ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿನ ಶ್ರೀ ಅಕ್ಕನಾಗಮ್ಮನವರ ಶ್ರೀಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುವ ಜಾತ್ರೆ ಕಾರ್ಯಕ್ರಮದ ಅಂಗವಾಗಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಶಪಥ ಭಜನೆಯನ್ನು ನಡೆಸಲಾಗಿತ್ತು.ಅಲ್ಲದೆ ಶನಿವಾರ ಮುಂಜಾನೆ ಪುರವಂತರ ಮಹಾಸೇವಾ ಕಾರ್ಯಕ್ರಮವನ್ನು ನಡೆಸಲಾಯಿತು.
ಪುರವಂತರ ಮಹಾಸೇವಾ ಕಾರ್ಯಕ್ರಮದ ಸಂದರ್ಭದಲ್ಲಿ ಭಕ್ತಿಯಿಂದ ಪುರವಂತನೊಬ್ಬ ೧೦೮ ಅಡಿ ಉದ್ದನೆಯ ಜನಿವಾರ ಶಸ್ತ್ರವನ್ನು ಚುಚ್ಚಿಕೊಳ್ಳುವ ಮೂಲಕ ಭಕ್ತಿಯನ್ನು ಮೆರೆದರು.ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಹಾಗು ಸುತ್ತಮುತ್ತಲ ಗ್ರಾಮಗಳ ಜನರು ಭಾಗವಹಿಸಿ ಪುರವಂತರ ಮಹಾಸೇವೆಯನ್ನು ಕಂಡು ರೋಮಾಂಚನಗೊಂಡರು.
ಈ ಸಂದರ್ಭದಲ್ಲಿ ಶ್ರೀಮಠದ ದೇವಿಂದ್ರಪ್ಪ ಮುತ್ಯಾ,ಮುಖಂಡರಾದ ವೆಂಕೋಬ ದೊರೆ,ಶ್ರೀನಿವಾಸ ದೊರೆ,ಹಣಮಂತ್ರಾಯ ಹೊಸ್ಮನಿ,ಮಹಾದೇವಪ್ಪ ಬೊಮ್ಮನಹಳ್ಳಿ,ಬಸವರಾಜ ಮಾಲಿಪಾಟೀಲ್,ಶರಣಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಗ್ರಾಮದ ಅನೇಕ ಜನ ಗಣ್ಯಮಾನ್ಯರು ಭಾಗವಹಿಸಿದ್ದರು.