ಕಲಬುರಗಿ ಜನ ಕೋಮುವಾದಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ: ಅಲ್ಲಮಪ್ರಭು ಪಾಟೀಲ್

0
26

ಕಲಬುರಗಿ: ಶೇಕಡಾವಾರು ಮತದಾನದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ನೀಡಿ, ಕೋಮುವಾದಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಜನರು ಕಾಂಗ್ರೆಸ್ ಪಕ್ಷವನ್ನೇ 27 ಸ್ಥಾನ ಗೆಲ್ಲಿಸುವ ಮೂಲಕ ಮತದಾರ ಪ್ರಭುಗಳು ಬಹುಮತ ನೀಡಿ, ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ ಎಂದರು.

Contact Your\'s Advertisement; 9902492681

ಬಿಜೆಪಿಯೇ ಅಧಿಕಾರಕ್ಕೆ ಬರುವುದಲ್ಲದೆ ನಾವೇ ಮೇಯರ್ ಎಂದು ಬೀಗುತ್ತಿದೆ, ಅವರಿಗಿಂತ ನಾವೇ 4 ಸ್ಥಾನಗಳು ಮುಂದಿದ್ದೇವೆಂದು ಅವರಿಗೆ ಲೆಕ್ಕಾಚಾರ ಗೊತ್ತಿಲ್ಲ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದರು.

ಪಕ್ಷದ ಸೈದ್ಧಾಂತಿಕ ಪ್ರಕಾರವಾಗಿ ಜೆಡಿಎಸ್ ಮೈತ್ರಿಯೊಂದಿಗೆ ಕಾಂಗ್ರೆಸ್ ಪಕ್ಷವು ಪಾಲಿಕೆ ಅಧಿಕಾರ ಹಿಡಿಯಲಿದೆ ಎಂದು ಅಲ್ಲಮ ಪ್ರಭು ಪಾಟೀಲ್ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್, ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಸೇರಿದಂತೆ ಮತ್ತಿತರರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಿಂದ ಪಾಲಿಕೆಗೆ ನೂತನ ಸದಸ್ಯರಾಗಿ ಆಯ್ಕೆಯಾದ ಪುತಲಿ ಬೇಗಂ, ಅಬ್ದುಲ್ ಹಮೀದ್, ರಿಯಾಜ್ , ಹೀನಾ ಬೇಗಂ, ಪ್ರಕಾಶ್ ಹಣಮಂತ್, ತಹಸೀನ್ ಬೇಗಂ, ನಜ್ಮಾ ಬೇಗಂ, ಆಯಾಜ್ ಖಾನ್ ಸೇರಿದಂತೆ 27 ಸದಸ್ಯರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಮಾಜಿ ಸಚಿವ ಹಾಗೂ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್, ಲೋಕಸಭಾ ಮಾಜಿ ಸದಸ್ಯ ಐ. ಜಿ ಸನದಿ, ಶಾಸಕಿ ಕನೀಜ್ ಫಾತೀಮಾ, ಬಿ. ಆರ್ ಪಾಟೀಲ್, ಬಾಬುರಾವ್ ಜಗೀರದಾರ್, ರಾಜಗೋಪಾಲ್ ರೆಡ್ಡಿ, ಮಜರ್ ಅಲಿ, ಡಾ. ಭೀಮಾಶಂಕರ್ ಬಿಲಗುಂದಿ, ಬಸವರಾಜ್ ಭೀಮಳ್ಳಿ, ಶರಣ್ಕುಮಾರ್ ಮೋದಿ, ಡಾ. ಕಿರಣ ದೇಶಮುಖ್, ಸಂತೋಷ್ ಪಾಟೀಲ್ ಧನ್ನೂರ್, ಈರಣ್ಣ ಝಳಕಿ, ಲತಾ ರವಿ ರಾಥೋಡ್, ವಾಣಿ ಸಗರ ಕರ್ ಸೇರಿದಂತೆ ನಗರ ಹಾಗೂ ಜಿಲ್ಲೆಯ ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here