯುವ ಘಟಕದ ಅಧ್ಯಕ್ಷ ಆನಂದ ಎಸ್. ದೇಶಮುಖ ಅವರು ತಿಳಿಸಿದ್ದಾರೆ.
ಅಭಿಯಾನ ಆಗಮಿಸಿದ ಬಳಿಕ ಸ್ವಾಗತಿಸಿಕೊಂಡು ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಸಂಜೆ ೬:೦೦ಗಂಟೆಗೆ ನಡೆಯುವ ಸಮಾರಂಭದಲ್ಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡುವರು.
ಮುಖ್ಯ ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಹಾಲಿ ಶಾಸಕ ಬಸವರಾಜ ಪಾಟೀಲ ಯತ್ನಾಳ, ಮಾಜಿ ಶಾಸಕ ವಿಜಯನಂದ ಕಾಶಪ್ಪನವರ, ಮಾಜಿ ಸಚಿವ ವಿನಯಕುಲರ್ಕರ್ಣಿ ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರತಿಜ್ಞಾ ಪಂಚಾಯತ್ ಮಹಾ ಅಭಿಯಾನವು ಕಳೆದ ಅ೨೬ರಂದು ಆರಂಭಗೊಂಡು ರಾಜ್ಯದ ಪ್ರಮುಖ ಜಿಲ್ಲೆ ಹಾಗೂ ತಾಲೂಕುಗಳಿಗೆ ತೆರಳಿ ಜನ ಜಾಗೃತಿಯಿಂದ ಸಾಗಿ ಆಕ್ಟೋಬರ್ ೧ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ವರೆಗೆ ನಡೆಯಲಿದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮೀಸಲಾತಿ ನೀಡುವ ಕುರಿತು ಭರವಸೆ ನೀಡದಂತೆ ಈಗಿನ ಮುಖ್ಯಮಂತ್ರಿಗಳು ಮೀಸಲಾತಿಯನ್ನು ಪ್ರಕಟಸಬೇಕು ಎಂದು ಒತ್ತಾಯಿಸಿ ಈ ಪ್ರತಿಜ್ಞಾನ ಪಂಚಾಯತ್ ಮಹಾಭಿಯಾನವನ್ನು ನಡೆಯುತ್ತಿದೆ. ಪಂಚಮಸಾಲಿ, ದೀಕ್ಷ, ಗೌಡಲಿಂಗಾಯತ ಹಾಗೂ ಮಲೇಗೌಡ ಲಿಂಗಾಯತ ಒಂದೇ ಆಗಿದ್ದು, ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲ್ಪಟ್ಟಿದ್ದು, ಈ ಎಲ್ಲರೂ ಮಹಾಭಿಯಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.