ಶಹಾಬಾದ:ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಮಲ್ಲಣಪ್ಪ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರುವಾರ ಶ್ರಾವಣಮಾಸದ ಮಂಗಲೋತ್ಸವ ಕಾರ್ಯಕ್ರಮದ ಧರ್ಮಸಭೆ ನಡೆಯಿತು.
ಸಾನಿಧ್ಯ ವಹಿಸಿ ಮಾತನಾಡಿದ ಚಿತ್ತಾಪೂರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಇಸ್ಲಾಂ ಧರ್ಮಿಯರಿಗೆ ರಮಜಾನ್ ಪವಿತ್ರ ಮಾಸವಾದರೆ, ಶ್ರಾವಣ ಮಾಸವು ಹಿಂದುಗಳಿಗೆ ಪವಿತ್ರವಾದ ಮಾಸವಾಗಿದೆ.ಈ ಮಾಸದ ಆಚರಣೆ ಮಾಡುವ ಮೂಲಕ ಮನಕ್ಕೆ ಚೈತನ್ಯ, ಸ್ಪೂರ್ತಿ ಹಾಗೂ ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಎನ್.ಇ.ಕೆ.ಆರ್.ಟಿ.ಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ಶರಣರು ನೆಲಸಿರುವ ಪವಿತ್ರ ಸ್ಥಳವಾಗಿದೆ. ಭಾವೈಕ್ಯತೆಗೆ ಹೆಸರಾದ ಈ ಪೀಠವು ಸರ್ವಜನಾಂಗದ ಶಾಂತಿಯ ತೋಟವಾಗಿದೆ.ಇಲ್ಲಿನ ಮಲ್ಲಣ್ಣಪ್ಪ ಸ್ವಾಮಿಗಳು ಭಕ್ತರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದು ನೋಡಿದರೇ ಸಂತಸ ವ್ಯಕ್ತವಾಗುತ್ತದೆ ಎಂದರು.
ದೇವಣಗಾಂವನ ರೇಣುಕ ಶಿವಾಚಾರ್ಯರು, ಸೂಗೂರು(ಕೆ)ನ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವೇದಿಕೆಯ ಮೇಲಿದ್ದರು.
ಐನಾಪೂರ ಮಲ್ಲಿಕಾರ್ಜುನ ಶಾಸ್ತ್ರೀ, ಕೃ? ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ರಾಜ್ಯ ಟೋಕರೆ ಕೋಲಿ ಕಬ್ಬಲಿಗ ಅಧ್ಯಕ್ಷ ಬಸವರಾಜ ಹರವಾಳ, ಮಾಜಿ ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್ ತೊನಸನಹಳ್ಳಿ(ಎಸ್) ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ ಗಂಗಬೋ, ಶಹಾಬಾದ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೀಕಾರ್, ವಾಡಿ ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಬೊಮ್ಮನಳ್ಳಿ, ಮಡಿವಾಳಪ್ಪ ನರಬೋಳಿ, ಚಂದ್ರಕಾಂತ ಸಂಗಾವಿ, ಹೊನಗುಂಟಾ ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕೊಡಸಾ, ಶಹಾಬಾದ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ವಕೀಲರಾದ ರಘುವೀರಸಿಂಗ್ ಠಾಕೂರ,ನಿಂಗಣ್ಣ ಗೌಡ ಮಾಲಿ ಪಾಟೀಲ್, ಶಿವಲಿಂಗಪ್ಪ ಗೋಳೆದ, ಮಹಾದೇವ ಬಂದಳ್ಳಿ, ಸಿದ್ರಾಮಪ್ಪ ದಂಡೋತಿ,ಶಿವಾನಂದ ದಂಡಪಗೋಳ, ಅಣವೀರ ಯಾಕಾಪೂರ,ಮಲ್ಲಿಕಾರ್ಜುನ ಗೊಳೇದ್, ವಿರೇಶ ಗೊಳೇದ್,ಬಸವರಾಜ ಬೊಮ್ಮಶೆಟ್ಟಿ, ಶಿವಶರಣಪ್ಪ ಪೋಲೀಸ್ ಪಾಟೀಲ್, ಚಂದ್ರಶೇಖರ್ ಕೋಟಾರಗಸ್ತಿ,ರೇವಣಸಿದ್ದಪ್ಪ ಹಲಚೇರಿ, ಗುರುನಾಥ ಜುಲ್ಪಿ ಕಿರಣಗಿ,ಸದಾನಂದ ಕುಂಬಾರ, ಸಂಗು.ಎಸ್. ಇಂಗಿನ್, ರಾಜೇಶ್ ಯನಗುಂಟಿಕರ, ದತ್ತಾತ್ರೇಯ ವಿಶ್ವಕರ್ಮ, ಮಡಿವಾಳಪ್ಪ ನರಬೋಳಿ,
ನಾಗೇಂದ್ರ.ಸಿ.ನಾಟೀಕಾರ್,ಬೆಳ್ಳೆಪ್ಪ ಖಣದಾಳ,ಮಹಾಲಿಂಗ ಮದ್ದರಕಿ ಸಿದ್ದು ಸಜ್ಜನಶೆಟ್ಟಿ,ಆಂಜನೇಯ ಜೀವಣಿಗಿ,ದೇವಿಂದ್ರಪ್ಪ ಯಲಗೋಡ, ಕಾಶಣ್ಣ ಸಂಗಾವಿ, ಪ್ರಭು ಸೀಬಾ, ಸಂಗಣ್ಣ ಬುಟನಾಳ, ಶಿವರಾಯ ಮರತೂರ ಭಾಗವಹಿಸಿದ್ದರು. ಅಶೋಕ ನಾಟೀಕಾರ್ ನಿರೂಪಿಸಿದರು, ಪರಮಾನಂದ ಯಲಗೋಡಕರ್ ವಂದಿಸಿದರು.